Wednesday, January 22, 2025

ಗಜಪಡೆಗೆ ಶೂ ಧರಿಸಿ ಪೂಜೆ ಸಲ್ಲಿಸಿದ ಅರಣ್ಯ ಸಚಿವ ಉಮೇಶ್ ಕತ್ತಿ

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭಗೊಂಡಿದ್ದು, ನಾಗರಹೊಳೆಯ ಹೆಬ್ಬಾಗಿಲು ವೀರನಹೊಸಹಳ್ಳಿಯಲ್ಲಿ ಗಜಪಯಣಕ್ಕೆ ಚಾಲನೆ ನೀಡಲಾಯಿತು.

ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆಗೆ ಪೂಜೆ ಸಲ್ಲಿಸಿ ಗಜಪಯಣಕ್ಕೆ ಎಸ್​.ಟಿ ಸೋಮಶೇಖರ್ ಚಾಲನೆಯನ್ನು ನೀಡಿದರು. ಆದರೆ ಗಜಪಡೆಗಳಿಗೆ ಪೂಜೆ ಸಲ್ಲಿಸುವ ವೇಳೆ ಪ್ರತಿಯೊಬ್ಬರು ಶೂ, ಚಪ್ಪಲಿ ಬಿಟ್ಟು ಪೂಜೆ ಮಾಡಿದರೆ, ಅರಣ್ಯ ಸಚಿವ ಉಮೇಶ್ ಕತ್ತಿ ಅವರು ಶೂ ಧರಿಸಿದಕ್ಕೆ ಆಸ್ತಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಭಿಮನ್ಯು, ಗೋಪಾಲ ಸ್ವಾಮಿ ಮಹೇಂದ್ರ, ಅರ್ಜುನ, ಭೀಮ, ಧನಂಜಯ, ಕಾವೇರಿ, ಚೈತ್ರ, ಲಕ್ಷ್ಮಿ ಗಜಪಯಣದಲ್ಲಿರುವ ಆನೆಗಳು. ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆಗೆ ಪೂಜೆ ಸಲ್ಲಿಸಿ ಮೈಸೂರಿಗೆ ಜಿಲ್ಲಾಡಳಿತ ಬರಮಾಡಿಕೊಂದೆ. ಇನ್ನು, ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ ಕಾಡಿನಿಂದ ನಾಡಿಗೆ 9 ಆನೆಗಳು ಬಂದಿದೆ.

ಇನ್ನು, ದಸರಾದಲ್ಲಿ 14 ಆನೆಗಳು ಭಾಗಿಯಾಗಲಿದ್ದು, ಮೊದಲ ತಂಡದಲ್ಲಿ 9 ಆನೆಗಳು, ಎರಡನೇ ತಂಡದಲ್ಲಿ 5 ಆನೆಗಳು ಭಾಗಿಯಾಗಲಿದೆ. ಕೋವಿಡ್‌ನಿಂದ ಕಳೆದೆರಡು ವರ್ಷಗಳಿಂದ ಸರಳವಾಗಿ ಆಚರಣೆಯಾದ ದಸರಾ ಮಹೋತ್ಸವ ಈ ಬಾರಿ ಅದ್ಧೂರಿಯಾಗಿ ಆಚರಿಸಲಾಗುತ್ತಿದೆ.

RELATED ARTICLES

Related Articles

TRENDING ARTICLES