Sunday, January 12, 2025

ಗೊರವನಹಳ್ಳಿ ಮಹಾಲಕ್ಷ್ಮಿಗೆ ವಿಶೇಷ ಪೂಜೆ

ತುಮಕೂರು : ವರಮಹಾಲಕ್ಷ್ಮೀ ಹಬ್ಬ ಹಿನ್ನೆಲೆ ಜಿಲ್ಲೆಯ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಗೊರವನಹಳ್ಳಿಯಲ್ಲಿ ಮಹಾಲಕ್ಷ್ಮಿ ದೇವಿಗೆ ವಿಶೇಷ ಪುಷ್ಪಾಲಂಕಾರ ಮಾಡಲಾಯ್ತು.

ದೇವಾಲಯ ಹೊರಭಾಗದಲ್ಲೂ ಹಾಗೂ ಒಳಭಾಗದಲ್ಲಿ ವಿಶೇಷ ಅಲಂಕಾರ ಮಾಡಿದ್ದು, ಮುಂಜಾನೆಯೇ ದೂರದೂರದಿಂದ ಮಳೆಯ ಆತಂಕದ ನಡುವೆಯೂ ಭಕ್ತರು ಆಗಮಿಸಿದ್ರು. ಬೆಳಗ್ಗೆ 6 ಗಂಟೆಗೆ ಪಂಚಾಮೃತ ಅಭಿಷೇಕ ನಡೆಯಿತು.

ಕೊರೋನಾ ಹಿನ್ನೆಲೆ ಕಳೆದ 2 ವರ್ಷಗಳಿಂದ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಈ ಬಾರಿ ಬರುವಂತಹ ಭಕ್ತಾದಿಗಳಿಗೆ ತೀರ್ಥ ಪ್ರಸಾದಕ್ಕೆ ಅವಕಾಶ ನೀಡಲಾಯ್ತು. ಅಲ್ಲದೇ, ವೃದ್ದರಿಗೆ ಹಾಗೂ ವಿಶೇಷ ಚೇತನರಿಗೆ ಪ್ರತ್ಯೇಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಯ್ತು.

RELATED ARTICLES

Related Articles

TRENDING ARTICLES