Monday, December 23, 2024

ಕಿಚ್ಚನ ಮೇಲೆ ಷಡ್ಯಂತ್ರ.. ಡೈರೆಕ್ಟರ್ ನಂದಕಿಶೋರ್ ಸಿಡಿಮಿಡಿ

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮೇಲೆ ಪದೇ ಪದೆ ಷಡ್ಯಂತ್ರ ಮಾಡ್ತಿರೋರ ಮೇಲೆ ಸ್ಟಾರ್ ಡೈರೆಕ್ಟರ್ ನಂದಕಿಶೋರ್ ಕಿಡಿ ಕಾರಿದ್ದಾರೆ. ರಮ್ಮಿ ಆ್ಯಡ್​​ ಕುರಿತು ಅನಾಮಿಕ ವ್ಯಕ್ತಿಯೊಬ್ಬ ಕಿಚ್ಚನ ಬಗ್ಗೆ ಅವಹೇಳನಕಾರಿ ವಿಡಿಯೋ ಮಾಡಿ ಹರಿಬಿಟ್ಟಿದ್ದ. ಆಗ ರೊಚ್ಚಿಗೆದ್ದಿದ್ದ ನಂದಕಿಶೋರ್, ಇದೀಗ ರೋಣನ ವಿಷಯಕ್ಕೂ ತಮ್ಮ ಮೆಂಟರ್ ಪರ ನಿಂತಿದ್ದಾರೆ. ಪವರ್ ಟಿವಿ ಜೊತೆ ಎಕ್ಸ್​ಕ್ಲೂಸಿವ್ ಆಗಿ ಮಾತನಾಡಿದ್ದಾರೆ.

  • ಅಂದು ರಮ್ಮಿ ಆ್ಯಡ್​​.. ಇಂದು ರೋಣ ಚಿತ್ರಕ್ಕೆ ಅಪಪ್ರಚಾರ
  • ನೂರು ಕೋಟಿ ಕ್ಲಬ್​ನತ್ತ ವಿಕ್ರಾಂತ್ ರೋಣ ನಾಗಾಲೋಟ
  • ಅಭಿನಯ ಚಕ್ರವರ್ತಿಯ ಗತ್ತು ಆಲ್ ಇಂಡಿಯಾಗೆ ಗೊತ್ತು

ಕಿಚ್ಚ ಸುದೀಪ್ ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್. ಅದ್ರಲ್ಲಿ ಯಾವುದೇ ಸಂದೇಹವಿಲ್ಲ. ಆದ್ರೆ ಅವ್ರು ಮ್ಯಾನ್ ಆಫ್ ಮಲ್ಟಿ ಟ್ಯಾಲೆಂಟ್. ತಮ್ಮ 25 ವರ್ಷದ ಸಿನಿಜರ್ನಿಯಲ್ಲಿ ನಿರ್ದೇಶಕ, ನಟ, ನಿರ್ಮಾಪಕ, ಗಾಯಕ ಹೀಗೆ ಚಿತ್ರರಂಗದ ಬೇರೆ ಬೇರೆ ಆಯಾಮಗಳಲ್ಲಿ ತಮ್ಮನ್ನ ತೊಡಗಿಸಿಕೊಂಡು, ಬಹುದೊಡ್ಡ ಛಾಪನ್ನು ಒತ್ತಿದ್ದಾರೆ.

ಕಿಚ್ಚ ಈಸ್ ಬ್ರ್ಯಾಂಡ್. ಅವ್ರಿಗೆ ಆಲ್ ಇಂಡಿಯಾ ಕಟೌಟ್ ಅನ್ನೋ ಪದ ಸುಖಾಸುಮ್ಮನೆ ಬಂದಿದ್ದಲ್ಲ. ಅವ್ರ ಒಂದೊಂದು ಹೆಜ್ಜೆ ಕೂಡ ಅಷ್ಟು ತೂಕವಾಗಿತ್ತು. ಪರಭಾಷೆಯಲ್ಲಿ ಅವ್ರ ನಟನಾ ಗತ್ತಿಗೆ ಎಂಥವ್ರೂ ಫಿದಾ ಆದ್ರು. ಮೆಗಾಸ್ಟಾರ್, ಸೂಪರ್ ಸ್ಟಾರ್ಸ್​ ಜೊತೆ ಉತ್ತಮ ಒಡನಾಟ ಕೂಡ ಅವ್ರ ಪ್ರತಿಭೆಯಿಂದಲೇ ಪಡೆದುಕೊಂಡಿದ್ದು ಅನ್ನೋದು ಗೊತ್ತೇಯಿದೆ.

ಸುದೀಪ್ ಬರೀ ರಿಮೇಕ್ ಸಿನಿಮಾಗಳನ್ನೇ ಮಾಡ್ತಿರ್ತಾರೆ ಅನ್ನೋ ಆರೋಪ ಇತ್ತು. ನಂತ್ರ ಪೈಲ್ವಾನ್ ಚಿತ್ರಕ್ಕಾಗಿ ಬೇರ್ ಬಾಡಿ ಲುಕ್​ನಲ್ಲಿ ಕಾಣಿಸಿಕೊಂಡಾಗ ಅದು ಗ್ರಾಫಿಕ್ಸ್ ಗುರು ಅಂತ ಅಪಪ್ರಚಾರ ಮಾಡಲಾಯ್ತು. ಅದಾದ ಬಳಿಕ ರಮ್ಮಿ ಌಡ್​ನಿಂದ ಯುವಕನೊಬ್ಬ ಪ್ರಾಣ ಕಳೆದುಕೊಂಡ ಅಂತ ಅನಾಮಿಕ ವ್ಯಕ್ತಿಯೊಬ್ಬ ಸುದೀಪ್ ಮೇಲೆ ಅವಹೇಳನಕಾರಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ.

ಇದೀಗ ವಿಕ್ರಾಂತ್ ರೋಣ ಸಿನಿಮಾ ಬಗ್ಗೆಯೂ ಇಲ್ಲಸಲ್ಲದ ನೆಗೆಟಿವ್ ಪಬ್ಲಿಸಿಟಿ ಆರಂಭಿಸಿದ್ದಾರೆ. ಇದು ರಂಗಿತರಂಗ 2 ಅಂತಿದ್ದಾರೆ. ಸಿನಿಮಾ ಚೆನ್ನಾಗಿಲ್ಲ ಅಂತ ವದಂತಿ ಹಬ್ಬಿಸುತ್ತಿದ್ದಾರೆ. ಆದ್ರೆ ಅನೂಪ್ ಭಂಡಾರಿ ನಿರ್ದೇಶನದ ಹಾಗೂ ಜಾಕ್ ಮಂಜು ನಿರ್ಮಾಣದ ರೋಣ, ನೂರು ಕೋಟಿ ಕ್ಲಬ್​ನತ್ತ ಬಾಕ್ಸ್ ಆಫೀಸ್​ನಲ್ಲಿ ನಾಗಾಲೋಟ ಮುಂದುವರೆಸಿದೆ.

ಹಾಲಿವುಡ್ ಸ್ಟೈಲ್ ಆಫ್ ಮೇಕಿಂಗ್​ನಿಂದ ಒಂದೊಳ್ಳೆ ಸ್ಟಾಂಡರ್ಡ್​ ಸೆಟ್ ಮಾಡಿದೆ. ಇಂತಹ ಸಿನಿಮಾ ಬಗ್ಗೆ ರಾಜಮೌಳಿ ಅಂತಹ ಸೆನ್ಸೇಷನಲ್ ಡೈರೆಕ್ಟರ್​ಗಳೇ ಮಾತನಾಡ್ತಿರೋವಾಗ ಕಾಂಜಿಪೀಂಜಿ ವ್ಯಕ್ತಿಗಳ್ಯಾಕೆ ಕಾಲೆಳೆಯುತ್ತಿದ್ದಾರೆ ಅನ್ನೋ ಸಂದೇಹ ಮೂಡಿದೆ. ಈ ಕುರಿತು ಅವ್ರ ಗರಡಿಯಿಂದಲೇ ಇಂಡಸ್ಟ್ರಿಗೆ ಕಾಲಿಟ್ಟ ಡೈರೆಕ್ಟರ್ ನಂದಕಿಶೋರ್ ನಮ್ಮ ಫಿಲ್ಮಿ ಪವರ್ ಟೀಂ ಜೊತೆ ಎಕ್ಸ್​ಕ್ಲೂಸಿವ್ ಆಗಿ ಮಾತನಾಡಿದ್ದಾರೆ.

ಒಟ್ಟಾರೆ ವಿಕ್ರಾಂತ್ ರೋಣ ಚಿತ್ರವನ್ನು ಮೆಚ್ಚಿರೋ ನಂದಕಿಶೋರ್, ಕ್ಲೈಮ್ಯಾಕ್ಸ್ ನನ್ನನ್ನ ಬಹಳ ಕಾಡಿತು ಎಂದರು. ಅಷ್ಟೇ ಅಲ್ಲ, ಸುದೀಪ್ ಅವ್ರ ವಿಚಾರ ಜನರೇ ಉತ್ತರ ಕೊಡ್ತಾರೆ. ಅವ್ರ ಸಿನಿಮಾ ಪ್ಯಾಷನ್ ಬಗ್ಗೆ ನಾನು ಪ್ರತ್ಯೇಕವಾಗಿ ಹೇಳಬೇಕಿಲ್ಲ, ಇಂತಹ ಎಷ್ಟೇ ಪಿತೂರಿಗಳು ಮಾಡಿದ್ರೂ ಸಹ ಅವ್ರು ಅದನ್ನ ಮೆಟ್ಟಿ ನಿಲ್ತಾರೆ ಅನ್ನೋ ಮಾತನ್ನ ಕರಾರುವಕ್ಕಾಗಿ ಹೇಳಿದ್ದಾರೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES