Friday, January 10, 2025

ಮನೆಯ ಕಾಂಪೌಂಡ್​​ಗೆ ಬಂದು ನಾಯಿ ಹೊತ್ತೊಯ್ದ ಚಿರತೆ

ಹಾಸನ : ಮನೆಯ ಕಾಂಪೌಂಡ್ ಗೆ ಬಂದು ನಾಯಿ ಹೊತ್ತೊಯ್ದ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳದಲ್ಲಿ ನಡೆದಿದೆ.

ಮನೆಯ ಬಳಿ ತಡರಾತ್ರಿ 1 ಗಂಟೆ ಸಮಾರಿನಲ್ಲಿ ಬಂದ ಚಿರತೆ, ಕಾಂಪೌಂಡ್ ನೆಗೆದು ಬಂದು ಬಾಕ್ಸ್ ಗೆ ಕಟ್ಟಿದ್ದ ನಾಯಿಯನ್ನು ಸಾಯಿಸಿ ಹೊತ್ತೊಯ್ದಿದೆ. ನಾಯಿಯನ್ನ ಹೊತ್ತೊಯ್ಯಲು ಚಿರತೆ ಹರಸಾಹಸ ಪಟ್ಟಿದೆ. ಬಾಕ್ಸ್​​ಗೆ ನಾಯಿಯನ್ನು ಕಟ್ಟಿದ್ದರಿಂದ ಹೊತ್ತೊಯ್ಯಲು ಚಿರತೆ ಹೆಣಗಾಡಿದೆ.

ಇನ್ನು, ಚಿರತೆ ನಾಯಿಯನ್ನ ಹೊತ್ತೊಯ್ಯೋ ಹಾಗೂ ಹೊಂಚುಹಾಕೋ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಭಾರಿ ಮಳೆಯಿಂದ ಕಂಗಾಲಾಗಿದ್ದ ಜನರಿಗೆ ಈಗ ಚಿರತೆಯ ದಾಳಿಯಿಂದ ಮತ್ತಷ್ಟು ಆತಂಕಗೊಂಡಿದ್ದು, ಅರಣ್ಯ ಇಲಾಖೆ ವಲಯ ಅರಣ್ಯಾಧಿಕಾರಿ ಪಲ್ಲವಿಯವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬೋನು ಇರಿಸಿ ಚಿರತೆ ಸೆರೆ ಹಿಡಿಯಲು ಕ್ರಮ ವಹಿಸುವಹಿಸುವಂತೆ ಭರವಸೆ ನೀಡಿದ್ದಾರೆ.

RELATED ARTICLES

Related Articles

TRENDING ARTICLES