Wednesday, January 22, 2025

ದಾವಣಗೆರೆ ಸಿದ್ದರಾಮೋತ್ಸವದ ಮ್ಯಾಟರ್ ಲೀಕ್

ದಾವಣಿಗೆರೆ : ಸಿದ್ದರಾಮಯ್ಯ ಅಮೃತ ಮಹೋತ್ಸವಕ್ಕೆ  ರಾಜ್ಯ ಬಿಜೆಪಿ ನಾಯಕರು ಉದಾರ ಸಹಾಯ ಹಸ್ತದ ಬಗ್ಗೆ ಬಿಜೆಪಿ ಹೈ ಕಮಾಂಡ್​ ಮಹತ್ವದ ಸುಳಿವನ್ನು ನೀಡಿದೆ.

ದಾವಣಗೆರೆ ಸಿದ್ದರಾಮೋತ್ಸವದ ಮ್ಯಾಟರ್ ಲೀಕ್ ಆಗಿದ್ದು, ಬಿಜೆಪಿ ಹೈಕಮಾಂಡ್ ಗೆ ಮಹತ್ವದ ಸುಳಿವು ನೀಡಿದ್ದು, ದಾವಣಗೆರೆಯಲ್ಲಿ ನಡೆದ ಅದ್ದೂರಿ ಸಿದ್ದರಾಮಯ್ಯ ಅಮೃತ ಮಹೋತ್ಸವಕ್ಕೆ ಸ್ವಪಕ್ಷೀಯರು ಸಾಥ್ ನೀಡಿದ್ದಾರೆ. ಸದ್ಯ ದೆಹಲಿ ಬಿಜೆಪಿ ಪಾಳಯ ಹಾಗೂ ರಾಜ್ಯ ಬಿಜೆಪಿ ಪಾಳಯದಲ್ಲಿ ಸಿದ್ದರಾಮಯ್ಯ ಅಮೃತ ಮಹೋತ್ಸವದ ಯಶಸ್ಸಿನ ಬಗ್ಗೆ ಚರ್ಚೆ ನಡೆಯುತ್ತಿದೆ.

ಇನ್ನು, ಸಿದ್ದರಾಮಯ್ಯ ಅಮೃತ ಮಹೋತ್ಸವಕ್ಕೆ ರಾಜ್ಯ ಬಿಜೆಪಿ ನಾಯಕರ ಉದಾರ ಸಹಾಯ ಹಸ್ತದ ಬಗ್ಗೆ ಕಮಲ ನಾಯಕರಿಗೆ ಸುಳಿವು ಸಿಕ್ಕಿದೆ. ಸಾರಿಗೆ ವ್ಯವಸ್ಥೆ, ಉಟೋಪಚಾರ, ವೇದಿಕೆ ನಿರ್ಮಾಣ, ಕಾರ್ಯಕ್ರಮ ನಿರ್ವಹಣೆಗೂ ಕಮಲ ನಾಯಕರು ಸಹಾಯ ಮಾಡಿದ್ದಾರೆ.
ಇನ್ನು, ಇದಲ್ಲದರ ಜೊತೆಗೆ ಹಿರಿಯ IAS, IPS ಅಧಿಕಾರಿಗಳಿಂದಲೂ ಸಿದ್ದರಾಮಯ್ಯ ಅಮೃತ ಮಹೋತ್ಸವಕ್ಕೆ ನೆರವು ನೀಡಿದ್ದು, 2023ರ ಸಾರ್ವತ್ರಿಕ ಚುನಾವಣೆ ನಂತರ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಲಿದ್ದಾರೆ ಎಂಬ ಲೆಕ್ಕಾಚಾರದಲ್ಲಿ ನೆರವನ್ನು ನೀಡಿದ್ದಾರೆ. ಈ ಬಗ್ಗೆ ನಿಖರ ಮಾಹಿತಿ ರಾಜ್ಯ ಬಿಜೆಪಿ ಹಾಗೂ ಹೈಕಮಾಂಡ್ ಗೆ ಸಿಕ್ಕಿದೆ.

ಸದ್ಯ ಸಿದ್ದರಾಮಯ್ಯ ಅಮೃತ ಮಹೋತ್ಸವಕ್ಕೆ ಸಹಾಯ ಮಾಡಿದ ವಲಸಿಗರೇರು ಹಾಗೂ ಸ್ವಪಕ್ಷೀಯರು ಯಾರು ಎಂದು ಹುಡುಕಾಟ ನಡೆಸುತ್ತಿದ್ದು, ಸಿದ್ದರಾಮೋತ್ಸವ ಸಕ್ಸಸ್ ತಂದ ಸಂಕಟ ಕಮಲ ಪಾಳಯದಲ್ಲಿ ಶುರುವಾಗಿದೆ. ಯಾಕೆಂದರೆ ಇಡೀ ಉತ್ಸವದಕ್ಕೂ ಬಿಜೆಪಿ ವಿರುದ್ಧ ಗುಟುರು ಹಾಕಿದ ಟಗರು ಗ್ಯಾಂಗ್ ಹೀಗಾಗಿ ಸಾಕಷ್ಟು ಸಿರೀಯಸ್ ಆಗಿ ತೆಗೆದುಕೊಂಡ ಹೈಕಮಾಂಡ್. ಸಿದ್ದರಾಮಯ್ಯ ಅಮೃತ ಮಹೋತ್ಸವಕ್ಕೆ ಸಹಾಯ ಮಾಡಿದ ಕಮಲ ನಾಯಕರು ಯಾರು ಎಂದು ಹುಡುಕಾಟ ನಡೆಸುತ್ತಿದ್ದಾರೆ.

RELATED ARTICLES

Related Articles

TRENDING ARTICLES