Monday, December 23, 2024

ಥೈಲ್ಯಾಂಡ್​​ನಲ್ಲಿ ‘777 ಚಾರ್ಲಿ’ ಟೀಂ

ಸ್ಯಾಂಡಲ್​ವುಡ್​ನ ನಟ ಸಿಂಪಲ್​ ಸ್ಟಾರ್​ ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಬಿಡುಗಡೆ ಆಗಿ ಸೂಪರ್ ಹಿಟ್​ ಆಗಿದ್ದು ಇದೀಗ ಹಳೆಯ ವಿಷಯ. ಚಿತ್ರವು ಬಾಕ್ಸ್ ಆಫೀಸ್​ನಲ್ಲಿಯೂ ಸಖತ್ ಆಗಿ ಸದ್ದು ಮಾಡಿದ್ದು, ಸ್ಯಾಂಡಲ್​ವುಡ್​ನಲ್ಲಿ ಹೊಸದ ಸಂಚಲನವನ್ನು ಸೃಷ್ಟಿ ಮಾಡಿತ್ತು.

ಅದರಲ್ಲಿ ಚಾರ್ಲಿ ಪಾತ್ರದಲ್ಲಿ ನಟಿಸಿದ್ದ ನಾಯಿಯಂತೂ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು.ಚಿತ್ರ ಬಿಡುಗಡೆ ಆಗಿ 50 ದಿನಗಳನ್ನೂ ಪೂರೈಸಿದೆ. ಜೊತೆಗೆ ಓಟಿಟಿ ಅಲ್ಲಿಯೂ ಚಿತ್ರವು ಬಿಡುಗಡೆ ಆಗಿದ್ದು, ಒಟ್ಟಾರೆಯಾಗಿ ಚಿತ್ರವು ಬರೋಬ್ಬರಿ 150 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಹೀಗಾಗಿ ಚಾರ್ಲಿ ಸಿನಿಮಾದ ಚಿತ್ರತಂಡ ಇದೀಗ ಚಿತ್ರದ ಸಕ್ಸಸ್​ ಅನ್ನು ಸಂಭ್ರಮಿಸಲು ಥೈಲ್ಯಾಂಡ್​ಗೆ ಹಾರಿದೆ.

ಚಿತ್ರದ ನಿರ್ದೇಶಕ ಕಿರಣ್ ರಾಜ್​, ನಟ ರಕ್ಷಿತ್ ಶೆಟ್ಟಿ ಸೇರಿದಂತೆ ಚಿತ್ರತಂಡದ ಸರಿಸುಮಾರು ಎಲ್ಲರೂ ಥೈಲ್ಯಾಂಡ್​ ಪ್ರವಾಸದಲ್ಲಿದ್ದಾರೆ. ನಿರ್ದೇಶಕ ಕಿರಿಣ್ ರಾಜ್​ ಅವರು ತಮ್ಮ ಸಾಮಾಜಿಕ ಜಾಲತಾಣವಾದ ಫೇಸ್​ಬುಕ್​ ಮತ್ತು ಟ್ವಿಟರ್​ ನಲ್ಲಿ ಫೋಟೋವನ್ನು ಹಂಚಿಕೊಂಡಿದ್ದು, ‘ಶಾಂತಿ ಮತ್ತು ನಗು, ಯಶಸ್ಸಿನ ನಂತರ’ ಎಂದು ಬರೆದುಕೊಂಡಿದ್ದಾರೆ.

RELATED ARTICLES

Related Articles

TRENDING ARTICLES