Sunday, January 19, 2025

ಭದ್ರಾವತಿಯ ಹೊಸ ಸೇತುವೆ ಮುಳುಗಡೆ

ಶಿವಮೊಗ್ಗ : ವ್ಯಾಪಕ ಮಳೆ ಹಿನ್ನೆಲೆ, ಭದ್ರಾ ಜಲಾಶಯದಿಂದ 47 ಸಾವಿರ ಕ್ಯೂಸೆಕ್ ನೀರು ನದಿಗೆ ಬಿಡಲಾಗುತ್ತಿದೆ. ಭದ್ರಾವತಿಯ ಹೊಸ ಸೇತುವೆ ಮುಳುಗಿದ್ದು, ಸೇತುವೆಯಲ್ಲಿ ರಸ್ತೆ ಸಂಚಾರ ನಿಷೇಧವಾಗಿದೆ.

ಇನ್ನು, ಭದ್ರಾವತಿಯ ಬಿಸಿಎಂ ಹಾಸ್ಟೆಲ್ ನಲ್ಲಿ ಗಂಜಿ ಕೇಂದ್ರ ಸ್ಥಾಪನೆಯಾಗಿದ್ದು, 45 ನಿರಾಶ್ರಿತರಿಗೆ ಆಶ್ರಯ ನೀಡಲಾಗಿದೆ. ಭದ್ರಾ ಜಲಾಶಯದ ಗರಿಷ್ಠ ಮಟ್ಟ 186 ಅಡಿಯಾಗಿದ್ದು, ನಿನ್ನೆ ಬೆಳಿಗ್ಗೆ 184 ಅಡಿ ನೀರು ಸಂಗ್ರಹವಾಗಿತ್ತು. ಜಲಾನಯನ ಪ್ರದೇಶದಲ್ಲಿ ಭಾರಿ ಮಳೆ ಹಿನ್ನೆಲೆ. 2.5 ಅಡಿಯಷ್ಟು ನೀರು ಹೊರಕ್ಕೆ ಬಿಡಲಾಗಿದೆ.

RELATED ARTICLES

Related Articles

TRENDING ARTICLES