Thursday, January 9, 2025

ರಾಜ್ಯ ನಾಯಕರಿಗೆ ಬಿಸಿ ಮುಟ್ಟಿಸಿದ ಶಾ

ಬೆಂಗಳೂರು : ರಾಜ್ಯ ರಾಜಧಾನಿಯಲ್ಲಿಂದು ಸಂಚಲನ ಸೃಷ್ಟಿಸಿದ್ದಾರೆ. ಪಕ್ಷಕ್ಕೆ ಬಲ ತುಂಬಲು ಬಿಜೆಪಿ ಚಾಣಕ್ಯ ಅಮಿತ್ ಶಾ ಸಂಕಲ್ಪ ಸಿದ್ಧಿ ಸಮಾವೇಶ ನಡೆಸಿದ್ರು. ಸಮಾವೇಶದ ವೇಳೆ ಪಕ್ಷ ಮತ್ತು ಸರ್ಕಾರದ ಇಮೇಜ್ ಅಭಿವೃದ್ಧಿಗೆ ಮಾರ್ಗದರ್ಶನ ನೀಡುವುದರ ಜೊತೆಗೆ ರಾಜ್ಯ ನಾಯಕರಿಗೆ ಅಮಿತ್ ಶಾ ಬಿಸಿ ಮುಟ್ಟಿಸಿದ್ರು. BJP ಕಾರ್ಯಕರ್ತರ ಹತ್ಯೆಗೆ ತೀವ್ರ ಅಸಮಾಧಾನ ಹೊರಹಾಕಿದ್ದು, ಸಿಎಂ, ಕಟೀಲ್ ಮತ್ತು ಗೃಹ ಸಚಿವ ಆರಗಗೆ ಫುಲ್ ಕ್ಲಾಸ್ ತೆಗೆದುಕೊಂಡ್ರು. ಕಾರ್ಯಕರ್ತರ ರಾಜೀನಾಮೆಯಿಂದ ಪಕ್ಷಕ್ಕೆ ಬಹಳಷ್ಟು ಮುಜುಗರವಾಗಿದೆ.

ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಬಿಜೆಪಿ v/s ಬಿಜೆಪಿ ಎದುರಾಗಿದೆ. ಕೂಡಲೇ ಕಾರ್ಯಕರ್ತರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿತ್ತು ಎಂದು ಸಿಎಂ ಬೊಮ್ಮಾಯಿಗೆ ಶಾ ಪ್ರಶ್ನಿಸಿದ್ರು. ಕಟೀಲ್ ಪ್ರತಿನಿಧಿಸೋ ಕ್ಷೇತ್ರದಲ್ಲಿ ಸರಣಿ ಹತ್ಯೆಗಳಾಗ್ತಿದ್ದು, ಕಾನೂನು ಸುವ್ಯವಸ್ಥೆ ಹದಗೆಟ್ಟರೆ ಯಾರು ಹೊಣೆ..? ಎಂದು ಶಾ ಪ್ರಶ್ನಿಸಿದ್ರು.

ಅದಲ್ಲದೆ, ನೀವು ಕೇವಲ ಸಂಸದರಲ್ಲ, ಪಕ್ಷದ ರಾಜ್ಯಾಧ್ಯಕ್ಷರು. ಪಕ್ಷ ಅಧಿಕಾರಕ್ಕೆ ತರಲು ಏನ್​​ ತಯಾರಿ ಮಾಡಿಕೊಂಡಿದ್ದೀರಿ? ಎಂದು ಪ್ರಶ್ನೆಗಳ ಸುರಿಮಳೆಯೇ ಹರಿಸಿದ್ರು.ಇನ್ನು, ಹಂತಕರ ಬಂಧನದ ವಿಚಾರವಾಗಿ ನಿಮ್ಮಿಂದ ಆಗದಿದ್ದರೆ ಹೇಳಿ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರಗೆ ಕೇಳಿದ್ರು. ಮಾಧ್ಯಮಗಳಿಗೆ ಹೇಳಿಕೆ ನೀಡುವುದು ಮುಖ್ಯವಲ್ಲ, ಹತ್ಯೆಗಳನ್ನು ತಡೆಯೋದು ಮುಖ್ಯ ಎಂದು ಅಮಿತ್ ಶಾ ತಾಕೀತು ಮಾಡಿದ್ದಾರೆ. ಕೊನೆಗೆ ಮತ್ತೆ ಈ ರೀತಿ ಆಗದಂತೆ ನೋಡಿಕೊಳ್ಳಿ, ನಿಮ್ಮ ಮೇಲೆ ಪಕ್ಷ ಇಟ್ಟ ವಿಶ್ವಾಸ ಉಳಿಸಿಕೊಳ್ಳಿ ಎಂದು ರಾಜ್ಯ ನಾಯಕರಿಗೆ ಅಮಿತ್ ಶಾ ಖಡಕ್​​ ಸೂಚನೆ ನೀಡಿದ್ದಾರೆ.

RELATED ARTICLES

Related Articles

TRENDING ARTICLES