Monday, December 23, 2024

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಈ ಜನ್ಮದಲ್ಲಿ‌ ಒಂದಾಗುವ ಪ್ರಶ್ನೆ ಇಲ್ಲ : ಕೆ.ಎಸ್.ಈಶ್ವರಪ್ಪ

ಶಿವಮೊಗ್ಗ : ರಾಜ್ಯದಲ್ಲಿ ಅವರು ಅಧಿಕಾರ ನಡೆಸಿ, ನಡೆಸಿ, ರಾಜ್ಯದ ಜನ ನೀವು ಅಯೋಗ್ಯರು ಇದ್ದೀರಾ, ನೀವು ಬಡವರು, ದಲಿತರ ಪರ ಇಲ್ಲ ಅಂತಾ ಕಿತ್ತು ಬಿಸಾಕಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು 75 ವರ್ಷದ ಹುಟ್ಟು ಹಬ್ಬ ಆಚರಣೆ ಮಾಡಿದ ಮೇಲೆ ಅದರ ಬಗ್ಗೆ ಚರ್ಚೆ ಮಾಡುವ ಅವಶ್ಯಕತೆ ಇಲ್ಲ. ಇಡೀ ರಾಜ್ಯದ ಜನ ಅವರಿಗೆ ಒಳ್ಳೆಯದಾಗಲಿ ಅಂತಾ ಎಲ್ಲರೂ ಶುಭ ಕೋರಿದ್ದಾರೆ.ರಾಷ್ಟ್ರದ ಹಿತದೃಷ್ಟಿಯಿಂದ ಒಳ್ಳೆಯ ಕೆಲಸ ಮಾಡಿ. ರಾಷ್ಟ್ರದ್ರೋಹಿಗಳಿಗೆ ಬೆಂಬಲಿಸಬೇಡಿ. ಅವರ ಪಕ್ಷದಲ್ಲಿ ಸಂತೋಷಪಡುವವರು ಸಂತೋಷಪಟ್ಟಿದ್ದಾರೆ. ಹೊಟ್ಟೆ ಉರಿದುಕೊಳ್ಳುವವರು ಹೊಟ್ಟೆ ಉರಿದುಕೊಂಡಿದ್ದಾರೆ ಎಂದರು.

ಸಿದ್ದರಾಮೋತ್ಸವದಿಂದ ಬಿಜೆಪಿ ವಿಚಲಿತ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅವರ ಕಾರ್ಯಕ್ರಮ ನೋಡಿ ನಾವು ನಿದ್ದೆ ಮಾಡ್ತಿಲ್ಲ, ಊಟ ಮಾಡ್ತಿಲ್ಲ, ತಿಂಡಿ ತಿನ್ನುತ್ತಿಲ್ಲ. ನಾವು ಇಂತಹ ನೂರು ಕಾರ್ಯಕ್ರಮ ಮಾಡಿದ್ದೇವೆ. ಅವರು ಒಟ್ಟಾಗಿ ಮಾಡಿದ್ದೇವೆ ಅಂದ್ರು. ಒಟ್ಟಾಗಿ ಮಾಡಿ ಅವರ ಜೀವನದಲ್ಲೇ ಗೊತ್ತಿಲ್ಲ. ಒಂದಾಗಿ ಅನ್ನುವ ಪ್ರಶ್ನೆಯೇ ಇಲ್ಲ. ಕಾರ್ಯಕ್ರಮದಿಂದ ಕಾಂಗ್ರೆಸ್ ನ ಆಂತರಿಕ ಗೊಂದಲ ಸಾಕಷ್ಟು ಜಾಸ್ತಿಯಾಗಿದೆ. ರಾಹುಲ್ ಗಾಂಧಿ ಹೀಗೆ ಅಪ್ಪಿಕೊಳ್ಳಿ, ಹೀಗೆ ಅಪ್ಪಿಕೊಳ್ಳಿ ಅಂತಾ ತೋರಿಸಿಕೊಟ್ರು. ಅವರ ರಾಷ್ಟ್ರೀಯ ನಾಯಕರು ಅಪ್ಪಿಕೊಳ್ಳಿ ಅಂತಾ ಹೇಳಿಕೊಡಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಈ ಜನ್ಮದಲ್ಲಿ‌ ಒಂದಾಗುವ ಪ್ರಶ್ನೆ ಇಲ್ಲ. ರಾಜ್ಯದಲ್ಲಿ ಅವರು ಅಧಿಕಾರ ನಡೆಸಿ, ನಡೆಸಿ, ರಾಜ್ಯದ ಜನ ನೀವು ಅಯೋಗ್ಯರು ಇದ್ದೀರಾ, ನೀವು ಬಡವರು, ದಲಿತರ ಪರ ಇಲ್ಲ ಅಂತಾ ಕಿತ್ತು ಬಿಸಾಕಿದ್ದಾರೆ ಎಂದು ಹೇಳಿದರು.

ಪ್ರವೀಣ್ ಹತ್ಯೆ ವಿಚಾರವಾಗಿ ಮಾತನಾಡಿದ ಅವರು, ಈ ಪ್ರಕರಣವನ್ನು ANIಗೆ ವಹಿಸಿದೆ. ANI ರಾಷ್ಟ್ರದ್ರೋಹಿಗಳನ್ನು ಎಲ್ಲೆಲ್ಲಿ ಇದ್ದಾರೆ ಅಂತಾ ಹುಡುಕಿ ತೆಗೆಯುತ್ತಾರೆ. ರಾಜ್ಯದಲ್ಲಿ ರಾಷ್ಟ್ರದ್ರೋಹಿಗಳನ್ನು ಬೆಳೆಯಲು ಯಾವುದೇ ಕಾರಣಕ್ಕೂ ಬಿಡಲ್ಲ ಎಂದರು.

RELATED ARTICLES

Related Articles

TRENDING ARTICLES