Monday, December 23, 2024

ಗಾಳಿಪಟ- 2 ಸಾಂಗ್ ಗುನುಗಿದ ಅಭಿನಯ ಚಕ್ರವರ್ತಿ

ನಾವು ಬದುಕಿರಬಹುದು ಪ್ರಾಶಯಃ.. ಇಲ್ಲ, ಕನಸಿರಬಹುದು ಇದು ಪ್ರಾಶಯಃ.. ಇಲ್ಲ, ಎಲ್ಲಾ ಸರಿ ಇರಬಹುದು ಭಾಗಶಃ ಅಂತಿದ್ದಾರೆ ವಿಕಟಕವಿ ಯೋಗ್ರಾಜ್ ಭಟ್. ಇನ್ನು ಭಟ್ರ ಈ ಪದಗಳ ಹಿಂದಿನ ಎಮೋಷನ್ ಕಂಡು ಆಲ್ ಇಂಡಿಯಾ ಕಟೌಟ್ ಕಿಚ್ಚನೇ ಪರವಶರಾಗಿಬಿಟ್ಟಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಸೇರಿದಂತೆ ಎಲ್ಲರನ್ನ ಹಾಡಿ ಹೊಗಳಿರೋ ಸುದೀಪ್, ಕಂಪ್ಲೀಟ್ ಸಾಂಗ್​ನ ರಿವ್ಯೂ ಮಾಡಿದ್ದಾರೆ.

  • ಯೋಗರಾಜ್ ಭಟ್ರ ‘ಪ್ರಾಯಶಃ’ಕ್ಕೆ ಸುದೀಪ್ ಪರವಶ
  • ಫನ್ ಜೊತೆ ಹೈ ವೋಲ್ಟೇಜ್ ಎಮೋಷನ್ ಎಂದ ಕಿಚ್ಚ
  • ಅಬ್ಬಬ್ಬಾ..! ಕಂಪ್ಲೀಟ್ ಸಾಂಗ್​ಗೆ ರೋಣನ ರಿವ್ಯೂ..!

ಯೆಸ್.. ಮೋಸ್ಟ್ ಎಕ್ಸ್​ಪೆಕ್ಟೆಡ್ ಮೂವಿ ಆಫ್ ದಿ ಇಯರ್ ಗಾಳಿಪಟ-2 ಚಿತ್ರದ ಆಲ್ಬಂನಿಂದ ಮತ್ತೊಂದು ಬ್ಯೂಟಿಫುಲ್ ಸಾಂಗ್ ರಿಲೀಸ್ ಆಗಿದೆ. ಪ್ರಾಯಶಃ ಅನ್ನೋ ಈ ಹಾಡು ಇಂಟೆನ್ಸ್ ಎಮೋಷನ್ಸ್ ಜೊತೆ ಚಿತ್ರದ ತಿರುಳನ್ನ ಹೊತ್ತು ಬಂದಂತಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಇದನ್ನ ಲಾಂಚ್ ಮಾಡಿ, ಮೆಚ್ಚುಗೆ ವ್ಯಕ್ತಪಡಿಸಿರೋದು ಇಂಟರೆಸ್ಟಿಂಗ್ ಅನಿಸಿದೆ.

ಫನ್ ಜೊತೆ ಹೈ ವೋಲ್ಟೇಜ್ ಎಮೋಷನ್ ಇದ್ದಂತಿದೆ ಎಂದಿರೋ ಸುದೀಪ್, ಈ ಹಾಡನ್ನ ಗುನುಗೋ ಮೂಲಕ ಇದು ಡೈಲಿ ಅಡಿಕ್ಟ್ ಟಾನಿಕ್ ಆಗಲಿದೆ ಎಂದಿದ್ದಾರೆ. ಅಷ್ಟೇ ಅಲ್ಲ, ಚಿತ್ರದ ಲೀಡ್​ನಲ್ಲಿರೋ ಗೋಲ್ಡನ್ ಸ್ಟಾರ್ ಗಣೇಶ್ ಸೇರಿದಂತೆ ಎಲ್ಲಾ ಕಲಾವಿದರು ಹಾಗೂ ತಂತ್ರಜ್ಞರ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದಾರೆ. ಆ ಮೂಲಕ ಸಾಂಗ್​ನ ರಿವ್ಯೂ ಮಾಡಿರೋದು ಇಂಪ್ರೆಸ್ಸೀವ್.

ಯೋಗರಾಜ್ ಭಟ್​ರ ಸಾಹಿತ್ಯ ಇಷ್ಟೊಂದು ಡೆಪ್ತ್ ಇರಲ್ಲ ಎಂದಿರೋ ಕಿಚ್ಚ, ಅವ್ರ ಸಾಲುಗಳಿಗೆ ಅಕ್ಷರಶಃ ಪರವಶನಾಗಿದ್ದಾರೆ. ಅರ್ಜುನ್ ಜನ್ಯಾ ಸಂಗೀತ, ಸೋನು ನಿಗಮ್ ಕಂಠದಲ್ಲಿನ ಈ ಪ್ಯಾಥೋ ಸಾಂಗ್, ಚಿತ್ರದ ಗಮ್ಮತ್ತು ಹೆಚ್ಚಿಸಿದೆ. ನಿರ್ಮಾಪಕ ರಮೇಶ್ ರೆಡ್ಡಿ ಅವ್ರಿಗೆ ಇಂತಹ ಒಳ್ಳೆಯ ಸಿನಿಮಾಗಳನ್ನ ಮಾಡಲು ಮನವಿ ಮಾಡಿದ್ದಲ್ಲದೆ, ಗಾಳಿಪಟ ಫ್ರಾಂಚೈಸ್ ಚಿತ್ರವನ್ನ ಹಾಡಿ ಹೊಗಳಿದ್ದಾರೆ ನಮ್ಮ ಆಲ್ ಇಂಡಿಯಾ ಕಟೌಟ್.

ಅಂದಹಾಗೆ ಈ ಚಿತ್ರ ಇದೇ ಆಗಸ್ಟ್ 12ಕ್ಕೆ ತೆರೆಗಪ್ಪಳಿಸಲಿದ್ದು, ಮೇಷ್ಟ್ರು ಹಾಗೂ ಶಿಷ್ಯರ ನಡುವಿನ ಹಾಸ್ಯ, ತರಲೆ, ತುಂಟತನದ ಜೊತೆಗೆ ಭಾವನಾತ್ಮಕ ಬೆಸುಗೆಯ ಕಥೆಯನ್ನ ಉಣಬಡಿಸಲಿದೆ. ಮಳೆ ಹುಡ್ಗ ಗಣಿಗೆ ದಿಗಂತ್, ಪವನ್ ಕುಮಾರ್ ಸಾಥ್ ನೀಡಿದ್ದು, ಸಂಯುಕ್ತಾ ಮೆನನ್, ವೈಭವಿ ಶಾಂಡಿಲ್ಯ ಹಾಗೂ ಶರ್ಮಿಳಾ ಮಾಂಡ್ರೆ ನಾಯಕಿಯರಾಗಿ ಗ್ಲಾಮರ್ ಹೆಚ್ಚಿಸಿದ್ದಾರೆ.

ಇನ್ನು ಅನಂತ್​ನಾಗ್ ಕನ್ನಡ ಮೇಷ್ಟ್ರಾಗಿ ಚಿತ್ರದ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿದ್ದು, ಚಿತ್ರಕ್ಕೆ ಗ್ರಾಮರ್ ಅನಿಸಿದ್ದಾರೆ. ನಿಶ್ವಿಕಾ ನಾಯ್ಡು ಕೂಡ ವಿಶೇಷ ಪಾತ್ರದಲ್ಲಿ ಕಾಣಸಿಗಲಿದ್ದು, ರಂಗಾಯಣ ರಘು, ಸುಧಾ ಬೆಳವಾಡಿ, ಶ್ರೀನಾಥ್, ಪದ್ಮಜಾರಾವ್ ಸೇರಿದಂತೆ ದೊಡ್ಡ ತಾರಾಗಣವಿದೆ. ವಿಶ್ಯುವಲ್ ಟ್ರೀಟ್ ನೀಡಲಿರೋ ದೃಶ್ಯಚಿತ್ತಾರದಿಂದ ನೋಡುಗರನ್ನ ಮಂತ್ರಮುಗ್ಧಗೊಳಿಸಲಿದೆ ಕಲರ್​ಫುಲ್ ಗಾಳಿಪಟ.

ಒಟ್ಟಾರೆ ಗಣಿ- ಭಟ್ರ ಸಿನಿಮಾಗಳು ಫ್ರೆಶ್ ಫೀಲ್ ಕೊಡೋದಲ್ಲದೆ, ಚರಿತ್ರೆಯನ್ನ ಸೃಷ್ಟಿಸಿವೆ. ಮನರಂಜನೆಯ ರಸಪಾಕದ ಜೊತೆ ಬಾಕ್ಸ್ ಆಫೀಸ್ ಧೂಳೆಬ್ಬಿಸಿವೆ. ಇದೀಗ ಈ ಬಾರಿಯ ಗಾಳಿಪಟ ಯಾವ ರೀತಿ ಕನ್ನಡಿಗರ ಮನೆ, ಮನಗಳನ್ನು ಹೊಕ್ಕಲಿದೆ ಅನ್ನೋದನ್ನ ಇನ್ನಷ್ಟೇ ಕಾದುನೋಡಬೇಕಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES