Wednesday, January 22, 2025

ಸಿಲಿಕಾನ್​ ಸಿಟಿ ವಾಹನ ಸವಾರರೇ ಎಚ್ಚರ

ಬೆಂಗಳೂರು : ನಿನ್ನೆ ರಾತ್ರಿ ಸುರಿದ ಭಾರಿ ಮಳೆಗೆ ಬೆಂಗಳೂರಿನ ರೋಡ್​​ಗಳೆಲ್ಲವೂ ಕೆರೆಯಂಗಳದಂತಾಗಿದ್ದು, ರಸ್ತೆಯಲ್ಲಿ ನೀರು ಜಾಸ್ತಿ ಇರೋ ಕಾರಣ ದ್ವಿಚಕ್ರ ವಾಹನ ಸವಾರ ಗುಂಡಿಗೆ ಬಿದ್ದು ಗಾಯಗೊಂಡಿದ್ದಾರೆ.

ಇದು ಬಿಬಿಎಂಪಿ ಯ ನಿರ್ಲಕ್ಷ್ಯ ವೋ ಇಲ್ಲ ವರುಣನ ಆರ್ಭಟವೋ ಗೊತ್ತಿಲ್ಲ? ರಸ್ತೆ ಚೆನ್ನಾಗಿದೆ ಅಂತ ಸವಾರಿ ಮಾಡೋವಾಗ ನಿಮ್ಮ ಕೈ ಕಾಲು ಒಮ್ನೆ ಚೆಕ್ ಮಾಡಿಕೊಳ್ಳಿ. ರಸ್ತೆಯಲ್ಲಿ ಬರೀ ನೀರಿದೆ ರೋಡ್ ಚೆನ್ನಾಗಿದೆ ಅನ್ನೋ ಭ್ರಮೆ ಬೇಡ. ನಿನ್ನೆ ರಾತ್ರಿ ಸುರಿದ ಭಾರಿ ಮಳೆಗೆ ಬೆಂಗಳೂರಿನ ರೋಡ್ ಗಳೆಲ್ಲವೂ ಕೆರೆಯಂಗಳದಂತಾಗಿದ್ದು, ರಸ್ತೆಯಲ್ಲಿ ನೀರು ಜಾಸ್ತಿ ಇರೋ ಕಾರಣ ದ್ವಿಚಕ್ರ ವಾಹನ ಸವಾರ ಗುಂಡಿಗೆ ಬಿದ್ದು ಗಾಯಗೊಂಡಿದ್ದಾರೆ.

ನಿನ್ನೆ ಡ್ಯೂಟಿ ಮುಗಿಸಿ ಮನೆ ಕಡೆ ಹೋಗುವಾಗ ಈ ಅವಘಡ ಸಂಭವಿಸಿದ್ದು, ಇಂದಿರಾನಗರ ಬಿಡಿಎ ಕಾಂಪ್ಲೆಕ್ಸ್ ಹತ್ತಿರ ಈ ದುರ್ಘಟನೆ ನಡೆದಿದೆ. ಗಾಯಾಳು ವೆಂಕಟೇಶ್ ಅವ್ರಿಗೆ ಕಾಲಿನ ಹಿಮ್ಮಡಿ ಭಾಗ ಒಡೆದು 22 ಹೊಲಿಗೆ ಹಾಕಲಾಗಿದೆ. ಅಧಿಕಾರಿಗಳ ನಿರ್ಲಕ್ಷಕ್ಕೆ ಇನ್ನೆಷ್ಟು ವಾಹನ ಸವಾರರು ಬಲಿಯಾಗಬೇಕೋ..? ಈ ಘಟನೆ ಬಳಿಕ ಬಿಬಿಎಂಪಿ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಾರಾ ಎಂದು ಕಾದುನೋಡಬೇಕು.

RELATED ARTICLES

Related Articles

TRENDING ARTICLES