Thursday, December 26, 2024

ಸಿದ್ದರಾಮೋತ್ಸವ ಬಳಿಕ ಅಖಾಡಕ್ಕಿಳಿದ ಡಿ.ಕೆ ಬ್ರದರ್ಸ್

ಬೆಂಗಳೂರು : ಒಂದೆ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯಲು ಡಿಕೆ ಬ್ರದರ್ಸ್ ಮಾಸ್ಟರ್ ಪ್ಲ್ಯಾನ್ ಮಾಡಿದ್ದು, ಪಾದಯಾತ್ರೆ ನೆಪದಲ್ಲಿ ಪಕ್ಷ ಸಂಘಟನೆ ಮಾಡಲು ನೇರವಾಗಿ ಡಿಕೆ ಬ್ರದರ್ಸ್ ಅಖಾಡಕ್ಕಿಳಿದಿದ್ದಾರೆ.

ಇನ್ನು, ಸ್ವಾತಂತ್ರ್ಯ ಅಮೃತ ಮಹೋತ್ಸವ ಪ್ರಯುಕ್ತ ಪಾದಯಾತ್ರೆ ಆಯೋಜಿಸಿದ್ದು, ಪಾದಯಾತ್ರೆಯನ್ನು ಯಶಸ್ವಿ ಮಾಡುವ ಮೂಲಕ ಸಿದ್ದರಾಮಯ್ಯಗೆ ಟಕ್ಕರ್ ಕೊಡಲು ಚಿಂತನೆಯನ್ನು ನಡೆಸಿದ್ದಾರೆ. ವ್ಯಕ್ತಿ ಪೂಜೆ ಅಲ್ಲ, ಪಕ್ಷ ಪೂಜೆ ಮುಖ್ಯ ಎಂದು ಸಂದೇಶ ಸಾರಲು ಚಿಂತನೆ ಮಾಡಿದ್ದು, ಇಂದು ಸರಣಿ ಸಭೆಗಳಲ್ಲಿ ಡಿ.ಕೆ ಬ್ರದರ್ಸ್ ಭಾಗಿಯಾಗಲಿದ್ದಾರೆ.

ಅದಲ್ಲದೇ, ಕಾಂಗ್ರೆಸ್ ಶಾಸಕರು ಇಲ್ಲದ ಕ್ಷೇತ್ರಗಳಲ್ಲಿ ಪಾದಯಾತ್ರೆ ಮೂಲಕ ಪಕ್ಷ ಸಂಘಟನೆ ಮಾಡಿದ್ದು, ಬೊಮ್ಮನಹಳ್ಳಿ, ಬೆಂಗಳೂರು ಬಸವನಗುಡಿ, ಪದ್ಮನಾಭನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಮೀಟಿಂಗ್ ಮಾಡಿ, ಅಮೃತ ಮಹೋತ್ಸವ ಪಾದಯಾತ್ರೆಗೆ ಹೆಚ್ಚಿನ ಜನ ಸೇರಿಸುವ ಪ್ಲ್ಯಾನ್ ಮಾಡಿದ್ದಾರೆ.

RELATED ARTICLES

Related Articles

TRENDING ARTICLES