Wednesday, January 22, 2025

ರಾಜ್ಯದ ಪ್ರತಿ ಮೂಲೆಯಲ್ಲಿ ಗಣಿ – ಭಟ್ರ ಗಾಳಿಪಟ ಹಾರಾಟ

ಗಾಳಿಪಟ- 2 ಸಿನಿಮಾ ಒಂದೇ. ಆದ್ರೆ ಇದು ಬರೋಬ್ಬರಿ ಮೂರು ಮಂದಿಗೆ ಮಾಡು ಇಲ್ಲವೆ ಮಡಿ ಪಂದ್ಯದಂತಿದೆ. ಯೆಸ್.. ಗೋಲ್ಡನ್ ಸ್ಟಾರ್ ಗಣೇಶ್, ವಿಕಟಕವಿ ಯೋಗ್ರಾಜ್ ಭಟ್ ಹಾಗೂ ನಿರ್ಮಾಪಕ ರಮೇಶ್ ರೆಡ್ಡಿ ಮೂವರಿಗೂ ಗೆಲ್ಲಲೇಬೇಕಾದ ಸಿನಿಮಾ ಆಗಿದೆ. ಸದ್ಯ ರಾಜ್ಯದ ಮೂಲೆ ಮೂಲೆಯಲ್ಲಿ ಗಾಳಿಪಟ ಹಾರಿಸ್ತಿರೋ ಗೋಲ್ಡನ್ ಟೀಂ, ಅಸಂಖ್ಯಾತ ವಿದ್ಯಾರ್ಥಿಗಳ ದಿಲ್ ದೋಚಿದೆ.

  • ಟ್ಯಾಬ್ಲೋ ಜೊತೆ ಕಾಮಿಡಿ ಕಿಲಾಡಿ ನಯನಾ ಭರ್ಜರಿ ಪ್ರಚಾರ
  • ಡೈರೆಕ್ಟರ್, ಪ್ರೊಡ್ಯೂಸರ್ & ಗಣೇಶ್​ಗೂ ಇದು ಅಗ್ನಿ ಪರೀಕ್ಷೆ
  • ನೋಡೋ ಮನಸುಗಳಿಗೆ ತೋರಣ.. ಫನ್ ಕಥೆಯ ಹೂರಣ

ವಾರಕ್ಕೆ ನಾಲ್ಕೈದು ಸಿನಿಮಾ ರಿಲೀಸ್ ಆಗ್ತಿವೆಯಾದ್ರೂ, ನೋಡುಗರಿಗೆ ಮಸ್ತ್ ಮಜಾ ಕೊಡೋ ಅಂತಹ ಒಂದೂ ಸಿನಿಮಾ ಇತ್ತೀಚೆಗೆ ಬರಲೇ ಇಲ್ಲ. ಆ ಬೇಸರವನ್ನು ನೀಗಿಸಲು ಸ್ಯಾಂಡಲ್​ವುಡ್​ನ ಒನ್ ಅಂಡ್ ಓನ್ಲಿ ವಿಕಟಕವಿ ಯೋಗರಾಜ್ ಭಟ್​ರ ಗಾಳಿಪಟ ಬರ್ತಿದೆ. ಯೆಸ್.. ಸದ್ಯ ಗಾಳಿಪಟ ಫ್ರಾಂಚೈಸ್​ನ ಮತ್ತೊಂದು ಚಿತ್ರ ಇದೇ ಆಗಸ್ಟ್ 12ಕ್ಕೆ ಪ್ರೇಕ್ಷಕರ ಮನಸುಗಳಿಗೆ ಮನರಂಜನೆಯ ಪ್ರೋಕ್ಷಣೆ ಮಾಡಲು ಬರ್ತಿದೆ.

ಗೋಲ್ಡನ್ ಸ್ಟಾರ್ ಗಣೇಶ್ ಮುಖ್ಯ ಭೂಮಿಕೆಯ ಈ ಚಿತ್ರದಲ್ಲಿ ದೂದ್​ಪೇಡ ದಿಗಂತ್ ಹಾಗೂ ಲೂಸಿಯಾ ಪವನ್ ಕುಮಾರ್ ಕೂಡ ತಾರಾಗಣದಲ್ಲಿದ್ದಾರೆ. ಇದು ಮೂವರು ಸ್ಮಾತಕೋತ್ತರ ಪದವಿ ವಿದ್ಯಾರ್ಥಿಗಳ ಕಥಾನಕ ಆಗಿದ್ದು, ಇವ್ರಿಗೆ ಸಿಗೋ ಕನ್ನಡ ಮೇಷ್ಟ್ರು ಹಾಗೂ ಅವ್ರೊಂದಿಗಿನ ಫನ್ ಕಮ್ ಎಮೋಷನಲ್ ಜರ್ನಿ ಈ ಗಾಳಿಪಟ-2.

ಮಲಯಾಳಂನ ಸಂಯುಕ್ತಾ ಮೆನನ್, ಶರ್ಮಿಳಾ ಮಾಂಡ್ರೆ ಹಾಗೂ ವೈಭವಿ ಶಾಂಡಿಲ್ಯ ಹೀಗೆ ಮೂರು ಮಂದಿ ಹೀರೋಗಳಿಗೆ ಮೂವರು ನಟೀಮಣಿಗಳು ಸಾಥ್ ನೀಡಿದ್ದಾರೆ. ಇವ್ರ ಗ್ಲಾಮರ್ ಸಿನಿಮಾದ ಅಂದ ಚೆಂದ ಹೆಚ್ಚಿಸಿದ್ದು, ಅರ್ಜುನ್ ಜನ್ಯಾ ಸಂಗೀತ ಸಂಯೋಜನೆಯ ಮ್ಯೂಸಿಕಲ್ ಆಲ್ಬಂ ಎಲ್ಲರ ಕಿವಿ ಇಂಪಾಗಿಸಿದೆ. ದೃಶ್ಯ ಚಿತ್ತಾರ ಆಗಸ್ಟ್ 12ಕ್ಕೆ ನಯನಗಳನ್ನ ತಂಪಾಗಿಸಲು ಕಾಯ್ತಿವೆ.

ಅನಂತ್​ನಾಗ್, ಪದ್ಮಜಾ ರಾವ್, ಶ್ರೀನಾಥ್, ನಿಶ್ವಿಕಾ ನಾಯ್ಡು, ರಂಗಾಯಣ ರಘು ಹೀಗೆ ಸಾಕಷ್ಟು ಮಂದಿ ಸ್ಟಾರ್ ಕಲಾವಿದರು ಸಿನಿಮಾದ ಗಮ್ಮತ್ತು ಹೆಚ್ಚಿಸಲಿದ್ದಾರೆ. ಅದ್ರಲ್ಲೂ ಗಣಿ ಸಿನಿಮಾಗಳಲ್ಲಿ ಅನಂತ್​ನಾಗ್ ಹಾಗೂ ರಂಗಾಯಣ ರಘು ಇದ್ದೇ ಇರ್ತಾರೆ. ಆದ್ರೆ ಈ ಬಾರಿ ಇವ್ರ ಕಾಂಬೋ ಎಷ್ಟರ ಮಟ್ಟಿಗೆ ಮೋಡಿ ಮಾಡುತ್ತೆ ಅನ್ನೋದು ನಿರೀಕ್ಷಿಸಬೇಕಿದೆ.

ನಟ ಗಣೇಶ್, ಡೈರೆಕ್ಟರ್ ಭಟ್ರ ಜೊತೆ ನಿರ್ಮಾಪಕ ರಮೇಶ್ ರೆಡ್ಡಿ ಅವ್ರಿಗೂ ಗಾಳಿಪಟ-2 ಒಂಥರಾ ಮಾಡು ಇಲ್ಲವೆ ಮಡಿ ಕ್ರಿಕೆಟ್ ಪಂದ್ಯದಂತೆ. ಹೌದು.. ಮೂವರೂ ಸಹ ಒಂದೊಳ್ಳೆ ಬ್ರೇಕ್​ಗಾಗಿ ಕಾತರರಾಗಿದ್ದು, ಇದರ ಹಿಟ್​ನ ನಿರೀಕ್ಷೆಯಲ್ಲಿದ್ದಾರೆ. ಅದಕ್ಕೆ ಪೂಕರವಾದ ಕಂಟೆಂಟ್ ಹಾಗೂ ದೃಶ್ಯ ವೈಭೋಗವನ್ನು ಕಟ್ಟಿಕೊಟ್ಟಿದ್ದಾರೆ. ಅಲ್ಲದೆ, ಪ್ರೊಮೋಷನ್ಸ್ ಕೂಡ ಜೋರಾಗೇ ಮಾಡ್ತಿದ್ದಾರೆ.

ರಾಜ್ಯದ ಮೂಲೆ ಮೂಲೆಯಲ್ಲಿ ಭಟ್ರ ಗಾಳಿಪಟ ಹಾರಾಡ್ತಿದೆ. ಟ್ಯಾಬ್ಲೋಗಳ ಮೂಲಕ ಕಾಮಿಡಿ ಕಿಲಾಡಿಗಳು ಫೇಮ್ ನಯನಾ ಹಾಗೂ ಮನು ಅವ್ರು ಹತ್ತಾರು ಕಾಲೇಜ್​ ಗಳನ್ನ ಸುತ್ತಿದ್ದಾರೆ. ಸಹಸ್ರಾರು ವಿದ್ಯಾರ್ಥಿಗಳ ಜೊತೆ ಗಾಳಿಪಟ 2 ನಿರೀಕ್ಷೆ ಹಾಗೂ ವಿಶೇಷತೆಗಳನ್ನು ಸಾರಿದ್ದಾರೆ. ಬಹುತೇಕ ಹತ್ತಕ್ಕೂ ಅಧಿಕ ಜಿಲ್ಲಾ ಕೇಂದ್ರಗಳನ್ನ ಕವರ್ ಮಾಡಿರೋ ಇವರು, ಗಾಳಿಪಟದಂತೆ ಜಿಲ್ಲೆಯಿಂದ ಜೆಲ್ಲೆಗೆ ಹಾರುತ್ತಿರೋದು ಖುಷಿಯ ವಿಚಾರ.

ಅದೇನೇ ಇರಲಿ. ನಿದ್ದೆಯಲ್ಲೂ ಸಿನಿಮಾವನ್ನೇ ಕನಸು ಕಾಣೋ ಯೋಗರಾಜ್ ಭಟ್​ರಂತಹ ಟೆಕ್ನಿಷಿಯನ್ ಹಾಗೂ ಗಣೇಶ್​ರಂತಹ ಕಲಾವಿದರ ಸಿನಿಮಾ ಗೆಲ್ಲಲೇಬೇಕು. ಕನ್ನಡಿಗರು ಈ ಬಾರಿ ಇವ್ರ ಕೈಹಿಡಿಯುತ್ತಾರೆ ಅನ್ನೋ ನಿರೀಕ್ಷೆಯಲ್ಲಿ ತಂಡ ಕೂಡ ಕಾತರಗೊಂಡಿದ್ದು, ಮನರಂಜನೆಯ ರಸದೌತಣ ಉಣಬಡಿಸೋಕೆ ತುದಿಗಾಲಲ್ಲಿ ನಿಂತಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES