Monday, December 23, 2024

ಇಂದಿನಿಂದ 15 ನಿಮಿಷಕ್ಕೊಮ್ಮೆ ಮೆಟ್ರೋ ರೈಲು

ಬೆಂಗಳೂರು : ಇಂದಿನಿಂದ ಪ್ರತಿದಿನ ಮುಂಜಾನೆ ಹಾಗೂ ರಾತ್ರಿ 15 ನಿಮಿಷಕ್ಕೊಮ್ಮೆ ಮೆಟ್ರೊ ರೈಲು ಸಂಚಾರವಾಗುತ್ತೆ. ಪ್ರಯಾಣಿಕರ ಅನುಕೂಲಕ್ಕೆ ಬೆಳಗ್ಗೆ, ರಾತ್ರಿ ಮೆಟ್ರೋ ಸಂಚಾರದಲ್ಲಿ ಸಮಯ ಬದಲಾವಣೆ ತರಲಾಗಿದೆ.

ಇನ್ನು, ಬೆಳಿಗ್ಗೆ 5 ಗಂಟೆಯಿಂದ 6 ರವರೆಗೆ ಹಾಗೂ ರಾತ್ರಿ‌ 10 ರಿಂದ 11 ಗಂಟೆವರೆಗೆ 15 ನಿಮಿಷಕ್ಕೊಮ್ಮೆ ಮೆಟ್ರೊ ಸಂಚಾರವಾಗಲಿದೆ. ಇದುವರೆಗೂ ಪ್ರತಿ 20 ನಿಮಿಷಕ್ಕೊಂದು ನೇರಳೆ ಹಾಗೂ ಹಸಿರು ಮಾರ್ಗದಲ್ಲಿ ಮೆಟ್ರೋ ಸಂಚರಿಸುತ್ತಿತ್ತು.ಇದರಿಂದ ಬೆಳಿಗ್ಗೆ, ರಾತ್ರಿ ಓಡಾಡೋ ಪ್ರಯಾಣಿಕರಿಕರಿಗೆ ತೊಂದರೆಯಾಗಿತ್ತು. ಹೀಗಾಗಿ ಪ್ರಯಾಣಿಕರ ಅನುಕೂಲಕ್ಕಾಗಿ 15 ನಿಮಿಷಗಳ ಮಧ್ಯಂತರದಲ್ಲಿ ಮೆಟ್ರೋ ರೈಲು ಸಂಚಾರವಾಗಲಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಬೆಂಗಳೂರು ಮೆಟ್ರೋ ನಿಗಮ ತಿಳಿಸಿದೆ.

RELATED ARTICLES

Related Articles

TRENDING ARTICLES