Saturday, January 11, 2025

ಸಿಎಂ ಬದಲಾವಣೆ ಆಗಲ್ಲ : ಆರಗ ಜ್ಞಾನೇಂದ್ರ

ಬೆಂಗಳೂರು : ಪಿಎಸ್ ಐ ನೇಮಕಾತಿ ಮರು ಪರೀಕ್ಷೆ ಶೀಘ್ರದಲ್ಲೇ ಮಾಡಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಐಡಿ ತನಿಖೆ ವರದಿ ಪೂರ್ಣಗೊಂಡ ಬಳಿಕ ಮರುಪರೀಕ್ಷೆ ಮಾಡಲಾಗುವುದು. ಮಂಗಳೂರು ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಗಳು ಯಾರೆಂದು ಗೊತ್ತಾಗಿದೆ. ಕ್ಲೂ ಸಿಕ್ಕಿದೆ ಶೀಘ್ರದಲ್ಲೇ ಪ್ರಮುಖ ಆರೋಪಿಗಳನ್ನು ಬಂಧಿಸಲಾಗುವುದು ಎಂದರು.

ಇನ್ನು, ಕೇಂದ್ರ ಗೃಹ ಸಚಿವ ಅಮಿತ್ ಷಾ ಭೇಟಿ ಮಾಡಲಾಗಿತ್ತು. ಮಂಗಳೂರು ಹತ್ಯೆ ಪ್ರಕರಣದ ಮಾಹಿತಿ ಪಡೆದರು. ಎಲ್ಲವನ್ನೂ ಹೇಳಲಿಕ್ಕೆ ಆಗಲ್ಲ. ಸರ್ಕಾರದ ಕಾರ್ಯವೈಖರಿಗೆ ಬಗ್ಗೆ ಅಮಿತ್ ಷಾ ಗೆ ತೃಪ್ತಿ ಇದೆ. ಸಿಎಂ ಬದಲಾವಣೆ ಆಗಲ್ಲ. ಕಡತಗಳ ವಿಲೇವಾರಿ ಮಾಡ್ತಿದ್ದಾರೆ. ಸಮಯ ನೋಡದೇ ಅವರು ಕೆಲಸ ಮಾಡ್ತಿದ್ದಾರೆ. ಕೆಲವು ಆಯಾ ಹಂತದಲ್ಲಿ ವಿಲೇವಾರಿ ಮಾಡುತ್ತಿದ್ದಾರೆ ಅಂತಾ ಸಿಎಂರನ್ನು ಸಮರ್ಥಿಸಿಕೊಂಡಿದ್ದಾರೆ.

ಅದಲ್ಲದೇ, ಪರಪ್ಪನ ಅಗ್ರಹಾರದಲ್ಲಿ ಜಾಮರ್ ಅಳವಡಿಸುತ್ತೇವೆ. ಜೈಲಿನ ವ್ಯವಸ್ಥೆ ಸಂಪೂರ್ಣವಾಗಿ ಬದಲಾವಣೆ ಮಾಡ್ತಿದ್ದೇವೆ. ಪರಪ್ಪನ ಅಗ್ರಹಾರ ಜೈಲಿಗೆ ಜಾಮರ್ ಅಳವಡಿಕೆ ಮಾಡೇ ಮಾಡ್ತೀವಿ. 2-3 ತಿಂಗಳ ಒಳಗೆ ಜಾಮರ್ ಹಾಕುವ ಪ್ರಕ್ರಿಯೆ ಮುಗಿಯುತ್ತದೆ ಎಂದರು.

RELATED ARTICLES

Related Articles

TRENDING ARTICLES