Tuesday, November 5, 2024

ಸೃಷ್ಠಿ ಬೆಸೆದ ಅನುಬಂಧ ಈ KGF ಬ್ಯೂಟಿ- ಗುಳ್ಟು ನವೀನ್

ಯುವ ಮನಸುಗಳ ಚಿಂತನ, ಮಂಥನದ ಹೊಂದಿಸಿ ಬರೆಯಿರಿ ಆಲ್ಬಮ್​ನಿಂದ ಅರ್ಥಪೂರ್ಣ ಹಾಡೊಂದು ಹೊರಬಂದಿದೆ. ಸೃಷ್ಠಿ ಬೆಸೆದ ಅನುಬಂಧದಲ್ಲಿ ಕೆಜಿಎಫ್ ಬ್ಯೂಟಿ- ಗುಳ್ಟು ನವೀನ್ ಜರ್ನಿ ಮನಮೋಹಕವಾಗಿದೆ. ಸಾಹಿತ್ಯದ ಸವಿನುಡಿಗೆ ಟ್ರೆಂಡ್​ಸೆಟ್ಟರ್ ರವಿಮಾಮ, ಡಾಲಿ ಕೂಡ ಫಿದಾ ಆಗಿದ್ದಾರೆ.

  • ಬೆಳಕಲಿ ಸಾಂಗ್ ಮೆಚ್ಚಿದ ಕ್ರೇಜಿಸ್ಟಾರ್, ಡಾಲಿ ಧನಂಜಯ..!
  • ಟಗರು- ಪೊಗರು ರೈಟರ್​ಗಳ ಚಿತ್ರದಲ್ಲಿ ಯುವ ಮನಸುಗಳು
  • ಪರಿಸ್ಥಿತಿ, ಮನಸ್ಥಿತಿಗಳ ಹೊಂದಾಣಿಕೆ ‘ಹೊಂದಿಸಿ ಬರೆಯಿರಿ’

ರಾಮೇನಹಳ್ಳಿ ಜಗನ್ನಾಥ್ ನಿರ್ದೇಶನದಲ್ಲಿ ಮೂಡಿ ಬರುತ್ತಿರೋ ಹೊಂದಿಸಿ ಬರೆಯಿರಿ ಸಿನಿಮಾ ಸಾಕಷ್ಟು ವಿಶೇಷತೆಗಳಿಂದ ಗಮನ ಸೆಳೆಯುತ್ತಿದೆ. ತಾರಾಗಣ, ಕಂಟೆಂಟು, ಕ್ವಾಲಿಟಿ , ಟೀಸರ್ ಹಾಗೂ ಹಾಡಿನ ಮೂಲಕ ನಿರೀಕ್ಷೆ ಹೆಚ್ಚಿಸಿರೋ ಚಿತ್ರದಿಂದ ಬದುಕಿ ಸುಮ್ಮನೆ ಎಂಬ ಮೆಲೋಡಿ ಹಾಡು ಬಿಡುಗಡೆಯಾಗಿದೆ.

ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ಅವ್ರೇ ಅರ್ಥಪೂರ್ಣ ಪದಪುಂಜವನ್ನು ಪೊಣಿಸಿ, ರಚಿಸಿರೋ ಈ ಹಾಡಿಗೆ ಜೋ ಕೋಸ್ಟ ಅದ್ಭುತ ಸಂಗೀತ ನೀಡುವುದರ ಜೊತೆಗೆ ಹಾಡಿಗೆ ಧ್ವನಿ ಕೂಡ ಆಗಿದ್ದಾರೆ. ಗುಳ್ಟು ಖ್ಯಾತಿಯ ನವೀನ್ ಹಾಗೂ ಕೆಜಿಎಫ್ ಸಿನಿಮಾದಲ್ಲಿ ರಾಕಿಭಾಯ್ ಅಮ್ಮನಾಗಿ ನಟಿಸಿದ್ದ ಅರ್ಚನಾ ಜೋಯಿಸ್  KGF ನಂತ್ರ ಹೊಂದಿಸಿ ಬರೆಯಿರಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪರಿಸ್ಥಿತಿಗಳನ್ನು ಹೊಂದಿಸಿಕೊಂಡು ಸಾಗುವ ಬದುಕಿನ ಪಯಣದ ಹೊಂದಿಸಿ ಬರೆಯಿರಿ ಸಿನಿಮಾದಲ್ಲಿ ಏಳು ಯುವಕ-ಯುವತಿಯರ ಒಂದೊಂದು ಕಥೆ, ಪ್ರೀತಿ ತುಂಬಿದೆ.

ಈಗಾಗ್ಲೇ ಹೊಂದಿಸಿ ಬರೆಯಿರಿ ಸಿನಿಮಾದ  ಶೂಟಿಂಗ್ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಟಗರು  ಖ್ಯಾತಿಯ ಮಾಸ್ತಿ, ಪೊಗರು ಖ್ಯಾತಿಯ ಪ್ರಶಾಂತ್ ರಾಜಪ್ಪ ಹಾಗೂ ಜಗನ್ನಾಥ್ ಸೇರಿದಂತೆ ಮೂವರು ಈ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ಗುಳ್ಟು ಚಿತ್ರಕ್ಕೆ ಸಿನಿಮಾಟೋಗ್ರಫಿ ಮಾಡಿದ್ದ ಶಾಂತಿ ಸಾಗರ್‌ ಇಲ್ಲಿಯೂ  ಕ್ಯಾಮೆರಾ ಕೈಚಳಕ ತೋರಿದ್ದಾರೆ.

ಕೋಸ್ಟ ಸಂಗೀತ, ಕೆ ಕಲ್ಯಾಣ್, ಹೃದಯಶಿವ ಹಾಗೂ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ಹಾಡುಗಳಿಗೆ ಸಾಹಿತ್ಯ ಒದಗಿಸಿದ್ದಾರೆ. ದೊಡ್ಡ ತಾರಾಬಳಗವೇ ಇರೋ ಹೊಂದಿಸಿ ಬರೆಯಿರಿ ಸಿನಿಮಾವನ್ನ ಸಂಡೇ ಸಿನಿಮಾಸ್ ಬ್ಯಾನರ್​ನಡಿ ರಾಮೇನಹಳ್ಳಿ ಜಗನ್ನಾಥ್ ಹಾಗೂ ಅವರ ಸ್ನೇಹಿತರು ನಿರ್ಮಾಣ ಮಾಡಿದ್ದು, ಚೂರಿಕಟ್ಟೆ ಖ್ಯಾತಿಯ ಪ್ರವೀಣ್, ಐಶಾನಿ ಶೆಟ್ಟಿ, ಸಂಯುಕ್ತ ಹೊರನಾಡು, ಗಜಾನನ ಅಂಡ್ ಗ್ಯಾಂಗ್ ಖ್ಯಾತಿಯ ಶ್ರೀಮಹಾದೇವ್, ಗಾಳಿಪಟ ಸಿನಿಮಾ ಖ್ಯಾತಿಯ ಭಾವನಾರಾವ್ ಮುಖ್ಯಭೂಮಿಕೆಯಲ್ಲಿದ್ದಾರೆ.

ಈ ಹಿಂದೆ ರಿವೀಲ್ ಆದ ಟೀಸರ್ ಜೋಶ್, ಹ್ಯಾಪಿಡೇಸ್ ಹಾಗೂ ಜಾಲಿಡೇಸ್ ಫೀಲ್ ಕೊಡೋ ರೀತಿ ಇದ್ರೂ ಸಹ ಇಲ್ಲಿ ಬೇರೆಯದ್ದೇ ಭಾವವಿದೆ. ಬೇರೆ ಬೇರೆ ಭಾಗಗಳಿಂದ ಕಾಲೇಜ್​ಗೆ ಜ್ಞಾನಾರ್ಜನೆಗೆ ಬಂದ ಬದುಕುಗಳಿವೆ. ಜೀವನ ಕೊಂಡ ಏರು ಪೇರಾದ್ರೂ ಅದನ್ನ ರೈಟ್ ಟ್ರ್ಯಾಕ್​ಗೆ ತರೋದು ಎಷ್ಟು ಕಷ್ಟ ಅನ್ನೋದನ್ನ ಈ ಸಿನಿಮಾ ಹೇಳಲು ಹೊರಟಂತಿದೆ.

ಅಂದಹಾಗೆ ಬೆಳಕಲಿ ಗೀತೆಯನ್ನ ನಾಗತಿಹಳ್ಳಿ ಚಂದ್ರಶೇಖರ್, ಡಾಲಿ ಧನಂಜಯ ರಿವ್ಯೂ ಮಾಡಿರೋದಲ್ಲದೆ ಚಿತ್ರತಂಡಕ್ಕೆ ತುಂಬು ಹೃದಯದಿಂದ ಹರಿಸಿ ಹಾರೈಸಿದ್ದಾರೆ. ಇನ್ನು ಸ್ಯಾಂಡಲ್​ವುಡ್​ನ ಕನಸುಗಾರ ಡಾ. ವಿ ರವಿಚಂದ್ರನ್ ಈ ಸಾಂಗ್​ನ ಲಾಂಚ್ ಮಾಡಿ, ಚಿತ್ರದ ಟೈಟಲ್ ಹಾಗೂ ಡಿಸೈನ್ಸ್​ನ ಮೆಚ್ಚಿದ್ದಲ್ಲದೆ, ವೈಭವೀಕರಣವಿಲ್ಲದೆ ಸೀದಾ ಸಾದಾ ಸಾಗೋ ಕಥೆಗೆ ಭೇಷ್ ಅಂದಿದ್ದಾರೆ.

ಸದ್ಯ ಇಲ್ಲಿಯವರೆಗೂ ರಿವೀಲ್ ಆಗಿರೋ ಸ್ಯಾಂಪಲ್ಸ್​ಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ಕಂಟೆಂಟ್ ಸಖತ್ ಪ್ರಾಮಿಸಿಂಗ್ ಆಗಿದೆ. ಹಾಗಾಗಿ ಸಿನಿಮಾ ಪ್ರೇಕ್ಷಕರಲ್ಲಿ ಭರವಸೆ ಮೂಡಿಸಿದ್ದು, ಯಂಗ್ ಟ್ಯಾಲೆಂಟ್ಸ್​​ನ ಕೈಗನ್ನಡಿಯಾಗಿ ನಿಲ್ಲೋ ಸೂಚನೆ ನೀಡಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES