Friday, November 22, 2024

ಮಳೆ ಆರ್ಭಟ : ಹೊಗೆನಕಲ್ ಜಲಪಾತವೇ ಮುಳುಗಡೆ

ಚಾಮರಾಜನಗರ : ಪ್ರಸಿದ್ಧ ಪ್ರವಾಸಿತಾಣ, ಭಾರತದ ನಯಾಗರ ಎಂದು ಕರೆಯುವ ಚಾಮರಾಜನಗರ ಜಿಲ್ಲೆಯ ಹೊಗೆನಕಲ್ ಜಲಪಾತವೇ ಕಣ್ಮರೆಯಾಗಿದೆ, ಮಳೆ ಆರ್ಭಟದಿಂದ ಜಲಪಾತದ ಮೇಲೆ ನೀರು ಹರಿಯುತ್ತಿದೆ.

ಕಾವೇರಿ ಜಲಾನಯನ ಪ್ರದೇಶದಲ್ಲಿ ಅತಿಹೆಚ್ಚು ಮಳೆಯಾಗುತ್ತಿರುವುದು ಜೊತೆಗೆ ಕಾವೇರಿ ಹೊರಹರಿವು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಜಲಪಾತವೇ ಸಂಪೂರ್ಣ ಮುಳುಗಡೆಯಾಗಿದ್ದು ಫಾಲ್ಸ್ ಕಣ್ಮರೆಯಾಗಿದೆ. ಹೊಗೆನಕಲ್ ನಲ್ಲಿ ಧುಮ್ಮಿಕ್ಕುವ ದೃಶ್ಯ ಬದಲಾಗಿ ಎಲ್ಲಿ ನೋಡಿದರೂ ಕಾವೇರಿ ಹರಿದಾಟವೇ ಕಾಣುತ್ತಿದೆ.

ತಮಿಳುನಾಡು ಭಾಗದಲ್ಲಿ ಜಲಪಾತ ವೀಕ್ಷಣೆ ಮಾಡುವ ಜಾಗ ಹಾಗೂ ನೀರಾಟ ಆಡುವ ಸ್ಥಳವೂ ಜಲಾವೃತವಾಗಿದ್ದು ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.

ಗ್ರಾಮಗಳು ಪ್ರವಾಹ ಭೀತಿ ಎದುರಿಸುತ್ತಿವೆ. ಹೊಗೆನಕಲ್‌, ಗೋಪಿನಾಥಂಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿರುವ ಸೇತುವೆ ನೀರಿನಿಂದ ಆವೃತಗೊಂಡಿದ್ದು ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ. ಪ್ರವಾಸಿಗರನ್ನು ವಾಪಾಸ್ ಕಳುಹಿಸಲಾಗುತ್ತಿದೆ. ಒಟ್ಟಿನಲ್ಲಿ ಮಳೆ ಆರ್ಭಟ ಎಷ್ಟರ ಮಟ್ಟಿಗೆ ಇದೆ ಎಂಬುದಕ್ಕೆ ಜಲಪಾತವೇ ಮುಳುಗಡೆಯಾಗಿರುವುದು ಸಾಕ್ಷೀಕರಿಸುತ್ತದೆ.

RELATED ARTICLES

Related Articles

TRENDING ARTICLES