Sunday, December 22, 2024

‘ಗತವೈಭವ’ದತ್ತ ಸಿಂಗಾಪುರ್ ವೈಭವ ತೋರಿದ ಆಶಿಕಾ..!

ಗತವೈಭವಕ್ಕೆ ನಾಯಕಿಯಾಗಿ ಆಯ್ಕೆಯಾಗಿರೋ ಸ್ಯಾಂಡಲ್​ವುಡ್​ನ ಮೋಸ್ಟ್ ಟ್ಯಾಲೆಂಟೆಡ್ ಅಂಡ್ ಬ್ಯೂಟಿಕ್ವೀನ್ ಆಶಿಕಾ ರಂಗನಾಥ್, ಅದಕ್ಕೂ ಮುನ್ನ ಸಿಂಗಾಪುರ್ ವೈಭವ ತೋರಿಸಿದ್ದಾರೆ. ಕಥೆಗಿಂತ ಹೀರೋ ಹಾಗೂ ರೆಮ್ಯುನರೇಷನ್​ಗೇನೇ ಮೊದಲ ಪ್ರಾಧಾನ್ಯತೆ ನೀಡೋ ಈ ನಟೀಮಣಿಯ ಅಸಲಿ ವೈಭವ ಒಮ್ಮೆ ನೀವೇ ಓದಿ.

  • ದೇವಕನ್ಯೆಯಾಗಿ ದುಷ್ಯಂತ್​ಗೆ ಚುಟು ಚುಟು ಬ್ಯೂಟಿ ಜೋಡಿ
  • ಕಥೆಗಿಂತ ಹೀರೋ, ಸಂಭಾವನೆಯೇ ಈಕೆಯ ಪ್ರಿಫರೆನ್ಸ್..!
  • ‘ಅವತಾರ ಪುರುಷ’ ಡೈರೆಕ್ಟರ್​ ತೆಕ್ಕೆಗೆ ‘ಱಂಬೊ 2’ ಚೆಲುವೆ

ಸ್ಯಾಂಡಲ್ ವುಡ್​ನ ಪ್ರತಿಭಾನ್ವಿತ ನಿರ್ದೇಶಕ ಸಿಂಪಲ್ ಸುನಿ ಬತ್ತಳಿಕೆಯ ಬಹುನಿರೀಕ್ಷಿತ ಸಿನಿಮಾ ಗತವೈಭವ. ಈ ಸಿನಿಮಾ ಮೂಲಕ ಗುಬ್ಬಿ ಕ್ಷೇತ್ರದ ಶಾಸಕ ಎಸ್‌.ಆರ್‌.ಶ್ರೀನಿವಾಸ್‌ ಪುತ್ರ ದುಷ್ಯಂತ್‌ ನಾಯಕ ನಟನಾಗಿ ಸ್ಯಾಂಡಲ್​ವುಡ್​ಗೆ ಪದಾರ್ಪಣೆ ಮಾಡುತ್ತಿದ್ದಾರೆ. ಈಗಾಗ್ಲೇ ತುಂಬಾ ಯುನಿಕ್ ಆಗಿ ದುಷ್ಯಂತ್ ಇಂಟ್ರಡಕ್ಷನ್ ಟೀಸರ್ ರಿಲೀಸ್ ಮಾಡಿದ್ದ ಸುನಿ, ಈಗ ನಾಯಕಿಯನ್ನ ಸಿನಿರಸಿಕರಿಗೆ ಪರಿಚಯಿಸಿದ್ದಾರೆ.

ಗತವೈಭವಕ್ಕೆ ಯಾರಾಗ್ತಾರೆ ನಾಯಕಿ ಅನ್ನೋ ಕುತೂಹಲಕ್ಕೆ ಕೊನೆಗೂ ಉತ್ತರ ಸಿಕ್ಕಿದೆ. ಹೀರೋ ಇಂಟ್ರಡಕ್ಷನ್ ಟೀಸರ್ ದಾಟಿಯಲ್ಲಿಯೇ ಸುನಿ ತಮ್ಮದೇ ಸ್ಟೈಲ್ ನಲ್ಲಿ ನಾಯಕಿಯನ್ನೂ ಪರಿಚಯಿಸಿದ್ದಾರೆ. ಹೊಸ ಹೀರೋಗೆ ಆಶಿಕಾ ಹೀರೋಯಿನ್ ಆಗಲು ಸುನಿ ಹೇಗೆ ಒಪ್ಪಿಸಿದ್ರು ಅನ್ನೋದೇ ಇಂಟರೆಸ್ಟಿಂಗ್. ಅದನ್ನ ವಿಡಿಯೋ ಮೂಲಕ ಚಿತ್ರಿಸಿರೋ ಡೈರೆಕ್ಟರ್, ವಿಡಿಯೋ ಕೊನೆಯಲ್ಲಿ ನಾಯಕಿ ಆಶಿಕಾ ಲುಕ್ ರಿವೀಲ್ ಮಾಡಿದ್ದು, ದೇವಕನ್ಯೆ ಗೆಟಪ್ ನಲ್ಲಿ ಮಿಂಚ್ತಿದ್ದಾರೆ ಚುಟುಚುಟು ಬ್ಯೂಟಿ.

ರೊಮ್ಯಾಂಟಿಕ್ ಲವ್ ಸ್ಟೋರಿ ಆಗಿರೋ ಗತವೈಭವ ಚಿತ್ರದಲ್ಲಿ ಸೈಂಟಿಫಿಕ್ ಥ್ರಿಲ್ಲರ್​ನ ಕಂಟೆಂಟ್ ಕೂಡ ಇರಲಿದ್ದು, ಸದ್ದಿಲ್ಲದೆ, ಇಲ್ಲಿಯವರೆಗೆ ಶೇಕಡಾ 40ರಷ್ಟು ಕಂಪ್ಲೀಟ್ ಆಗಿದೆ. ಚಿತ್ರದಲ್ಲಿ ಆಶಿಕಾ ದುಷ್ಯಂತ್ ಗೆ ಜೋಡಿಯಾಗಿ ನಟಿಸಲಿದ್ದು, ದೇವಕನ್ಯೆ ಹಾಗೂ ಪೋರ್ಚುಗೀಸ್ ಯುವತಿ ಪಾತ್ರದಲ್ಲಿ ಕಾಣಸಿಗಲಿದ್ದಾರಂತೆ.

ಗತವೈಭವ ಚಿತ್ರಕ್ಕೆ ಕಥೆ-ಚಿತ್ರಕಥೆ ಮತ್ತು ಸಂಭಾಷಣೆ ಬರೆದಿರೋ ಸುನಿ, ತಮ್ಮದೇ ಸುನಿ ಸಿನಿಮಾಸ್ ಸಂಸ್ಥೆಯಡಿ ದೀಪಕ್ ಜೊತೆಗೂಡಿ ನಿರ್ಮಾಣ ಕೂಡ ಮಾಡ್ತಿದ್ದಾರೆ. ವಿಕ್ರಾಂತ್ ರೋಣ ಕ್ಯಾಮೆರಾಮನ್ ವಿಲಿಯಂ ಡೇವಿಡ್ ಕ್ಯಾಮೆರಾ ಕೈಚಳಕ, ಜೂಡಾ ಸ್ಯಾಂಡಿ ಸಂಗೀತ ಚಿತ್ರಕ್ಕಿರಲಿದೆ. ಅಂದಹಾಗೆ ಅವತಾರ ಪುರುಷ, ಗರುಡ ಸಿನಿಮಾಗಳ ರಿಲೀಸ್ ಕಾರ್ಯಗಳನ್ನ ಮುಗಿಸಿದ ಆಶಿಕಾ, ಫಾರಿನ್ ಟೂರ್​ನಲ್ಲಿದ್ದು, ಗತವೈಭವಕ್ಕೂ ಮುನ್ನ ಸಿಂಗಾಪುರ್ ಟೂರ್​ನ ಬ್ಯೂಟಿಫುಲ್ ಸ್ಟಿಲ್ ಫೋಟೋಸ್​ನ ಹಂಚಿಕೊಂಡಿದ್ದಾರೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES