Wednesday, January 22, 2025

ಅಂದು ‘ಮೊಗ್ಗಿನ ಮನಸು’.. ಇಂದು ‘ಲವ್ 360’ ಕನಸು

ಶಶಾಂಕ್​ ಸಿನಿಮಾಗಳಂದ್ರೆ, ಅಲ್ಲೊಂದು ಪ್ರೀತಿಯ ಸೋನೆ ಮಳೆ. ಹೃದಯ ಕಲಕುವ ಕ್ಲೈಮ್ಯಾಕ್ಸ್​​. ಇಂಪಾದ ಇಂಚರ ಸೂಸುವ ಹಾಡುಗಳು ಪಕ್ಕಾ. ಇದೀಗ ಮತ್ತೊಮ್ಮೆ ಪ್ರೀತಿಯ ಪರಾಕಾಷ್ಠೆಯ ರೋಮಾಂಚಕ ಲವ್​ಸ್ಟೋರಿ ಸಿನಿಮಾ ತೆರೆಗೆ ಬರ್ತಿದೆ. ಲವ್​ 360 ಚಿತ್ರದ ಟ್ರೈಲರ್​​​ನ ಹ್ಯಾಟ್ರಿಕ್​ ಹೀರೋ ರಿಲೀಸ್ ಮಾಡಿದ್ದು, ಅಮರ ಪ್ರೇಮಕಥೆಗೆ ಹೊಸ ಭಾಷ್ಯ ಬರೆದಿದ್ದಾರೆ.

  • ಸಿದ್​ ಶ್ರೀರಾಮ್​​ ವಾಯ್ಸ್​​ಗೆ ಫಿದಾ.. ಶಿವಪ್ಪ ಮೆಚ್ಚಿದ ಪ್ರೀತಿ

ಕನ್ನಡದ ಜನಪ್ರಿಯ, ಕ್ರಿಯಾಶೀಲ ಹಾಗೂ ಸೃಜನಶೀಲ ನಿರ್ದೇಶಕರಲ್ಲಿ ಶಶಾಂಕ್​ ಮೊದಲ ಸಾಲಿನಲ್ಲಿ ನಿಲ್ಲುತ್ತಾರೆ. ಹೊಸ ಪ್ರತಿಭೆಗಳನ್ನು ಪರಿಚಯಿಸೋ ನಿಸ್ಸೀಮ. ಇಂಡಸ್ಟ್ರಿಗೆ ಯಶ್​​​​, ರಾಧಿಕಾ ಪಂಡಿತ್​​​, ಪ್ರಜ್ವಲ್​​ ದೇವರಾಜ್​ ಅಂತಹ ಮೋಸ್ಟ್​ ಟ್ಯಾಲೆಂಟೆಡ್​ ಆ್ಯಕ್ಟರ್​ಗಳನ್ನು ಪರಿಚಯಿಸಿದ ಹೆಗ್ಗಳಿಕೆ ಶಶಾಂಕ್​ಗೆ ಸಲ್ಲುತ್ತದೆ. ಇನ್ನು ಶಶಾಂಕ್​ ಬತ್ತಳಿಕೆಯ ಮೊಗ್ಗಿನ ಮನಸು, ಕೃಷ್ಣನ್​​ ಲವ್​ ಸ್ಟೋರಿ, ಕೃಷ್ಣ ಲೀಲಾ ಸಿನಿಮಾಗಳು ಸಾರ್ವಕಾಲಿಕ ಹಿಟ್​ ಸಿನಿಮಾಗಳಾಗಿವೆ. ಇದೀಗ ಮತ್ತದೇ ಹಿಸ್ಟರಿ ರಿಪೀಟ್​ ಆಗಲಿದೆ. ಶಶಾಂಕ್​ ನಿರ್ದೇಶನದ ಲವ್​ 360 ಸಿನಿಮಾ ತೆರೆಗೆ ಬರೋಕೆ ತುದಿಗಾಲಲ್ಲಿ ನಿಂತಿದೆ.

ಸಿದ್​ ಶ್ರೀರಾಮ್​ ಕೋಗಿಲೆ ಕಂಠದಲ್ಲಿ ಮೋಡಿ ಮಾಡಿದ ಜಗವೇ ನೀನು ಗೆಳತಿಯೇ ಹಾಡು ಕೋಟಿ ವೀವ್ಸ್​ ಕಂಡು ದಾಖಲೆ ಬರೆದಿದೆ. ಈ ಹಾಡು ಯಾವ ಸಿನಿಮಾದ್ದು ಅಂತಾ ಮತ್ತೊಮ್ಮೆ  ಹೇಳಬೇಕಾಗಿಲ್ಲ. ರಿಲೀಸ್​ಗೂ ಮುನ್ನವೇ ಒಂದೇ ಒಂದು ಹಾಡಿನ ಮೂಲಕ ನಿರೀಕ್ಷಿಸದ ಭರ್ಜರಿ ಪ್ರಚಾರ ಗಿಟ್ಟಿಸಿಕೊಂಡಿದೆ ಲವ್​ 360 ಸಿನಿಮಾ. ಇದೀಗ ಈ ಸಿನಿಮಾದ ಟ್ರೈಲರ್​ ರಿಲೀಸ್​ ಆಗಿದ್ದು, ಯ್ಯೂಟ್ಯೂಬ್​​​ ಟಾಪ್​ ಟ್ರೆಂಡಿಂಗ್​​ನಲ್ಲಿದೆ. ಡಾ. ಶಿವಣ್ಣ ಟ್ರೈಲರ್​ ರಿಲೀಸ್​ ಮಾಡಿದ್ದು, ಶಶಾಂಕ್​​ ಪ್ಯಾರ್​ ಕಹಾನಿಗೆ ಶಹಬ್ಬಾಸ್​ ಹೇಳಿದ್ದಾರೆ. ಜತೆಗೆ ಸಿದ್​​ ಶ್ರೀರಾಮ್​​ ವಾಯ್ಸ್​​ಗೆ ಕ್ಲೀನ್​ ಬೋಲ್ಡ್​ ಆಗಿದ್ದಾರೆ.

ಆಗಸ್ಟ್​ 19ಕ್ಕೆ ತೆರೆಗೆ ಬರಲಿರೋ ಲವ್​ 360 ಚಿತ್ರಕ್ಕೆ ಡಾ.ಶಿವಣ್ಣನ ಕಡೆಯಿಂದ ಕಿಕ್​ಸ್ಟಾರ್ಟ್​​ ಸಿಕ್ಕಿದೆ. ಹೆಂಗೆ ನಾವು ಖ್ಯಾತಿಯ ರಚನಾ ಇಂದರ್​​​ ಹಾಗೂ ಪ್ರವೀಣ್​ ಪ್ರೇಮಕಥೆ ನಿಮ್ಮನ್ನೆಲ್ಲಾ ಹೊಸ ಜಗತ್ತಿಗೆ ಕೊಂಡೋಯ್ಯಲಿವೆ. ಶಿವಣ್ಣ ಕೂಡ ಟ್ರೈಲರ್​ ಮೆಚ್ಚಿಕೊಂಡಿದ್ದು, ಸಿದ್​​ ಶ್ರೀರಾಮ್​​ ವಾಯ್ಸ್​​ ಅಂದ್ರೆ ನಂಗೆ ಪಂಚಪ್ರಾಣ. ಖಂಡಿತ ನಾನು ಥಿಯೇಟರ್​ನಲ್ಲೇ ಸಿನಿಮಾ ನೋಡ್ತಿನಿ ಎಂದಿದ್ದಾರೆ.

ಟ್ರೈಲರ್​ನಲ್ಲಿ ಡ್ಯಾನ್ಸ್​ ಕಲೀಬೇಕು ಅನ್ನೋ ಆಸೆ ನಾಯಕಿಯದು. ಇದ್ರ ನಡುವೆ ಬಿಟ್ಟಿರಲಾಗದ ಅಮರ ಪ್ರೇಮಕಥೆ, ನೋವು, ನಲಿವು, ತ್ಯಾಗ, ಮಸ್ತ್​ ಆ್ಯಕ್ಷನ್​​ ಸೀನ್ಸ್​ ಎಲ್ಲವೂ ಇದೆ. ಬೆಲ್ಲದಂತ ಹುಡುಗಿ ರಚನಾ. ಈ ಮೈಸೂರ್​ ಪಾಕ್​​​ನಲ್ಲಿ ಸೇರಿಕೊಂಡಿರೋ ಕಲ್ಲನ್ನು ನಾಯಕ ಕಂಡು ಹಿಡಿಯೋದೆ ಒನ್​ ಲೈನ್​ ಸ್ಟೋರಿ. ಅರ್ಜುನ್​​ ಜನ್ಯಾ ಮ್ಯೂಸಿಕ್​ ಪಸ್ಟ್​ ಕ್ಲಾಸ್​ ಆಗಿದೆ. ಶಶಾಂಕ್​​, ಡಾ. ಮಂಜುಳಾ ಮೂರ್ತಿ ನಿರ್ಮಾಣದಲ್ಲಿ ಸಿನಿಮಾ ಮೂಡಿ ಬಂದಿದೆ. ಅಭಿಲಾಶ್​ ಕಲಾಥಿ ಕ್ಯಾಮೆರಾ ಕಣ್ಣು ಚಿತ್ರಕ್ಕೆ ಪ್ಲಸ್​ ಆಗಲಿದೆ. ಹೊಸ ಪ್ರೇಮಾಂಕುರಕ್ಕೆ ಪ್ರೇಕ್ಷಕರು ಯೆಸ್ ಅಂತಾರಾ ಕಾದು ನೋಡ್ಬೇಕು.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್ ಟಿವಿ

RELATED ARTICLES

Related Articles

TRENDING ARTICLES