Monday, December 23, 2024

ಅಂಬಿ ಸಂಭ್ರಮದಂತೆ ಶಿವಣ್ಣ ಸಂಭ್ರಮಕ್ಕೆ ಮೆಗಾ ಪ್ಲಾನ್

‘ನಭೂತೋ ನಭವಿಷ್ಯತ್’. ಯೆಸ್​​.. ಸ್ಯಾಂಡಲ್​​ವುಡ್​ನಲ್ಲಿ ಹಿಂದೆಂದೂ ನೋಡಿರದ, ಮುಂದೆಯೂ ಕಂಡು ಕೇಳರಿಯದಂತಹ ಮಹಾ ಸಂಭ್ರಮಕ್ಕೆ ತೆರೆಮರೆಯ ತಯಾರಿ ನಡೀತಿದೆ. ಕರುನಾಡ ಚಕ್ರವರ್ತಿ ಡಾ. ಶಿವರಾಜ್​ಕುಮಾರ್ ಬರ್ತ್​ಡೇನಾ ಇಡೀ ಇಂಡಿಯಾ ತಿರುಗಿ ನೋಡುವಂತೆ ಆಚರಿಸೋಕೆ ಭರ್ಜರಿ ಪ್ಲಾನ್​ ನಡೀತಿದೆ. ಆ ಸ್ಪೆಷಲ್ ಸೆಲೆಬ್ರೇಷನ್​ಗೆ ಕೌಂಟ್​ಡೌನ್ ಶುರುವಾಗಿದ್ದು, ಹೇಗಿರಲಿದೆ ಶಿವಣ್ಣನ 60ರ ಸಂಭ್ರಮ ಅಂತೀರಾ ನೀವೇ ಓದಿ.

  • ಸೆಂಚುರಿ ಸ್ಟಾರ್​​, ಕ್ರೇಜಿಸ್ಟಾರ್​​ ಮಹಾ ತಾರೆಗಳ ಉತ್ಸವ..!

ಕರುನಾಡು ಕಂಡ ಅದ್ಬುತ ಕಲಾವಿದ ಹ್ಯಾಟ್ರಿಕ್​ ಹೀರೋ ಶಿವರಾಜ್​​​ ಕುಮಾರ್​​​. ಬಂಗಾರ ಸನ್​ ಆಫ್​ ಬಂಗಾರದ ಮನುಷ್ಯ ಸೆಂಚುರಿ ಸ್ಟಾರ್​ ಶಿವಣ್ಣ. ಅಭಿನಯದ ಜತೆ ಕರುಣೆ, ಪ್ರೀತಿ, ಅನುಕಂಪ, ಸಹನೆಯ ಮಹಾನ್​​​​ ಚೇತನ ಡಾ.ಶಿವಣ್ಣ. ಯೆಸ್​​​.. ಶಿವಣ್ಣನಿಗೆ ವಯಸ್ಸು 60 ಅಂತಾ ಹೇಳೋಕೆ ಮನಸ್ಸು ಒಪ್ಪೋದೆ ಇಲ್ಲ. ಅಪ್ಪು ಅಗಲಿಕೆಯ ನೋವಿನಲ್ಲಿ ಬರ್ತ್​ ಡೇ ಸಂಭ್ರಮಕ್ಕೆ ಫುಲ್​ ಸ್ಟಾಪ್​ ಇಟ್ಟಿದ್ದ ಶಿವಣ್ಣನ ಬರ್ತ್​ಡೇನಾ ಇಡೀ ಕರುನಾಡು ಅದ್ಧೂರಿಯಾಗಿ ಆಚರಿಸೋಕೆ ಪ್ಲಾನ್​ ಮಾಡಿಕೊಂಡಿದೆ.

ಮಂಡ್ಯದ ಗಂಡು ಅಂಬಿಯ ಸಂಭ್ರಮ ನಿಮಗೆಲ್ಲಾ ನೆನಪಿರಬಹುದು. ಸ್ನೇಹದ ಸಂಕೇತವಾಗಿದ್ದ ಜಲೀಲನ 60ರ ಬರ್ತ್​ ಡೇ ಸಂಭ್ರಮವನ್ನು ಇಡೀ ಕರುನಾಡು ಹಬ್ಬದಂತೆ ಆಚರಿಸಿತ್ತು. ರಜನಿಕಾಂತ್​​, ಚಿರಂಜೀವಿ ಸೇರಿದಂತೆ ಎಲ್ಲಾ ಚಿತ್ರರಂಗದ ಸೂಪರ್​ ಸ್ಟಾರ್​ಗಳು ಅಂಬಿ ಸಂಭ್ರಮಕ್ಕೆ ಸಾಕ್ಷಿಯಾಗಿದ್ರು. ಇದಾದ ನಂತ್ರ ಸ್ಯಾಂಡಲ್​ವುಡ್​​​ನಲ್ಲಿ ಅಂತಾ ಅದ್ಧೂರಿ ಕಾರ್ಯಕ್ರಮ ನಡೆದಿಲ್ಲ. ಇದೀಗ ಅಂತಹ ಅವಿಸ್ಮರಣೀಯ ಕ್ಷಣಗಳು ಮತ್ತೆ ಮರುಕಳಿಸೋ ಸುಸಮಯ ಹತ್ತಿರವಾಗ್ತಿದೆ. ಯೆಸ್​.. ಕನ್ನಡ ಚಿತ್ರರಂಗ ಇಂತಹ ಮಹತ್ಕಾರ್ಯಕ್ಕೆ ಕೈ ಹಾಕಿದೆಯಂತೆ.

ಶಿವಣ್ಣನ 60ನೇ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸ್ಬೇಕು ಎಂದು ಅಪ್ಪು ಕನಸು ಕಂಡಿದ್ದರಂತೆ. ಆದ್ರೆ, ಭಗವಂತನ ವಿಧಿಯಾಟ ಬೇರೆಯಾಗಿತ್ತು. ಅಪ್ಪು ಕನಸು ಈಡೇರಲಿಲ್ಲ. ಆದ್ರೆ, ಇಂತಹ ಅದ್ಭುತ ಕನಸನ್ನು ನನಸು ಮಾಡೋ ಸಕಾಲ ಬಂದಿದೆ. ಫಿಲ್ಮ್​ ಚೇಂಬರ್​ ಕೂಡ ಈ ಕುರಿತು ಚಿಂತನೆ ನಡೆಸ್ತಿದೆ. ಶಿವಣ್ಣ ಅಂದ್ರೆ ಸಾಕು ಇಡೀ ಬಾರತೀಯ ಚಿತ್ರರಂಗವೇ ಎರಡು ತೋಳುಗಳಿಂದ ಬಾಚಿ ಅಪ್ಪಿಕೊಳ್ಳುತ್ತೆ. ಇನ್ನೂ ಶಿವಣ್ಣನ ಸಂಭ್ರಮ ಅಂದ್ರೆ ಕೇಳ್ಬೇಕಾ. ಆ ಕಾರ್ಯಕ್ರಮ ಯಾವ ರೀತಿ ಇರಲಿದೆ ಜಸ್ಟ್​ ಇಮ್ಯಾಜಿನ್​.

ಇನ್ನೂ ವಿಶೇಷ ಅಂದ್ರೆ, ಶಿವಣ್ಣನ ಬರ್ತ್​ಡೆ ಜತೆ ಕ್ರೇಜಿಸ್ಟಾರ್​ಗೂ ಗೌರವವನ್ನು ಸಲ್ಲಿಸೋ ಬಿಗ್​ ಪ್ಲಾನ್​ ಮಾಡಲಾಗ್ತಿದೆಯಂತೆ. ರವಿಮಾಮ ಕೂಡ ಸಿನಿಲೋಕಕ್ಕೆ ಅಪಾರ ಕೊಡುಗೆ ಸಲ್ಲಿಸಿದ್ದಾರೆ. ಇಬ್ಬರೂ ಇನ್ನೂ ನೂರು ಯಗಗಳು ಉರುಳಿದರೂ ಸದಾ ಕಾಲ ನೆನಪಿರುವ ಪ್ರಾತಸ್ಮರಣೀಯರು. ಆಗಾಗಿ ಇಬ್ಬರನ್ನು ಒಂದೇ ವೇದಿಕೆಯ ಮೇಲೆ ಸೇರಿಸಿ ಚಿತ್ರರಸಿಕರಿಗೆ ಮನರಂಜನೆಯ ರಸದೌತಣ ನೀಡೋ ಪ್ಲಾನ್​ ಮಾಡಿಕೊಂಡಿದೆ. ಯಾವಾಗ..? ಎಲ್ಲಿ..? ಹೇಗೆ ಅನ್ನೋ ಕಂಪ್ಲೀಟ್​​ ಅಪ್ಡೇಟ್​ ಸದ್ಯದಲ್ಲೆ ಸಿಗಲಿದೆ.

ರಾಕೇಶ್​ ಆರುಂಡಿ, ಫಿಲ್ಮ್ ಬ್ಯೂರೋ, ಪವರ್​ ಟಿವಿ​​

RELATED ARTICLES

Related Articles

TRENDING ARTICLES