Wednesday, January 22, 2025

ನಿರಂತರ ಮಳೆಯಿಂದ ಜನಜೀವನ ಅಸ್ತವ್ಯಸ್ತ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ ನಿರಂತರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.

ಇನ್ನು, ಹಲವು ತಗ್ಗು ಪ್ರದೇಶಗಳು ಜಲಾವೃತವಾಗಿದ್ದು,. ಅಪಾಯದಲ್ಲಿರುವ ಮನೆಗಳ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಹರಿಹರ, ಕೊಲ್ಲಮೊಗ್ರು, ಬಾಳುಗೋಡು ಹಾಗೂ ಕಲ್ಮಕಾರು ಗ್ರಾಮದಲ್ಲಿ ಜಲಸ್ಫೋಟದ ಪರಿಣಾಮ ಮನೆ, ಕೃಷಿ ಜಮೀನುಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ.

ಅದಲ್ಲದೇ, ಸುಳ್ಯ ಹಾಗೂ ಕಡಬ ತಾಲೂಕಿನ ಕಾಳಜಿ ಕೇಂದ್ರಗಳಲ್ಲಿ ಒಟ್ಟು 58 ಮಂದಿ ಆಶ್ರಯ ಪಡೆದಿದ್ದಾರೆ. ಕಲ್ಮಕಾರಿನ ಸಕಾ೯ರಿ ಶಾಲೆಯಲ್ಲಿ 21 ಮಂದಿ, ಸಂಪಾಜೆಯಲ್ಲಿ 12 ಮಂದಿ, ಸುಬ್ರಹ್ಮಣ್ಯದಲ್ಲಿ 13 ಮಂದಿ, ಯೇನೆಕಲ್ಲು ಸರಕಾರಿ ಶಾಲೆಯಲ್ಲಿ 6 ಮಂದಿ ಇದ್ದಾರೆ. ಮಡಪ್ಪಾಡಿ ಗ್ರಾಮದ ಗೋಳಿಯಡಿ ಮತ್ತು ಅಂಬೆಕಲ್ಲು ಎಂಬಲ್ಲಿ‌ ರಸ್ತೆ ಕುಸಿದು ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಹಲವೆಡೆ ಮನೆ, ಜಮೀನುಗಳಿಗೆ ಪ್ರವಾಹ ನುಗ್ಗಿ ನಿವಾಸಿಗಳು ಆತಂಕ ಎದುರಿಸುತ್ತಿದ್ದಾರೆ.

RELATED ARTICLES

Related Articles

TRENDING ARTICLES