Monday, December 23, 2024

ವಿಶ್ವವಿಖ್ಯಾತ ನಂದಿಗಿರಿಧಾಮಕ್ಕೆ ಹರಿದು ಬಂದ ಪ್ರವಾಸಿಗರ ದಂಡು

ಚಿಕ್ಕಬಳ್ಳಾಪುರ : ವೀಕೆಂಡ್​​ನಲ್ಲಿ ವಿಶ್ವವಿಖ್ಯಾತ ನಂದಿಗಿರಿಧಾಮಕ್ಕೆ ಮುಂಜಾನೆಯ ನಂದಿಬೆಟ್ಟದ ನೈಸರ್ಗಿಕ ಸೊಬಗಿಗೆ ಜನ ಮಾರುಹೋದರು.

ವೀಕೆಂಡ್​​ನಲ್ಲಿ ಗಿರಿಯ ಮುಂಜಾನೆಯ ಸೊಬಗು ಸವಿಯಲು ಪ್ರವಾಸಿಗರು ದೌಡಾಯಿಸಿದ್ದು, ಮುಂಜಾನೆಯ ಮಂಜಿನ ಸೋನೆಯಲ್ಲಿ ನೆಂದು ಪ್ರವಾಸಿಗರು ಎಂಜಾಯ್ ಮಾಡಿದ್ದಾರೆ. ಬೆಳಗಿನ ಜಾವದಲ್ಲೇ ನಂದಿಗಿರಿಗೆ ಜನ ಹರಿದು ಬಂದಿದ್ದು, ಮಂಜಿನ ಹನಿಗಳ ಆಹ್ಲಾದರ ವಾತಾವರಣದಲ್ಲಿ ಪ್ರವಾಸಿಗರು ಮಿಂದೆದ್ದರು.

ಇನ್ನು,ಮಂಜಿನ ಮುಸುಕಿಗೆ ಸೂರ್ಯೋದಯ ಕಾಣದೇ ಪ್ರವಾಸಿಗರು ಬೇಸರವಾಗಿದ್ದು, ನಂದಿಬೆಟ್ಟದ ನೈಸರ್ಗಿಕ ಸೊಬಗಿಗೆ ಜನ ಮಾರುಹೋದರು. ಅದಲ್ಲದೇ ತಮ್ಮ ನೆಚ್ಚಿನವರ ಜೊತೆ ಹೆಜ್ಜೆ‌ ಹಾಕಿ ಸಂಭ್ರಮಿಸಿದರು.

RELATED ARTICLES

Related Articles

TRENDING ARTICLES