Sunday, December 22, 2024

ದನದ ಕೊಟ್ಟಿಗೆ ಗೋಡೆ ಕುಸಿತ, ಇಬ್ಬರು ಸಾವು

ರಾಮನಗರ : ಧಾರಕಾರ ಮಳೆಯಿಂದ ದನದ ಕೊಟ್ಟಿಗೆಯ ಗೋಡೆ ಕುಸಿದು ಇಬ್ಬರು ಮಕ್ಕಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಸೋಲೂರು ಗ್ರಾಮದಲ್ಲಿ ‌ನಡೆದಿದೆ.

ದನದ ಕೊಟ್ಟಿಗೆಯ ಪಕ್ಕದಲ್ಲೇ ಇದ್ದ ಶೆಡ್​ನಲ್ಲಿ ಮಲಗಿದ್ದ ಇಬ್ಬರು ಮಕ್ಕಳ ಮೇಲೆ ಗೋಡೆ ಬಿದ್ದ ಪರಿಣಾಮ ಇಬ್ಬರು‌ ಮಕ್ಕಳು ಸಾವನ್ನಪ್ಪಿದ್ದು, ಮತ್ತಿಬ್ಬರು ಗಾಯಗೊಂಡಿದ್ದಾರೆ. ಪರ್ಭಿನ್ (4), ಇಷಿಕಾ (3) ಮೃತ ಮಕ್ಕಳಾಗಿದ್ದು, ಒಂದೆ ಶೆಡ್​ನಲ್ಲಿ ಎರಡು ಕುಟುಂಬ ವಾಸವಾಗಿದ್ವು. ಗಂಗರಂಗಮ್ಮ ಎಂಬುವವರಿಗೆ ಸೇರಿದ ದನದ‌ ಕೊಟ್ಟಿಗೆ ಇದಾಗಿದ್ದು, ಹೋಟಲ್ ಒಂದರಲ್ಲಿ ಕೆಲಸ ಮಾಡುತ್ತಿದ್ರು. ನೇಪಾಳ ಮೂಲದವರಾದ ಮೀನಾ, ಮೋನಿಷಾ ಎಂಬುವರು ಗಾಯಗೊಂಡಿದ್ದಾರೆ. ಕುದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮೃತ ದೇಹ, ಗಾಯಾಳುಗಳನ್ನ ಮಾಗಡಿ ಸಾರ್ವಜನಿಕ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

RELATED ARTICLES

Related Articles

TRENDING ARTICLES