Wednesday, January 22, 2025

ನಮ್ಮ ಮೆಟ್ರೋ ನಿಗಮಕ್ಕೆ ಬಡ್ಡಿದಾರರ ಕಾಟ.!

ಬೆಂಗಳೂರು : ಸಂಚಾರ ದಟ್ಟನೆ ನಿಯಂತ್ರಣ ಮಾಡಬೇಕು ಅಂತ ಬೆಂಗಳೂರಿನಲ್ಲಿ ಮೆಟ್ರೋ ಯೋಜನೆ ಜಾರಿ ಮಾಡಲಾಗಿದೆ. ಈಗಾಗಲೇ 56 ಕಿ.ಮೀಟರ್ ಮಾರ್ಗದಲ್ಲಿ ಮೆಟ್ರೋ ಕೂಡ ಸಂಚಾರ ಮಾಡ್ತಿದೆ. ಆದ್ರೆ ಮೆಟ್ರೋ ಮೊದಲ ಹಾಗೂ ಎರಡನೇ ಹಂತ ಯೋಜನೆಗೆ ಮಾಡಿರೋ ಸಾಲ, ಬೆಂಗಳೂರು ಮೆಟ್ರೋಗೆ ತಲೆನೋವು ತಂದಿದೆ.

ಬೆಂಗಳೂರಿನಲ್ಲಿ ಮೆಟ್ರೋ ಯೋಜನೆಗೆ ಮಾಡಿರೋ ಸಾಲಕ್ಕೆ ಬಡ್ಡಿ ಕಟ್ಟುವುದು ಮೆಟ್ರೋ ನಿಗಮಕ್ಕೆ ಸಾವಾಲಾಗಿದೆ. ಮೊದಲ ಹಂತದ 13 ಸಾವಿರ ಕೋಟಿ, ಎರಡನೇಯ ಹಂತದ ಯೋಜನೆಗೆ 30 ಸಾವಿರ ಕೋಟಿ ಯೋಜನೆಗೆ ಬಿಎಂಆರ್‌ಸಿಎಲ್ ದೇಶೀಯ ಹಾಗೂ ವಿದೇಶಿ ಬ್ಯಾಂಕ್​ಗಳಿಂದ ಸಾವಿರಾರು ಕೋಟಿಗೂ ಅಧಿಕ ಸಾಲ ಮಾಡಿದೆ.

ಮೆಟ್ರೋ ಯೋಜನೆಗಾಗಿ ಮಾಡಿರುವ ಸಾಲಗಳೆಲ್ಲವೂ ದೀರ್ಘಾವಧಿ ಆಗಿದ್ದರೂ, ಸಾಲದ ಮೇಲಿನ ಬಡ್ಡಿ ನಿಯಮಿತವಾಗಿ ಪಾವತಿಸಬೇಕಾಗುತ್ತದೆ. ಆದರೆ, 42 ಕಿ.ಮೀ. ಉದ್ದದ ಇಡೀ ಮೊದಲ ಹಂತ ಪೂರ್ಣಗೊಂಡರೂ ನಿತ್ಯ ನಿಗಮಕ್ಕೆ ಒಂದು ಕೋಟಿ ರೂ. ಆದಾಯ ಬರುವುದಿಲ್ಲ. ಇನ್ನು ಒಂದು ವೇಳೆ ನಿಯಮಿತ ಬಡ್ಡಿ ಕಟ್ಟದಿದ್ದರೆ, ಚಕ್ರಬಡ್ಡಿ ತೆರಬೇಕಾದ ಸ್ಥಿತಿ ಬಂದರೂ ಅಚ್ಚರಿ ಇಲ್ಲ . ಇದು ಈಗ ನಿಗಮದ ನಿದ್ದೆಗೆಡಿಸಿದೆ. 2009-10ರಲ್ಲೇ ಯೋಜನೆಗಾಗಿ ವಿವಿಧ ಬ್ಯಾಂಕ್‌ಗಳಲ್ಲಿ ಬಿಎಂಆರ್‌ಸಿ ಸಾಲ ಪಡೆದಿದೆ. ಹುಡ್ಕೊ ಸೇರಿದಂತೆ ಈಗಾಗಲೇ ದೇಶೀಯ – ವಿದೇಶಿ ಬ್ಯಾಂಕ್​ಗಳಿಗೂ ಮರುಪಾವತಿ ಮಾಡಬೇಕಾಗುತ್ತದೆ. ಆದರೆ ಬರುತ್ತಿರೋ ಕಡಿಮೆ ಆದಾಯದಲ್ಲಿ ಸಾಲ ಮರುಪಾವತಿ ತಲೆಬಿಸಿಮಾಡಿದೆ.

ನಮ್ಮ ಮೆಟ್ರೋ ಅಂದಿನ ಡಾಲರ್‌ ಎದುರು ರೂಪಾಯಿ ಮೌಲ್ಯಕ್ಕೆ ಅನುಗುಣವಾಗಿ ಮೊದಲ ಹಂತ ಮೆಟ್ರೋ ಕಾಮಗಾರಿಗಾಗಿ ಸರಿಸುಮಾರು 3,300 ಕೋಟಿ ರೂ. ಸಾಲ ಪಡೆದಿದೆ. ಈ ಸಾಲದ ಮೊತ್ತವು ಇಂದಿನ ಡಾಲರ್‌ ಎದುರು ರೂಪಾಯಿ ಮೌಲ್ಯಕ್ಕೆ ಲೆಕ್ಕಹಾಕಿದರೆ, ನಾಲ್ಕೂವರೆ ಸಾವಿರ ಕೋಟಿ ರೂ. ಆಗುತ್ತದೆ. ಡಾಲರ್‌ ಎದುರು ರೂಪಾಯಿ ಮೌಲ್ಯದ ಕುಸಿತ ಮುಂದುವರಿದರೆ, ವಾರ್ಷಿಕ ನೂರಾರು ಕೋಟಿ ರೂ. ಬಿಎಂಆರ್‌ಸಿ ಹೆಚ್ಚುವರಿಯಾಗಿ ಪಾವತಿಸಬೇಕಾಗುತ್ತದೆ ಎಂದೂ ಅವರು ಹೇಳಲಾಗ್ತಿದೆ. ಎರಡನೇ ಹಂತದ ಯೋಜನೆಗೂ ಬಿಎಂಆರ್‌ಸಿಎಲ್ ಸುಮಾರು 30 ಸಾವಿರ ಕೋಟಿ ಹೊಂದಿಸಿದೆ. ಇದರ ಮಧ್ಯೆ ಮೊದಲ ಹಂತ ಯೋಜನೆಯ ಸಾಲ ಬಡ್ಡಿಯೇ ಬಿಸಿತುಪ್ಪವಾಗಿದ್ದು, ಎರಡನೇ ಹಂತ ಹಣ ಸಂಗ್ರಹ ಮಾಡೋದು ಇನ್ನಿಲ್ಲದ ಸವಾಲಾಗಿದೆ.

ಒಟ್ಟಿನಲ್ಲಿ ಸಾವಿರಾರು ಕೋಟಿ ಸಾಲ ಮಾಡಿ ಮೆಟ್ರೋವನ್ನ ಹಳಿಗೆ ಇಳಿಸಿದ್ದು ಆಗಿದೆ, ಆದರೆ ಮಾಡಿರೋದು ಸಾಲಕ್ಕೆ ಬಡ್ಡಿ ತೆರಬೇಕಾಗಿರೋದು ಮೆಟ್ರೋ ನಿಗಮಕ್ಕೆ ನಿದ್ದೆಗೆಡಿಸಿದೆ.

ಕೃಷ್ಣಮೂರ್ತಿ ಪವರ್ ಟಿವಿ ಬೆಂಗಳೂರು

RELATED ARTICLES

Related Articles

TRENDING ARTICLES