Wednesday, December 25, 2024

ಸಿಲಿಕಾನ್ ಸಿಟಿಯಲ್ಲಿ ನಿಲ್ಲದ ಅನಧಿಕೃತ ಫ್ಲೆಕ್ಸ್ ಬ್ಯಾನರ್ ಹಾವಳಿ

ಬೆಂಗಳೂರು : ಒಂದೇ ವಾರದಲ್ಲಿ 2500ಕ್ಕೂ ಹೆಚ್ಚು ಪ್ಲೆಕ್ಸ್, ಬ್ಯಾನರ್ ತೆರವು, 20ಕ್ಕೂ ಹೆಚ್ಚು ದೂರು ದಾಖಲಾಗಿದ್ದು, ಅನಧಿಕೃತ ಪ್ಲೆಕ್ಸ್ ಬ್ಯಾನರ್ ತೆರವು ಕಾರ್ಯಾಚರಣೆಗೆ ತಂಡ ರೆಡಿಯಾಗಿದೆ.

ನಗರದ ಅಂದಕ್ಕೆ ಕುತ್ತು ಬರುವಂತೆ ಅನಧಿಕೃತವಾಗಿ ಫ್ಲೆಕ್ಸ್ ಬ್ಯಾನರ್ ಅಳವಡಿಕೆ ಮಾಡಿದ್ದು, ಇದೀಗ ಮತ್ತೊಂದು ಹಂತಕ್ಕೆ ಹೋದ ಬಿಬಿಎಂಪಿ ಫ್ಲೆಕ್ಸ್ ಬ್ಯಾನರ್ ಕಟ್ಟುವವರ ನಡುವಿನ ಸಮರ ಉಂಟಾಗಿದೆ. ಅನಧಿಕೃತ ಪ್ಲೆಕ್ಸ್ ಬ್ಯಾನರ್ ಗಳನ್ನು ಬುಡಸಮೇತ ಕಿತ್ತುಹಾಕಲು ಹೊರಟ ಬಿಬಿಎಂಪಿ. ಫ್ಲೆಕ್ಸ್, ಬ್ಯಾನರ್ ಅಳವಡಿಸುವವರಲ್ಲ. ಈ ಬಾರಿ ಬಿಬಿಎಂಪಿ ಅಧಿಕಾರಿಗಳ ಟಾರ್ಗೆಟ್ಟೇ ಬೇರೆಯಾಗಿದ್ದು, ಅನಧಿಕೃತ ಫ್ಲೆಕ್ಸ್ ಬ್ಯಾನರ್ ವಿರುದ್ದ ಸಮರ ಸಾರಿದೆ.

ಇನ್ನು, ಫ್ಲೆಕ್ಸ್ , ಬ್ಯಾನರ್ ತಯಾರಿಕಾ ಘಟಕಗಳ ಮೇಲೆಯೇ ಪಾಲಿಕೆ ಅಧಿಕಾರಿಗಳ ರೇಡ್ ಮಾಡಿದ್ದು, ಒಂದೇ ವಾರದಲ್ಲಿ 2500ಕ್ಕೂ ಹೆಚ್ಚು ಪ್ಲೆಕ್ಸ್, ಬ್ಯಾನರ್ ತೆರವು, 20ಕ್ಕೂ ಹೆಚ್ಚು ದೂರು ದಾಖಲಾಗಿದೆ. ಬೆಂಗಳೂರಲ್ಲಿ ಸಂಪೂರ್ಣವಾಗಿ ಅನಧಿಕೃತ ಪ್ಲೆಕ್ಸ್ ಬ್ಯಾನರ್ ತೆರವು ಕಾರ್ಯಾಚರಣೆಗೆ ತಂಡ ರೆಡಿಯಾಗಿದ್ದು, ಪ್ರತಿ ವಾರ್ಡ್ ನಲ್ಲೂ ರೆವಿನ್ಯೂ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ಪಾಲಿಕೆ ವಿಶೇಷ ತಂಡ ರಚನೆ ಮಾಡಿದೆ.

ಅದಲ್ಲದೇ, ಈಗಾಗಲೇ ನಗರದ ಕಾಟನ್ ಪೇಟೆ, ನ್ಯೂತರಗುಪೇಟೆ, ಚಿಕ್ಕ ಪೇಟೆ ಭಾಗದಲ್ಲಿ ಫ್ಲೆಕ್ಸ್, ಬ್ಯಾನರ್ ಮುದ್ರಣಾಲಯಕ್ಕೆ ಬೀಗ ಬಿದ್ದಿದೆ. ಇದೇ ಮಾದರಿಯಲ್ಲಿ ಬೆಂಗಳೂರಿನ ಎಲ್ಲಾ ವಲಯಗಳಲ್ಲೂ ಪ್ಲೆಕ್ಸ್ ಪ್ರಿಂಟಿಂಗ್ ಪ್ರೆಸ್ ಮೇಲೆಯೇ ಕಣ್ಣಿಡಲು ಬಿಬಿಎಂಪಿ ತೀರ್ಮಾನ ಮಾಡಿದೆ.

RELATED ARTICLES

Related Articles

TRENDING ARTICLES