ಬರ್ಮಿಂಗ್ಹ್ಯಾಮ್ನಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಗೇಮ್ಸ್ 2022 ರಲ್ಲಿ ಭಾರತದ ಪದಕದ ಬೇಟೆ ಮುಂದುವರೆದಿದೆ. ಕಾಮನ್ವೆಲ್ತ್ ಗೇಮ್ಸ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪ್ಯಾರಾ ಪವರ್ ಲಿಫ್ಟಿಂಗ್ನಲ್ಲಿ ಭಾರತದ ಸುಧೀರ್ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ.
ನಿನ್ನೆ ತಡರಾತ್ರಿ ನಡೆದ ಪುರುಷರ ಹೆವಿವೇಯ್ಟ್ ವಿಭಾಗದಲ್ಲಿ ಸುಧೀರ್ 134.5 ಅಂಕಗಳೊಂದಿಗೆ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಇತಿಹಾಸ ನಿರ್ಮಿಸಿದರು. ಈ ಮೂಲಕ ಭಾರತದ ಪದಕಗಳ ಸಂಖ್ಯೆ 20 ಕ್ಕೇರಿದೆ. ಸದ್ಯ ಭಾರತದ ಬಳಿ ಆರು ಚಿನ್ನ, ಏಳು ಬೆಳ್ಳಿ ಮತ್ತು 7 ಕಂಚಿನ ಪದಕವಿದೆ. 87 ಕೆ.ಜಿ. ಇರುವ ಸುಧೀರ್ ತಮ್ಮ ಮೊದಲ ಪ್ರಯತ್ನದಲ್ಲಿ 208 ಕೆ.ಜಿ ಭಾರ ಎತ್ತಿದರು. ಹೀಗೆ 132 ಕ್ಕೂ ಹೆಚ್ಚು ಅಂಕಗಳನ್ನು ಗಳಿಸುವ ಮೂಲಕ ಮೊದಲ ಸ್ಥಾನವನ್ನು ಗಳಿಸಿದ್ದಾರೆ.
ಪ್ಯಾರಾ ಪವರ್ ಲಿಫ್ಟಿಂಗ್ನಲ್ಲಿ ವಿಜೇತರನ್ನು ಪಾಯಿಂಟ್ಗಳ ಆಧಾರದ ಮೇಲೆ ನಿರ್ಧರಿಸುವುದು ವಾಡಿಕೆ. ಇದರಲ್ಲಿ ಸ್ಪರ್ಧಿಯ ದೇಹದ ತೂಕ & ಎತ್ತುವ ತೂಕದ ಆಧಾರದ ಮೇಲೆ ಪಾಯಿಂಟ್ ಗಳನ್ನು ನಿರ್ಧರಿಸಲಾಗುತ್ತದೆ. ಸುಧೀರ್ ತಮ್ಮ ಎರಡನೇ ಪ್ರಯತ್ನದಲ್ಲಿ 212 ಕೆಜಿ ಎತ್ತಿ ದಾಖಲೆಯ 134.5 ಅಂಕಗಳನ್ನು ಗಳಿಸಿದರು. ಈ ಮೂಲಕ ಕಾಮನ್ ವೆಲ್ತ್ ಗೇಮ್ಸ್ 2022ರಲ್ಲಿ ಚಿನ್ನದ ಪದಕವನ್ನು ಬಾಜಿಕೊಂಡಿದ್ದಾರೆ.