ಮಂಡ್ಯ: ಕೆ.ಆರ್.ಎಸ್ ಡ್ಯಾಂನಿಂದ ಮತ್ತೆ ಹೆಚ್ಚಿನ ನೀರು ನದಿಗೆ ಬಿಡುಗಡೆ ಹಿನ್ನಲೆಯಲ್ಲಿ ಕಾವೇರಿ ನದಿ ಪಾತ್ರದಲ್ಲಿ ಮತ್ತೆ ಪ್ರವಾಹ ಭೀತಿ ಆತಂಕ ಉಂಟಾಗಿದೆ.
ನಗರದ ಬಹುತೇಕ ಮುಳುಗಡೆಯಾಗಿರುವ ಪ್ರಸಿದ್ದ ರಂಗನತಿಟ್ಟು. ಪಕ್ಷಿಧಾಮದಲ್ಲಿ ಬೋಟಿಂಗ್ ನಿಷೇಧ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ಹೇರಿದ್ದಾರೆ. ಹಾಗೆನೇ, ಶ್ರೀರಂಗಪಟ್ಟಣದ ಪಶ್ಚಿಮವಾಹಿನಿಯಲ್ಲಿ ಹಲವು ದೇಗುಲಗಳು ಮುಳುಗಡೆಯಾಗಿದೆ.
ಇನ್ನು, ಚೆಕ್ ಪೋಸ್ಟ್ ಬಳಿಯ ಸಾಯಿ ಮಂದಿರಕ್ಕೂ ನೀರು ನುಗ್ಗಿದ್ದು, ಗಂಜಾಮ್ ಬಳಿಯ ನಿಮಿಷಾಂಭ ಪ್ರಸಿದ್ದ ದೇಗುಲದ ಬಾಗಿಲವರೆಗೂ ಪ್ರವಾಹ ಬಂದಿದೆ. ಶ್ರೀರಂಗಪಟ್ಟಣ ತಾಲೂಕಿನಲ್ಲಿ ಪ್ರವಾಸಿ ತಾಣ ಕಾವೇರಿ ನದಿ ದಂಡೆಯ1 ಕಿ.ಮೀ. ಪ್ರದೇಶದಲ್ಲಿ ನೀಷೇಧಾಜ್ಞೆ ಜಾರಿ ಮಾಡಿದ್ದಾರೆ. ಪ್ರವಾಸಿಗರು ಸೇರಿದಂತೆ ಜನ ಜಾನುವಾರುಗಳು ನದಿ ದಂಡೆಯ ಬಳಿ ತೆರಳದಂತೆ ತಾಲೂಕು ಆಡಳಿತ ಎಚ್ಚರಿಕೆಯನ್ನು ನೀಡಿದ್ದಾರೆ.
ಅದಲ್ಲದೇ, ನದಿ ದಡದ 1 ಕಿ ಮಿ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿ ಮಾಡಿದ್ದು, ಶ್ರೀರಂಗಪಟ್ಟಣ ತಹಶೀಲ್ದಾರ್ ಶ್ವೇತಾ ರವೀಂದ್ರ ಆದೇಶ ನೀಡಿದ್ದಾರೆ. ಪ್ರವಾಹದಿಂದ ಅಪಾಯದ ಮಟ್ಟದಲ್ಲಿ ಕಾವೇರಿ ನದಿ ತುಂಬಿ ಹರಿಯುತ್ತಿದೆ.