Wednesday, November 27, 2024

ಆಗಸ್ಟ್ 10ಕ್ಕೆ ವೆಂಕಯ್ಯ ನಾಯ್ಡು ಅಧಿಕಾರವಧಿ ಮುಕ್ತಾಯ

ಉಪರಾಷ್ಟ್ರಪತಿ ಚುನಾವಣೆಯಲ್ಲಿ ವಿರೋಧ ಪಕ್ಷಗಳ ಬೆಂಬಲಿತ ಅಭ್ಯರ್ಥಿ ಮಾರ್ಗರೇಟ್​​ ಆಳ್ವ ಅವರನ್ನು ಬೆಂಬಲಿಸಲು ತೆಲಂಗಾಣ ರಾಷ್ಟ್ರ ಸಮಿತಿ ನಿರ್ಧರಿಸಿದೆ. ಇದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಹಾಗೂ ಟಿಆರ್​ಎಸ್​ ಅಧ್ಯಕ್ಷ ಕೆ.ಚಂದ್ರಶೇಖರ್​ ರಾವ್ ಮಾಹಿತಿ ನೀಡಿದ್ದು, ಮಾರ್ಗರೇಟ್​ ಆಳ್ವರಿಗೆ ಮತ ಹಾಕುವಂತೆ ಪಕ್ಷದ 16 ಸಂಸದರಿಗೆ ಸೂಚನೆ ನೀಡಿದ್ದಾರೆ.

ಹಾಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಅಧಿಕಾರವಧಿ ಆಗಸ್ಟ್​ 10ಕ್ಕೆ ಕೊನೆಗೊಳ್ಳಲಿದೆ. ನೂತನ ಉಪರಾಷ್ಟ್ರಪತಿ ರೇಸ್​​ನಲ್ಲಿ ಬಿಜೆಪಿ ಬೆಂಬಲಿತ ಪಶ್ಚಿಮ ಬಂಗಾಳದ ಮಾಜಿ ಗವರ್ನರ್​​ ಜಗದೀಪ್ ಧನ್ಕರ್ ಹಾಗೂ ಕಾಂಗ್ರೆಸ್ ಬೆಂಬಲಿತ ರಾಜಸ್ಥಾನದ ಮಾಜಿ ರಾಜ್ಯಪಾಲೆ, ಕನ್ನಡತಿ ಮಾರ್ಗರೇಟ್ ಆಳ್ವ ಕಣದಲ್ಲಿದ್ದಾರೆ. ಈ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ತಟಸ್ಥ ನೀತಿ ಅನುಸರಿಸುತ್ತಿದೆ. ಎಎಪಿ, ಜೆಎಂಎಂ ಈಗಾಗಲೇ ತನ್ನ ಬೆಂಬಲವನ್ನು ಮಾರ್ಗರೇಟ್ ಆಳ್ವ ಅವರಿಗೆ ಘೋಷಿಸಿದೆ.

ಅದಲ್ಲದೇ, ಮಾಯಾವತಿ ಎನ್​ಡಿಎ ಪಕ್ಷಕ್ಕೆ ಜೈಕಾರ ಹಾಕಿದ್ದಾರೆ. ನಾಳೆ ಚುನಾವಣೆ ನಡೆಯಲಿದ್ದು, ಸಂಜೆಯ ವೇಳೆಗೆ ಫಲಿತಾಂಶ ಹೊರಬೀಳಲಿದೆ. ರಾಷ್ಟ್ರಪತಿ ಚುನಾವಣೆಯಲ್ಲಿ ಟಿಆರ್​​ಎಸ್ ವಿರೋಧ ಪಕ್ಷಗಳ ಬೆಂಬಲಿತ ಅಭ್ಯರ್ಥಿ ಯಶವಂತ್ ಸಿನ್ಹಾ ಅವರಿಗೆ ಬೆಂಬಲ ಘೋಷಣೆ ಮಾಡಿತ್ತು

RELATED ARTICLES

Related Articles

TRENDING ARTICLES