Sunday, May 19, 2024

ಕ್ರೀಡಾ ಸಚಿವರಿಗೆ ಆಟ. ಕೇಳೋರ್ಯಾರು ಅಥ್ಲೀಟ್‌ಗಳ ಗೋಳಾಟ..!?

ಬೆಂಗಳೂರು : ಕಂಠೀರವ ಸ್ಟೇಡಿಯಂನಲ್ಲಿ ಪ್ರಾಕ್ಟೀಸ್‌ಗೆ ತೆರಳುವ ಅಥ್ಲೀಟ್‌ಗಳ ಭವಿಷ್ಯ ಅತಂತ್ರಕ್ಕೆ ಸಿಲುಕ್ತಾ ಇದೆ.. ಸಾಧಾರಣ ಮಳೆಗೆಲ್ಲಾ ಕಂಠೀರವ ಸ್ಟೇಡಿಯಂ ಜಲಾವೃತಗೊಳ್ತಿದೆ. ಖೇಲೋ ಇಂಡಿಯಾಗಾಗಿ ಸುಮಾರು 5.80 ಕೋಟಿ ಖರ್ಚು ಮಾಡಿ ಅಳವಡಿಸಿದ್ದ ಸಿಂಥೆಟಿಕ್ ಟ್ರ್ಯಾಕ್, ಐದಾರು ವರ್ಷ ಬಾಳಿಕೆ ಬರಬೇಕಿತ್ತು. ಆದ್ರೆ, ಒಂದೇ ಮಳೆಗೆ ಹಾಳಾಗಿ, ಮೇಲ್ಮೈ ಭಾಗ ಕಿತ್ತು ಬರ್ತಿದೆ. ಅಮೆರಿಕದಿಂದ ಇದನ್ನು ತರಿಸಿದ್ವಿ ಅಂತಾ ಕ್ರೀಡಾ ಸಚಿವ ನಾರಾಯಣಗೌಡ ಪೋಸ್ ಕೊಟ್ಟಿದ್ರು‌. ಈಗ ಇದಕ್ಕೇನಂತಾರೋ ಗೊತ್ತಿಲ್ಲ. ಕ್ರೀಡಾಪಟುಗಳಂತೂ ಮಳೆಗಾಲದಲ್ಲಿ ಕಂಠೀರವ ಸ್ಟೇಡಿಯಂ ಸಹವಾಸವೇ ಬೇಡ ಅಂತಿದ್ದಾರೆ.

ಕಳೆದ ನಲವತ್ತು ದಿನಗಳ ಹಿಂದೆ ನಡೆದ ಖೇಲೋ ಇಂಡಿಯಾಗಾಗಿ ಸುಮಾರು 35 ಕೋಟಿ ಖರ್ಚು ಮಾಡಲಾಗಿತ್ತು. ಕ್ರೀಡಾಂಗಣದ ಒಳಗೆ ರಸ್ತೆ, ಸ್ಯಾನಿಟರಿಗಾಗಿ ಖರ್ಚು ಮಾಡಲಾಗಿದ್ದ ಕೋಟ್ಯಂತರ ರೂಪಾಯಿ ನೀರಿನಲ್ಲಿ ಹೋಮ ಮಾಡಿದಂತಾಗಿದೆ. ಚರಂಡಿಯನ್ನು ಅದೇನ್ ರಿಪೇರಿ ಮಾಡಿದ್ದಾರೋ ಏನೋ. ಮಳೆ ನೀರು ಮೈದಾನದಲ್ಲೇ ನಿಲ್ತಾ ಇದೆ. ರಸ್ತೆಗೆ ಹಾಕಲಾಗಿದ್ದ ಟಾರ್ ಕೊಚ್ಚಿ ಹೋಗಿ, ಜಲ್ಲಿಕಲ್ಲುಗಳು ಮಾತ್ರ ಉಳಿದಿವೆ. ಮೊನ್ನೆ ಪ್ರಾಕ್ಟೀಸ್‌ಗೆ ಬಂದಿದ್ದ ಕೋಚ್ ಹಾಗೂ ಅವ್ರ ಪುತ್ರಿ ಬೈಕ್ ಸ್ಕಿಡ್ ಆಗಿ ಬಿದ್ದು ಗಾಯಗೊಂಡಿದ್ರು. ಇಲ್ಲಿ ಆಗಿರೋ ಅವಾಂತರಗಳಿಂದ ಇನ್ನೆಷ್ಟು ಕ್ರೀಡಾಪಟುಗಳು ಆಸ್ಪತ್ರೆ ಸೇರ್ತಾರೋ ಗೊತ್ತಿಲ್ಲ. ಈ ಬಗ್ಗೆ ಕ್ರೀಡಾ ಇಲಾಖೆ ಆಯುಕ್ತರನ್ನು ಕೇಳಿದ್ರೆ, ಸ್ಟೇಡಿಯಂನ್ನ ಕೆರೆಯಲ್ಲಿ ನಿರ್ಮಾಣ ಮಾಡಲಾಗಿದೆ. ಗುತ್ತಿಗೆದಾರರು ಒಂದು ಲೇಯರ್ ಮಾತ್ರ ಹಾಕಿದ್ದಾರೆ. ಮೇಂಟೆನೆನ್ಸ್ ಮಾಡೋಕೆ ಹೇಳ್ತೀವಿ ಅಂತಾ ಹಾರಿಕೆ ಉತ್ತರ ಕೊಡ್ತಿದ್ದಾರೆ.

ಖೇಲೋ ಇಂಡಿಯಾ ಹೆಸರಿನಲ್ಲಿ ನಡೆದ ಕಾಮಗಾರಿಗಳಲ್ಲಿ ಕೋಟಿ ಕೋಟಿ ಗುಳುಂ ಆಗಿರೋದು ಮೇಲ್ಮೋಟಕ್ಕೆ ಗೊತ್ತಾಗ್ತಿದೆ. ಅವೈಜ್ಞಾನಿಕ ಕಾಮಗಾರಿಗಳಿಂದ ಇಡೀ ಸ್ಟೇಡಿಯಂಗೆ ಮಾತ್ರವಲ್ಲ, ಕ್ರೀಡಾಪಟುಗಳಿಗೂ ಕಂಟಕ ಎದುರಾಗ್ತಿದೆ.

ಆನಂದ್ ನಂದಗುಡಿ ಸ್ಪೆಷಲ್ ಕರೆಸ್ಪಾಂಡೆಂಟ್ ಪವರ್ ಟಿವಿ ಬೆಂಗಳೂರು

RELATED ARTICLES

Related Articles

TRENDING ARTICLES