Sunday, December 22, 2024

ಸಾಗಿದೆ ಹಿರೋಶಿಮಾ- ಚುಕ್ಕಿಯ ಜಮಾಲಿ ಗುಡ್ಡದ ಜರ್ನಿ..!

ಜಮಾಲಿ ಗುಡ್ಡದ ರಹಸ್ಯಗಳು ಒಂದೊಂದಾಗಿ ಬಯಲಾಗ್ತಿವೆ. ಅದರ ಕಂಪ್ಲೀಟ್ ಚಿತ್ರಣ ಮುಂದಿನ ತಿಂಗಳು ದೊಡ್ಡ ಪರದೆ ಮೇಲೆ ಅನಾವರಣಗೊಳ್ಳಲಿದೆ. ಆದ್ರೀಗ ಹಿರೋಶಿಮಾ- ಚುಕ್ಕಿಯ ಜರ್ನಿ ಬಹಳ ಜೋರಾಗಿ ಸಾಗಿದೆ. ಡಾಲಿ- ಪ್ರಾಣ್ಯ ಜೋಡಿ ನಿಜಕ್ಕೂ ಮೋಡಿ ಮಾಡ್ತಿದೆ. ಅದ್ರ ಎಮೋಷನಲ್ ಜರ್ನಿಯ ಒಂದು ಝಲಕ್ ನಿಮಗಾಗಿ.

  • ಮತ್ತೊಂದು ಎಕ್ಸ್​ಪೆರಿಮೆಂಟ್ ರೋಲ್​ನಲ್ಲಿ ಡಾಲಿ ಮಿಂಚು
  • ಸೆಪ್ಟೆಂಬರ್ 9ರಿಂದ ಬೆಳ್ಳಿ ಪರದೆ ಮೇಲೆ ಕನ್ನಡದ ಪ್ರಯೋಗ
  • 2 ಜೀವಗಳ ಜರ್ನಿಯ ‘ಸಾಗಿದೆ’ ಗೀತೆಗೆ ಮಿಲಿಯನ್ ವೀವ್ಸ್ 

ಯೆಸ್.. ರೀಸೆಂಟ್ ಆಗಿ ರಿಲೀಸ್ ಆದ ಜಮಾಲಿಗುಡ್ಡ ಚಿತ್ರದ ಸಾಗಿದೆ ಹಾಡೊಂದು ಬಹುಬೇಗ ಮಿಲಿಯನ್ ವೀವ್ಸ್ ಗಿಟ್ಟಿಸೋ ಮೂಲಕ ಎಲ್ಲರ ಮನಸ್ಸು ಗೆದ್ದಿದೆ. ಇಲ್ಲಿಯವರೆಗೆ ಚಿತ್ರದ ಬಗ್ಗೆ ಏನನ್ನೂ ಬಿಟ್ಟುಕೊಡದ ಚಿತ್ರತಂಡ, ಏಕ್ಧಮ್ ವಿಡಿಯೋ ಸಾಂಗ್ ಲಾಂಚ್ ಮಾಡಿತ್ತು. ಅದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದೀಗ ಆ ಹಾಡಿನ ಗಮ್ಮತ್ತಿಗೆ ಮಿಲಿಯನ್ ವೀವ್ಸ್ ದಾಖಲೆ ಆಗಿದೆ.

ನಿರ್ದೇಶಕ ಕುಶಾಲ್ ಗೌಡ ಅವ್ರೇ ಸಾಹಿತ್ಯ ಬರೆದಿರೋ ಈ ಹಾಡು ಹಿರೋಶಿಮಾ ಪಾತ್ರದಾರಿ ಡಾಲಿ ಧನಂಜಯ ಹಾಗೂ ಚುಕ್ಕಿ ಅನ್ನೋ ಬಾಲಕಿ ಪ್ರಾಣ್ಯ ನಡುವಿನ ಜರ್ನಿ ಸಾಂಗ್ ಆಗಿದೆ. ವಿಜಯ್ ಪ್ರಕಾಶ್ ಕಂಠದಲ್ಲಿ ಮೂಡಿಬಂದ ಈ ಹಾಡು ಸಿನಿಮಾಗೆ ಪ್ಲಸ್ ಪಾಯಿಂಟ್ ಆಗಿದ್ದು, ನೋಡುಗರ ನಾಡಿಮಿಡಿತ ಹೆಚ್ಚಿಸಿದೆ.

ನಿಹಾರಿಕಾ ಮೂವೀಸ್ ಬ್ಯಾನರ್​​ನಡಿ ಶ್ರೀಹರಿ ನಿರ್ಮಾಣದ ಈ ಸಿನಿಮಾ ಇದೇ ಸೆಪ್ಟೆಂಬರ್ 9ಕ್ಕೆ ತೆರೆ ಮೇಲೆ ಮೂಡಲಿದೆ. ರಿಲೀಸ್ ಡೇಟ್ ಜೊತೆ ಒಂದಷ್ಟು ಕ್ಯಾರೆಕ್ಟರ್ಸ್​ನ ರಿವೀಲ್ ಮಾಡಿದ್ದ ಚಿತ್ರತಂಡ, ಸಿನಿಮಾ ಟೈಟಲ್​ನಂತೆ ಆ ಪಾತ್ರಗಳಿಗೂ ವೆರೈಟಿ ನೇಮ್ಸ್ ನೀಡಿ ಹುಬ್ಬೇರಿಸಿತ್ತು. ನಾಗಸಾಕಿಯಾಗಿ ಯಶ್ ಶೆಟ್ಟಿ, ರುಕ್ಮಿಣಿಯಾಗಿ ಅದಿತಿ ಪ್ರಭುದೇವ, ಬಾಳೇಗೌಡರಾಗಿ ನಂದ ಗೋಪಾಲ್, ಪಾಯಲ್ ಆಗಿ ಹಿರಿಯ ನಟಿ ಭಾವನಾ, ಪಟ್ಲಿಂಗನಾಗಿ ಸಂತೋಷ್, ಶಕೀಲ್ ಪಾತ್ರದಲ್ಲಿ ಪ್ರಕಾಶ್ ಬೆಳವಾಡಿ ಕಾಣಸಿಗಲಿದ್ದಾರೆ.

ಸದಾ ವಿಭಿನ್ನ ಪಾತ್ರಗಳ ಮೂಲಕ ಎಲ್ಲರ ಗಮನ ಸೆಳೆಯೋ ನಟರಾಕ್ಷಸ ಡಾಲಿ, ಈ ಚಿತ್ರದಲ್ಲಿ ಖೈದಿಯಾಗಿ ಕಾಣಿಸಿಕೊಳ್ತಿದ್ದಾರೆ. ಯಾವುದೇ ಪಾತ್ರ ಕೊಟ್ರೂ, ಅದನ್ನ ನೀರು ಕುಡಿದಷ್ಟೇ ಸಲೀಸಾಗಿ ಲೀಲಾಜಾಲವಾಗಿ ಮಾಡಬಲ್ಲ ಅಭಿನಯ ಚತುರ ಧನಂಜಯ. ಈ ಸಿನಿಮಾದಲ್ಲಿ ಯಾವ ರೀತಿ ಪ್ರೇಕ್ಷಕರಿಗೆ ಕಿಕ್ ಕೊಡ್ತಾರೆ ಅನ್ನೋ ಕುತೂಹಲ ಮೂಡಿದೆ. ಒಟ್ಟಾರೆ ‘ಒನ್ಸ್ ಅಪ್​ ಆನ್ ಎ ಟೈಮ್ ಜಮಾಲಿ ಗುಡ್ಡ’ ಒಂದೊಳ್ಳೆ ಪ್ರಯತ್ನವಾಗಿ ಮೂಡಿಬರಲಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES