ಬೆಂಗಳೂರು : ನಮ್ಮ ನಾಯಕರು ಸ್ಪರ್ಧೆ ಮಾಡಬಾರದೆಂದು ಮೀಸಲಾತಿ ಬದಲಾವಣೆ ಮಾಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಬಿಎಂಪಿ ಚುನಾವಣೆಗೆ ನಾವು ಸಿದ್ದತೆ ಮಾಡಿಕೊಳ್ಳುತ್ತಿದ್ದೇವೆ. ಎಲ್ಲ ವಿಧಾನಸಭಾ ಕ್ಷೇತ್ರಗಳಿಗೆ ನಾನು ಪ್ರವಾಸ ಮಾಡುತ್ತಿದ್ದೇನೆ. ನಮ್ಮ ನಾಯಕರು ಸ್ಪರ್ಧೆ ಮಾಡಬಾರದೆಂದು ಮೀಸಲಾತಿ ಬದಲಾವಣೆ ಮಾಡಿದ್ದಾರೆ. ವಿಕಾಸಸೌಧ ಯುಡಿ ಕಚೇರಿಗೆ ಮುತ್ತಿಗೆ ಹಾಕಿದ್ದೇವೆ. ಮೀಸಲಾತಿ ಸರಿಯಾಗಿ ಹಂಚಿಕೆಯಾಗಿಲ್ಲ ಎಂದರು.
ಇನ್ನು, ಜಯನಗರ ,ಬಿಟಿಎಂ ಕ್ಷೇತ್ರದಲ್ಲಿ ಎಲ್ಲ ಮಹಿಳಾ ಮೀಸಲಾತಿ ಕೊಟ್ಟಿದ್ದಾರೆ. ಒಟ್ಟು ೯೩ ಸೀಟ್ ಗಳಿಗೆ ಮೀಸಲಾತಿ ಅನ್ಯಾಯ ಮಾಡಿದ್ದಾರೆ. ೯೩ ಸೀಟ್ ನಲ್ಲಿ ೭೫ ಮಹಿಳಾ ಮೀಸಲಾತಿ ಮಾಡಿದ್ದಾರೆ. ಬೆಂಗಳೂರಿನಲ್ಲಿ ಜನ ಬದಲಾವಣೆ ಬಯಸಿದ್ದಾರೆ. ಬಸವನಗುಡಿ, ರಾಜಾಜಿ ನಗರದಲ್ಲೂ ನಮ್ಮ ಶಾಸಕರು ಈ ಹಿಂದೆ ಗೆದ್ದಿದ್ದಾರೆ. ನಾವು ಮಹಿಳಾ ಮೀಸಲಾತಿ ವಿರೋಧಿ ಇಲ್ಲ. ಆದ್ರೆ ಕಾಂಗ್ರೆಸ್ ಕ್ಷೇತ್ರದ ವಾರ್ಡ್ ಗಳಿಗೆ ಹೆಚ್ಚು. ಅಹಿಂದ ಮತಗಳನ್ನ ವೋಟರ್ ಲಿಸ್ಟ್ನಿಂದ ತೆಗದು ಹಾಕಿದ್ದಾರೆ. ನಾವು ಚುನಾವಣೆಗೆ ರೆಡಿ ಇದ್ದೇವೆ. ಸುಪ್ರೀಂ ಕೋರ್ಟ್ ಹೇಳಿದಂತೆ ನಾವು ನಡೆದುಕೊಳ್ಳುತ್ತೇವೆ ಎಂದು ಹೇಳಿದರು.