ಬೆಂಗಳೂರು : ಈ ಹಿಂದೆ ವ್ಯಾಪಾರ ದಂಗಲ್ ಗೆ ಸಾಕ್ಷಿಯಾಗಿದ್ದ ಕರುನಾಡು ಮತ್ತೊಮ್ಮೆ ಸುದ್ದಿಯಲ್ಲಿದ್ದು, ಗಣಪತಿ ಹಬ್ಬದ ಮೂಲಕ ಮತ್ತೊಮ್ಮೆ ಧರ್ಮ ದಂಗಲ್ ಆರಂಭಗೊಂಡಿದೆ.
ರಾಜ್ಯ ಸರ್ಕಾರಕ್ಕೆ ಮತ್ತೆ ಶುರುವಾಗುತ್ತಾ ಹೊಸ ಟೆನ್ಷನ್ ಶುರುವಾಗಿದ್ದು, ಈ ಹಿಂದೆ ವ್ಯಾಪಾರ ದಂಗಲ್ ಗೆ ಸಾಕ್ಷಿಯಾಗಿದ್ದ ಕರುನಾಡು ಮತ್ತೊಮ್ಮೆ ಸುದ್ದಿಯಲ್ಲಿದೆ. ಗಣಪತಿ ಹಬ್ಬದ ಮೂಲಕ ಮತ್ತೊಮ್ಮೆ ಧರ್ಮ ದಂಗಲ್ ಆರಂಭಗೊಂಡಿದೆ. ಗಣಪತಿ ಹಬ್ಬಕ್ಕೆ ಮುಸ್ಲಿಂ ಅವರನ್ನು ಬ್ಯಾನ್ ಮಾಡುವಂತೆ ಶ್ರೀರಾಮ ಸೇನೆ ಕರೆ ನೀಡಿದೆ.
ಇನ್ನು, ಮುಸ್ಲಿಂರಿಂದ ಯಾವ ವಸ್ತುವನ್ನೂ ಖರೀದಿ ಮಾಡದಂತೆ ಮನವಿ ಮಾಡಿದ್ದು, ಕೇವಲ ಹಿಂದೂಗಳಿಂದ ಮಾತ್ರ ಖರೀದಿ ಮಾಡುವಂತೆ ರಾಜ್ಯದ ಎಲ್ಲಾ ಗಣೇಶ ಉತ್ಸವ ಸಮಿತಿಗಳಿಗೆ ಪ್ರಮೋದ್ ಮುತಾಲಿಕ್ ಮನವಿ ಮಾಡಿದ್ದಾರೆ. ಇನ್ನು, ಹಬ್ಬ ಆಚರಣೆ ವೇಳೆ ಡಿಜೆ ಬಳಸದಂತೆ ಶ್ರೀರಾಮ ಸೇನೆ ಮನವಿ ಮಾಡಿದ್ದು, ಡಿಜೆ ಬದಲು ಮೈಕ್ ಸೆಟ್ ಬಳಸುವಂತೆಯೂ ಮನವಿ ಮಾಡಿದ್ದಾರೆ. ಮಸೀದಿಗಳಲ್ಲಿ ಅಜಾನ್ ನಿಂದ ಹೆಚ್ಚು ಶಬ್ದ ಬರ್ತಿದ್ರೂ ಕ್ರಮ ಕೈಗೊಳ್ಳದ ಸರ್ಕಾರ. ಹೀಗಾಗಿ ಹಿಂದೂಗಳಿಗೆ ವಿನೂತನ ರೀತಿಯಲ್ಲಿ ಶ್ರೀರಾಮ ಸೇನೆ ಕರೆಕೊಟ್ಟಿದ್ದಾರೆ.