Monday, December 23, 2024

ಯಡಿಯೂರಪ್ಪನವರು ಪ್ರಶ್ನಾತೀತ ನಾಯಕರಲ್ಲಿ ಒಬ್ಬರು : ಕೋಟಾ ಶ್ರೀನಿವಾಸ ಪೂಜಾರಿ

ಹಾವೇರಿ : ಯಡಿಯೂರಪ್ಪ ನವರ ನಾಯಕತ್ವ, ಕೆಂದ್ರ ಹಾಗೂ ರಾಜ್ಯ ಸರಕಾರದ ಅಭಿವೃದ್ಧಿ, ಸಂಘಟನಾತ್ಮಕ ಹೋರಾಟ, ಸೈದ್ಧಾಂತಿಕ ಹೋರಾಟದ ಮೂಲಕ ಅಧಿಕಾರಕ್ಕೆ ಬರುತ್ತೇವೆ ಎಂದು ಹಾವೇರಿಯಲ್ಲಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ನವರು 75 ವರ್ಷ ಆಗಿದ್ದಕ್ಕೆ ಉತ್ಸವ ಆಚರಿಸಿಕೊಂಡಿದ್ದಾರೆ. ಆ ಉತ್ಸವಕ್ಕು ರಾಜಕಾರಣಕ್ಕು ಏನು ಸಂಬಂಧವಿಲ್ಲ. 2023 ರಲ್ಲಿ ನಿಶ್ಚಯವಾಗಿ ಅಧಿಕಾರಕ್ಕೆ ಬರುತ್ತೇವೆ ಎಂದರು.

ಇನ್ನು, ಕಾಲ ಕಾಲಕ್ಕೆ ನಾವು ಸಮಾವೇಶ ಮಾಡಿದ್ದೆವೆ, ಸಿದ್ದರಾಮಯ್ಯ ನವರು ಮಾಡಿದ್ದಾರೆ ಎನ್ನುವ ಕಾರಣಕ್ಕೆ ಬಿಜೆಪಿ ಸಮಾವೇಶ ಮಾಡುತ್ತಿಲ್ಲ. ಸಿದ್ದರಾಮಯ್ಯನವರ ಖಾಸಗಿ ಉತ್ಸವಕ್ಕು ರಾಜಕೀಯ ಬದಲಾವಣೆಗೆ ಸಂಬಂಧವಿಲ್ಲ. ಯಡಿಯೂರಪ್ಪನವರು ಪ್ರಶ್ನಾತೀತ ನಾಯಕರಲ್ಲಿ ಒಬ್ಬರು. ರಾಜ್ಯದಲ್ಲಿ ಪಾರ್ಟಿಯನ್ನ ಕಟ್ಟಿದವರು ಈಗಲು ಮುನ್ನಡೆಸುವವರು. ಯಾರು ಯಾರಿಗೂ ಉತ್ತರಾಧಿಕಾರಿಯಲ್ಲ, ವಿಜಯೇಂದ್ರ ಬಿಜೆಪಿ ಉಪಾಧ್ಯಕ್ಷರು, ಯಡಿಯೂರಪ್ಪನವರ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತೇವೆ ಎಂದು ಹೇಳಿದರು.

RELATED ARTICLES

Related Articles

TRENDING ARTICLES