Wednesday, January 22, 2025

ಅಂಬಿ ಋಣ ತೀರಿಸೋಕೆ ಧೀರ ರಾಕ್​ಲೈನ್ ​ಪ್ಲಾನ್

ರಾಜ್- ವಿಷ್ಣು- ಅಂಬಿ ಹೇಗೆ ಚಂದನವನದ ತ್ರಿಮೂರ್ತಿಗಳೋ, ಅದೇ ರೀತಿ ಅಂಬಿ-ರಾಕ್​ಲೈನ್-ದೊಡ್ಡಣ್ಣ ಕೂಡ ಪ್ರಾಣ ಸ್ನೇಹಿತರು. ಅದ್ರಲ್ಲೂ ರೆಬೆಲ್​ಸ್ಟಾರ್ ಜೊತೆ ರಾಕ್​ಲೈನ್ ರಕ್ತ ಹಂಚಿಕೊಂಡು ಹುಟ್ಟಲಿಲ್ಲವಾದ್ರೂ, ಅವ್ರ ಸ್ನೇಹ ರಕ್ತಸಂಬಂಧ ಮೀರಿದ್ದು. ಇದೀಗ ಆ ಗೆಳೆತನದ ಋಣ ತೀರಿಸೋಕೆ ಪ್ಯಾನ್ ಇಂಡಿಯಾ ಪ್ರೊಡ್ಯೂಸರ್ ಮಾಸ್ಟರ್​ಪ್ಲಾನ್ ಮಾಡಿದ್ದಾರೆ.

  • ದಿಗ್ಗಜರು ಸ್ನೇಹದ ಪ್ರತೀಕ AA-04ಗೆ ಹಣ ಹೂಡಿಕೆ
  • ಪೈಲ್ವಾನ್ ಕೃಷ್ಣರ ಕಾಳಿಗೂ ಮುನ್ನ ಅಯೋಗ್ಯ ಸಾರಥಿ ಚಿತ್ರ
  • ಕೊನೆ ಹಂತದಲ್ಲಿ ಸುಕ್ಕಾ ಸೂರಿಯ ಬ್ಯಾಡ್ ಮ್ಯಾನರ್ಸ್​..!

ಕನ್ನಡ ಚಿತ್ರರಂಗದ ಜೊತೆಗೆ ಸೌತ್ ಹಾಗೂ ಬಾಲಿವುಡ್​ನಲ್ಲಿ ಬಹುದೊಡ್ಡ ಹೆಸ್ರು ಮಾಡಿರೋ ಧೀರ ರಾಕ್‌ಲೈನ್ ವೆಂಕಟೇಶ್‌ ಹಾಗೂ ನಮ್ಮ ರೆಬೆಲ್‌ ಸ್ಟಾರ್ ಅಂಬರೀಶ್ ಅವ್ರ ಬಾಂಧವ್ಯ ಅಜರಾಮರ. ಇವರಿಬ್ರೂ ಒಂದೇ ತಾಯಿಯ ಹೊಟ್ಟೆಯಲ್ಲಿ ಹುಟ್ಟಲಿಲ್ಲವಷ್ಟೇ. ರಕ್ತಸಂಬಂಧ ಮೀರಿದ ಗೆಳೆತನ ಇವ್ರದ್ದು. ಅಂಬಿ ಕೊನೆ ಉಸಿರಿರೋವರೆಗೂ ಅವ್ರ ಜೊತೆಗಿದ್ರು ರಾಕ್‌ಲೈನ್ ವೆಂಕಟೇಶ್‌. ಅಂಬಿ, ರಾಕ್‌ಲೈನ್‌, ದೊಡ್ಡಣ್ಣ ಇಂಡಸ್ಟ್ರಿಯ ತ್ರಿಮೂರ್ತಿಗಳಂತೆ ಇದ್ದಿದ್ದು ಎಲ್ರಿಗೂ ಗೊತ್ತೇಯಿದೆ.

ಅಂಬರೀಶ್ ಜೊತೆ ಅಣ್ಣನ ಬಾಂಧವ್ಯ ಮಾತ್ರವಲ್ಲದೆ, ಅವರೊಟ್ಟಿಗೆ ತೆರೆ ಕೂಡ ಹಂಚಿಕೊಂಡಿದ್ರು ನಿರ್ಮಾಪಕ ಕಮ್ ನಟ ರಾಕ್​ಲೈನ್ ವೆಂಕಟೇಶ್. ಅವ್ರಿಗೆ ಸಿನಿಮಾ ಕೂಡ ನಿರ್ಮಿಸಿದ್ರು. ಆ ಪೈಕಿ ಮೊದಲನೇ ಸ್ಥಾನದಲ್ಲಿ ನಿಲ್ಲೋದೇ ದಿಗ್ಗಜರು ಸಿನಿಮಾ. ನಿಜ ಜೀವನದ ಸ್ನೇಹಿತರಿಬ್ಬರನ್ನ ತೆರೆ ಮೇಲೂ ಜೊತೆಗೂಡಿಸಿ ಸೈ ಎನಿಸಿಕೊಂಡವರು ರಾಕ್‌ಲೈನ್. ಸ್ನೇಹ ಅಂದ್ರೆ  ಸಾಕು ನೆನಪಾಗೋದು ಅಂಬಿ- ವಿಷ್ಣು ಅವ್ರ ಕುಚಿಕು ಕುಚಿಕು ಸಾಂಗ್.

ಅಂಬರೀಶ್ ಮತ್ತು ರಾಕ್‌ಲೈನ್ ವೆಂಕಟೇಶ್​ರ ನಿಷ್ಕಲ್ಮಶ ಸ್ನೇಹ, ಬಾಂಧವ್ಯದ ಬಗ್ಗೆ ಮಾತನಾಡ್ಬೇಕು ಅಂದ್ರೆ ಸಾಕಷ್ಟು ವಿಷಯಗಳಿವೆ. ಸಡನ್ ಆಗಿ ಅವರಿಬ್ಬರ ಬಗ್ಗೆ ಯಾಕೆ ಮಾತಾಡ್ತಿದ್ದೀವಿ ಅಂದ್ಕೊಂಡ್ರಾ..? ಅದಕ್ಕೊಂದು ಮುಖ್ಯ ಕಾರಣವಿದೆ. ಅದೇನಪ್ಪಾ ಅಂದ್ರೆ, ಅಂಬರೀಶ್‌ಗೆ ಯಾವಾಗ್ಲೂ ಬಲಗೈ ಬಂಟನಂತಿದ್ದ ರಾಕ್‌ಲೈನ್ ವೆಂಕಟೇಶ್‌, ಅಬಿಷೇಕ್ ಅಂಬರೀಶ್‌ಗೆ ಸಿನಿಮಾ ನಿರ್ಮಾಣ ಮಾಡ್ತಿದ್ದಾರೆ.

ಸದ್ಯ ಸುಕ್ಕಾ ಸೂರಿ ಜೊತೆ ಬ್ಯಾಡ್‌ ಮ್ಯಾನರ್ಸ್‌ ಸಿನಿಮಾ ಮಾಡ್ತಿರೋ ಅಭಿಷೇಕ್ ಅಂಬರೀಶ್‌, ಕೃಷ್ಣ ನಿರ್ದೇಶನದ ಕಾಳಿ ಸಿನಿಮಾಗೂ ಓಕೆ ಎಂದಿದ್ದಾರೆ ಅದು ಅಭಿಗೆ ಮೂರನೇ ಪ್ರಾಜೆಕ್ಟ್ ಆಗಲಿದೆ. ಅದ್ರ ಹೊರತಾಗಿ ರಾಕ್‌ಲೈನ್‌ ವೆಂಕಟೇಶ್‌ ಬ್ಯಾನರ್​ಗೂ ಕಾಲ್‌ಶೀಟ್‌ ಕೊಟ್ಟಿರೋ ಅಭಿಷೇಕ್, ಹೊಸ ಚಿತ್ರದ ಮುಹೂರ್ತಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

ರಾಕ್​ಲೈನ್ ಪ್ರೊಡ್ಯೂಸ್ ಮಾಡ್ತಿರೋ ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ಸಿನಿಮಾ ಇದೇ ಆಗಸ್ಟ್ 29ಕ್ಕೆ ಅಫಿಶಿಯಲಿ ಸೆಟ್ಟೇರಲಿದೆ. ಅದನ್ನ ಅಯೋಗ್ಯ ಹಾಗೂ ಮದಗಜ ಫೇಮ್ ಮಹೇಶ್ ಕುಮಾರ್ ಡೈರೆಕ್ಟ್ ಮಾಡ್ತಿದ್ದಾರೆ. ಯೋಗ್ರಾಜ್ ಭಟ್ರ ಬಳಗದ ನಿರ್ದೇಶಕನಾಗಿರೋ ಮಹೇಶ್‌ ಮೂರನೇ ಚಿತ್ರ ಇದಾಗಲಿದ್ದು, ಪ್ರೀ ಪ್ರೊಡಕ್ಷನ್ ಕಾರ್ಯಗಳು ಭರದಿಂದ ಸಾಗ್ತಿವೆ.

ಈ ಹಿಂದೆ ಮಹೇಶ್‌ ಈ ಸಿನಿಮಾದ ಫಸ್ಟ್‌ ಲುಕ್‌ ರಿಲೀಸ್ ಮಾಡಿದ್ರು. AA04 ಎಂದು ವರ್ಕಿಂಗ್‌ ಟೈಟಲ್‌ ಕೂಡ ಫೈನಲ್ ಮಾಡಿದ್ರು. ಆಗ ಈ ಸಿನಿಮಾದ ನಿರ್ಮಾಪಕರು ಯಾರು ಅನ್ನೋ ಪ್ರಶ್ನೆಗೆ ಉತ್ತರ ಸಿಕ್ಕಿರಲಿಲ್ಲ. ಈಗ ಅದೆಲ್ಲಕ್ಕೂ ಸ್ಪಷ್ಟನೆ ಸಿಕ್ಕಿದೆ. ಫಾರ್ ದಿ ಫಸ್ಟ್ ಟೈಮ್‌ ರಾಕ್‌ಲೈನ್ ವೆಂಕಟೇಶ್ ಅಭಿಷೇಕ್ ಅಂಬರೀಶ್‌ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ. ಹೋಮ್ ಬ್ಯಾನರ್​ ರೀತಿ ಈ ಸಿನಿಮಾ ಬಹಳ ರಿಚ್ ಆಗಿ ಮೂಡಿಬರಲಿದ್ದು, ಹೆಸರಿಡದ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಮೂಡಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES