ಬೆಂಗಳೂರು : ಬಿಬಿಎಂಪಿ ಅಧಿಕಾರಿಗಳಿಗೆ ಮೂಗುದಾರ ಹಾಕೋರೇ ಇಲ್ಲ. ಆಡಿದ್ದೇ ಆಟ ಆಗ್ಬಿಟ್ಟಿದೆ. ಹೇಗೋ ಬೆವರು ಸುರಿಸಿ ಬೆಂಗಳೂರಿನ ಜನಸಾಮಾನ್ಯರು ತೆರಿಗೆ ಕಟ್ತಾ ಇದ್ದಾರೆ. ಅಂಥ ತೆರಿಗೆ ಹಣದಲ್ಲಿ ಅಧಿಕಾರಿಗಳು ಹೈಫೈ ಕಚೇರಿಗಳನ್ನ ನಿರ್ಮಿಸಿಕೊಂಡು, ಅಂಧಾ ದರ್ಬಾರ್ ನಡೆಸ್ತಿದ್ದಾರೆ.. ಬಿಬಿಎಂಪಿ ಪ್ರಾಜೆಕ್ಟ್ ವಿಭಾಗದ ಸ್ಪೆಷಲ್ ಕಮಿಶನರ್ ಕಚೇರಿಗೆ, ಅವಶ್ಯಕತೆ ಇಲ್ಲದಿದ್ರೂ ಲಕ್ಷುರಿ ಟಚ್ ನೀಡಲಾಗಿದೆ. ಎಸಿ, ಕುರ್ಚಿ, ಸೋಫಾ ಹಾಗೂ ಇನ್ನಿತರ ಪೀಠೋಪಕರಣಗಳಿಗಾಗಿ 25.86 ಲಕ್ಷ ಹಣ ಖರ್ಚು ಮಾಡಲಾಗಿದೆ. ಬರೀ ಒಂದು ಚಿಕ್ಕ ಕಚೇರಿ ನವೀಕರಣಕ್ಕೆ ಇಷ್ಟೊಂದು ಹಣ ಖರ್ಚು ಮಾಡಿ, ಪಾಲಿಕೆ ಬೊಕ್ಕಸಕ್ಕೆ ಕತ್ತರಿ ಹಾಕಲಾಗಿದೆ.
ಅಧಿಕಾರಿಗಳಿಗೆ ಕರ್ತವ್ಯಕ್ಕಿಂತ ಐಷಾರಾಮಿ ಕಚೇರಿಗಳಿಗೆ ಮುಖ್ಯ ಆಗ್ಬಿಟ್ಟಿದೆ. ಸಿಟ್ಟಿಂಗ್ ಕಾರ್ಪೋರೇಟರ್ ಗಳು ಇಲ್ಲದೇ ಇರೋದ್ರಿಂದ ಕೌನ್ಸಿಲ್ ನಲ್ಲಿ ಅಪ್ರೂವಲ್ ತೆಗೆದುಕೊಳ್ಳೋ ತಲೆನೋವೇ ಇಲ್ಲ.. ಬೇಕೆಂದಾಗ, ಬೇಕಾದವರನ್ನು ಇಟ್ಟುಕೊಂಡು ಹಣ ಲೂಟಿ ಮಾಡಲಾಗ್ತಿದೆ. ಕಚೇರಿ ನವೀಕರಣಕ್ಕೆ ಖರ್ಚಾಗೋದು ಐದಾರು ಲಕ್ಷ ಮಾತ್ರ. ಆದ್ರೆ, ಈ ಚಿಕ್ಕ ಕಚೇರಿಗೆ 25 ಲಕ್ಷದ 86 ಸಾವಿರ ಖರ್ಚು ಮಾಡಲಾಗಿದೆ.
ಧಾರಾಕಾರ ಮಳೆಯಿಂದ ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಜನ ಜೀವನವೇ ಅಸ್ತವ್ಯಸ್ತವಾಗಿದೆ. ಸಂತ್ರಸ್ತರಿಗೆ ಸೂರು, ಪರಿಹಾರ ಕೊಡೋಕೆ ಹಣ ಇಲ್ಲಾ ಅಂತಾರೆ. ಆದ್ರೆ, ಜನಸಾಮಾನ್ಯರ ತೆರಿಗೆ ಹಣದಲ್ಲಿ ಐಷಾರಾಮಿ ಕಚೇರಿಗಳನ್ನು ನಿರ್ಮಿಸಿಕೊಂಡು ಲಕ್ಷಾಂತರ ರೂಪಾಯಿ ಪೋಲು ಮಾಡ್ತಾ ಇದ್ದಾರೆ.
ಆನಂದ್ ನಂದಗುಡಿ ಸ್ಪೆಶಲ್ ಕರೆಸ್ಪಾಂಡೆಂಟ್ ಪವರ್ ಟಿವಿ