ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಎಲ್ಲೆಲ್ಲಿಂದಲೋ ಬಂದು ಜೀವನ ಕಟ್ಕೋಂಡಿರ್ತಾರೆ. ಕೆಲವ್ರು ಹೊಟ್ಟೆ ಹಸಿವು ಬಡತನ ನೀಗಿಸ್ಕೋಳೋಕೆ ಅಂತ ಬೆಂಗ್ಳೂರಿಗೆ ದುಡ್ಯೋಕ್ ಬಂದ್ರೇ. ಇನ್ನೂ ಕೆಲವ್ರು ಬೆಂಗ್ಳೂರಲ್ಲಿ ಗಾಂಜಾ ಗಮ್ಮತ್ತು ಹಬ್ಸೋಕೆ ಅಂತಾನೇ ಬಂದಿರ್ತಾರೆ. ಆ ಕೆಟಗರಿಗೆ ಸೇರ್ದವ್ರೇ ಈ ಅಸ್ಫಾಕ್ ಮತ್ತು ಶಿಫಾಸ್ ಅನ್ನೋರು.
ಕೇರಳ ಮೂಲದ ಶಿಫಾಸ್ ಯುಟ್ಯೂಬ್ ಚಾನೆಲ್ ಮಾಡ್ಕೊಂಡು ಇರ್ತಾನೆ. ಅದ್ರ ಜೊತೆಗೆ ಈ ಡ್ರಗ್ಸ್ ಸಪ್ಲೈ ಮಾಡೋ ಕೆಲ್ಸ ಕೂಡ ಮಾಡ್ತಿರ್ತಾನೆ. ಇವ್ನ್ ಜೊತೆಗೆ ಬಂಟ್ವಾಳ ಮೂಲದ ಶಿಫಾಸ್ ಅನ್ನೋನು ಮಡಿವಾಳದತ್ರ ಪಿಜಿ ನಡ್ಸೋ ರೀತಿ ಈ ಮಾದಕ ವಸ್ತುಗಳನ್ನು ಪಿಜಿಲಿ ಇರೋ ಹುಡುಗ್ರುಗೆ, ಕಾಲೇಜ್ ಸ್ಟೂಡೆಂಟ್ಸ್‌ಗೆ ಮಾರಾಟ ಮಾಡ್ತಿರ್ತಾರೆ. ಇವ್ರಿಬ್ರೂ ಆರೋಪಿಗಳು ಇದೀಗ ಬೇಗೂರು ಪೊಲೀಸರಿಗೆ ಸಿಕ್ಕಿದ್ದು, ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸ್ತಿದ್ದಾರೆ.
ಡಿಸಿಪಿ ಬೇಗೂರು ಪೊಲೀಸರು ಬಂಧಿಸಿರೋ ಆರೋಪಿಗಳಿಂದ ಬರೋಬ್ಫರಿ ಎರಡು ಕೆ.ಜಿ. 600 ಗ್ರಾಂ ಹ್ಯಾಷಿಷ್ ಆಯಿಲ್ ಮತ್ತು ಆರೋಪಿಗಳ ಹತ್ರ ಇದ್ದ ವಾಹನಗಳನ್ನು ವಶಕ್ಕೆ ಪಡೆದು ಹೆಚ್ಚಿನ ತನಿಖೆ ಮಾಡಲಾಗ್ತಿದೆ. ಒಟ್ಟಾರೆಯಾಗಿ ಪೊಲೀಸ್ರು ಎಷ್ಟೇ ಚುರುಕಾಗಿ ಕೆಲ್ಸ ಮಾಡ್ತಿದ್ರೂ ಕೂಡ ಅಪರಾಧ ಪ್ರಕರಣಗಳು ನಿರಂತರವಾಗಿ ಬೆಳಕಿಗೆ ಬರ್ತಾನೆ ಇವೆ. ಮಳೆ ನಿಂತ್ರೂ ಮರದ ಮೇಲಿನ ಹನಿ ನಿಂತಿಲ್ಲ ಅನ್ನೋ ಹಾಗೇ ಎಷ್ಟೇ ಕಠಿಣ ಕಾನೂನು ಕ್ರಮಗಳಿದ್ರೂ ಕೂಡ ಈ ಮಾದಕ ವಸ್ತುಗಳ ನಿಯಂತ್ರಣ ಮಾತ್ರ ಸಾಧ್ಯ ಆಗ್ತಾನೇ ಇಲ್ಲ.
ಅಶ್ವಥ್ ಎಸ್.ಎನ್.ಕ್ರೈಂ ಬ್ಯೂರೋ ಪವರ್ ಟಿವಿ