Sunday, December 22, 2024

ರಿವೀಲ್ ಆಯ್ತು ಡಾಲಿ ಮಾನ್ಸೂನ್ ರಾಗದ ಗಮ್ಮತ್ತು..!

ಈ ಬಾರಿಯ ಮಾನ್ಸೂನ್ ಮಳೆಯಲ್ಲಿ ಮಾನ್ಸೂನ್ ರಾಗ ಕೂಡ ಜೋರಾಗೇ ಅಬ್ಬರಿಸುತ್ತಿದೆ. ಯೆಸ್.. ನಟರಾಕ್ಷಸ ಡಾಲಿ ಧನಂಜಯ- ಡಿಂಪಲ್ ಕ್ವೀನ್ ರಚಿತಾ ರಾಮ್ ಇದೇ ಮೊದಲ ಬಾರಿ ಬಿಗ್ ಸ್ಕ್ರೀನ್ ಮೇಲೆ ಮೋಡಿ ಮಾಡೋಕೆ ಕಾತರರಾಗಿದ್ದಾರೆ. ಟೀಸರ್ ಹಾಗೂ ಸಾಂಗ್ಸ್​ನಿಂದ ಗುಂಗಿಡಿಸಿರೋ ಈ ಚಿತ್ರದ ಟ್ರೈಲರ್ ಹೇಗಿದೆ..? ರಚ್ಚು ಸೆಕ್ಸ್ ವರ್ಕರ್ ಪಾತ್ರದ ಹಿಂದಿನ ಔಚಿತ್ಯವೇನು ಅನ್ನೋದನ್ನ ನೀವೇ ಓದಿ.

  • ಟ್ರೈಲರ್ ಲಾಂಚ್​ ಫಂಕ್ಷನ್​​ನಲ್ಲಿ ರಚಿತಾ ರಾಮ್ ಪ್ರತ್ಯಕ್ಷ
  • ಸೆಕ್ಸ್ ವರ್ಕರ್ ಪಾತ್ರದಲ್ಲಿ ರಚ್ಚು.. ಕ್ಲಾಸಿಕ್ ಡ್ಯಾನ್ಸರ್ ಯಶಾ
  • ಲಾಂಗ್ ಗ್ಯಾಪ್​ನ ನಂತ್ರ ಕನ್ನಡದಲ್ಲಿ ಸುಹಾಸಿನಿ ಮಿಂಚು..!

ಮುಂಗಾರು ಮಳೆ ಟೈಟಲ್​ನಂತೆ ಮಾನ್ಸೂನ್ ರಾಗ ಶೀರ್ಷಿಕೆ ಕೂಡ ಕೇಳೋಕೆ ಹಿತ ಅನಿಸುತ್ತೆ. ಸದ್ಯ ಬೊಂಬಾಟ್ ಟೈಟಲ್​ನಿಂದ ಎಲ್ಲರ ಮನಸ್ಸು ಗೆದ್ದಿದ್ದ ಮಾನ್ಸೂನ್ ರಾಗ ಟೀಂ, ಪಾತ್ರಗಳು, ಅದ್ರ ಮೇಕಿಂಗ್ ಝಲಕ್, ಕಥೆಯಿಂದ ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರ ಆಗಿದೆ. ರೀಸೆಂಟ್ ಆಗಿ ಅದ್ರ ಟ್ರೈಲರ್ ಲಾಂಚ್ ಆಗಿದ್ದು, ಭಿನ್ನ ಅಲೆಯ ಸಿನಿಮಾ ಆಗೋ ಮನ್ಸೂಚನೆ ನೀಡಿದೆ.

ರವೀಂದ್ರನಾಥ್ ಆ್ಯಕ್ಷನ್ ಕಟ್ ಹೇಳಿರೋ ಈ ದೃಶ್ಯಕಾವ್ಯ ವಿಖ್ಯಾತ್ ಸ್ಟುಡಿಯೋಸ್ ಬ್ಯಾನರ್​ನಡಿ ವಿಖ್ಯಾತ್ ನಿರ್ಮಿಸಿದ್ದಾರೆ. ಇನ್ನು ಇದೇ ಮೊದಲ ಬಾರಿ ಡಾಲಿ ಧನಂಜಯ ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್ ಒಟ್ಟಿಗೆ ಒಂದೇ ಚಿತ್ರದಲ್ಲಿ ಕಾಣಿಸಿಕೊಂಡಿದ್ದು, ಪ್ರಯೋಗಾತ್ಮಕ ಪಾತ್ರಗಳಿಂದ ಇಷ್ಟವಾಗ್ತಿದ್ದಾರೆ.

ಎಲ್ರೂ ಹುಬ್ಬೇರಿಸೋ ಅಂತಹ ಸೆಕ್ಸ್ ವರ್ಕರ್ ಪಾತ್ರದಲ್ಲಿ ರಚ್ಚು ಕಾಣಸಿಗಲಿದ್ದಾರೆ. ಇನ್ನು ಟ್ರೈಲರ್ ಲಾಂಚ್​ ವೇಳೆ ಮಾತನಾಡಿದ ಬುಲ್ ಬುಲ್ ಬ್ಯೂಟಿ, ಡಾಲಿ ನಿಜಕ್ಕೂ ನಟ ರಾಕ್ಷಸ. ನನಗೆ ಈ ಪಾತ್ರ ಸಖತ್ ಚಾಲೆಂಜ್ ಆಗಿತ್ತು. ಅದನ್ನ ಬಹಳ ಸೂಕ್ಷ್ಮವಾಗಿ ಕಟ್ಟಿಕೊಡೋ ಕಾರ್ಯ ಚಿತ್ರತಂಡ ಮಾಡಿದೆ ಅಂತ ಬಹಳ ದಿನಗಳ ನಂತ್ರ ಮೀಡಿಯಾ ಮುಂದೆ ಬಂದ ರಚಿತಾ ಹಂಚಿಕೊಂಡರು.

ಲುಂಗಿ ಕಾಸ್ಟ್ಯೂಮ್​ನಲ್ಲಿ ಅಟ್ರ್ಯಾಕ್ಟ್ ಆಗೋ ಡಾಲಿ, ಭೂಗತಲೋಕಕ್ಕೂ ಟಚ್ ಇರೋ ಕಥಾನಕದಲ್ಲಿ ಌಕ್ಷನ್ ಗತ್ತಿನಿಂದ ಪ್ರೇಕ್ಷಕರ ನಾಡಿಮಿಡಿತ ಹೆಚ್ಚಿಸಿದ್ದಾರೆ. ಅಲ್ಲದೆ, ಸೆಕ್ಸ್ ವರ್ಕರ್ ಹಾಗೂ ಕ್ಲಾಸಿಕಲ್ ಡ್ಯಾನ್ಸರ್ ಯಶಾ ಶಿವಕುಮಾರ್ ಇಬ್ಬರ ಜೊತೆಗೂ ರೊಮ್ಯಾನ್ಸ್ ಮಾಡಲಿದ್ದಾರೆ. ಅಂದಹಾಗೆ ಇದು ಪಕ್ಕಾ ಫ್ಯಾಮಿಲಿ ಆಡಿಯೆನ್ಸ್ ನೋಡೋ ಸಿನಿಮಾ, ದಯವಿಟ್ಟು ಸಕುಟುಂಬ ಸಮೇತ ಥಿಯೇಟರ್​ಗೆ ಬಂದು ನೋಡಿ ಅಂತ ವಿನಂತಿಸಿದ್ದಾರೆ.

ಇಲ್ಲಿ ಬಹುಭಾಷಾ ನಟಿ ಸುಹಾಸಿನಿ ಹಾಗೂ ಅಚ್ಯುತ್ ಕುಮಾರ್ ಅವ್ರ ಜೋಡಿ ಸಿನಿಮಾದ ತೂಕ ಹೆಚ್ಚಿಸಿದೆ. ಬಹಳ ದಿನಗಳ ನಂತ್ರ ಕನ್ನಡಕ್ಕೆ ವಾಪಸ್ಸಾಗಿರೋ ಸುಹಾಸಿನಿ ಮುದ್ದಾದ ಮೂತಿ ಅಚ್ಯುತ್​ ಪ್ರೇಯಸಿಯಾಗಿ ರಂಜಿಸಲಿದ್ದಾರೆ. ಗುರು ಕಶ್ಯಪ್ ಸಂಭಾಷಣೆ ಚಿತ್ರಕ್ಕಿದ್ದು, ಎಸ್ ಕೆ ರಾವ್ ಸಿನಿಮಾಟೋಗ್ರಫಿ, ಅನೂಪ್ ಸೀಳಿನ್ ಸಂಗೀತ ಸೂಪರ್ ಅನಿಸಿದೆ.

ಅಂದಹಾಗೆ ಟೀಸರ್ ಹಾಗೂ ಸಾಂಗ್ಸ್​ನಿಂದ ಸಿನಿಮಾ ಮೇಲಿನ ಕುತೂಹಲ ಹೆಚ್ಚಿಸಿದ್ದ ಮಾನ್ಸೂನ್ ರಾಗ, ಇದೀಗ ಟ್ರೈಲರ್​ನಿಂದ ಅಸಲಿಯತ್ತು ಬಿಟ್ಟುಕೊಟ್ಟಿದೆ. ಶೇಕಡಾ 80ರಷ್ಟು ಸಿನಿಮಾ ಬರೀ ಮಳೆಯಲ್ಲೇ ಚಿತ್ರಿತವಾಗಿದ್ದು, ಇದೇ ಆಗಸ್ಟ್ 19ಕ್ಕೆ ಪ್ರೇಕ್ಷಕರ ಮುಂದೆ ಬರ್ತಿದೆ. ಮಳೆಯಲಿ ಜೊತೆಯಲಿ ಮ್ಯೂಸಿಕಲಿ ಮನಸು ತಣಿಸಿಕೊಳ್ಳೋಕೆ ನೀವು ಸಜ್ಜಾಗಿ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವ

RELATED ARTICLES

Related Articles

TRENDING ARTICLES