Monday, January 27, 2025

ಸಿಲಿಕಾನ್ ಸಿಟಿಯಲ್ಲಿ ನಿಲ್ಲದ ಡ್ರಗ್ಸ್ ಮಾಫಿಯಾ…!

ಬೆಂಗಳೂರು : ಇವತ್ತು ಹೊರ ರಾಜ್ಯಗಳಿಂದ ಬಂದಿರೋ ಎಷ್ಟೋ ಐಟಿ ಬಿಟಿ ಎಂಪ್ಲಾಯ್ಸ್ ಅಂಡ್ ಸ್ಟೂಡೆಂಟ್ಸ್‌ಗೆ ಆನ್ಲೈನೇ ಒಂದ್ ರೀತಿ ಎ ಟು ಝಡ್ ಪ್ಲಾಟ್ ಫಾರ್ಮ್ ಆಗೋಗಿದೆ. ಈಗೆಲ್ಲಾ ನೀವ್ ಏನೇ ಬೇಕು ಅಂದ್ರು ಆನ್ಲೈನ್ ಲ್ಲೇ ಸಿಗ್ತಾವೆ. ಅದು ಫುಡ್ಡು , ಬೆಡ್ಡು, ಬಟ್ಟೆ ಬರೆ ಎಲ್ಲವೂ ಕೂಡಾ. ಕೊರಿಯರ್ ಮುಖಾಂತ್ರ ನಾವ್ ಇಷ್ಟ್ ದಿವ್ಸ ಇದ್ನ ಮಾತ್ರ ಸಪ್ಲೈ ಮಾಡ್ತಾರೆ ಅಂತ ಅನ್ಕೊಂಡಿದ್ವಿ.ಆದ್ರೇ ಇದೀಗ ಈ ಕೊರಿಯರ್ ಮುಖಾಂತರ ಮನೆ ಬಾಗಿಲಿಗೇನೇ ಡ್ರಗ್ಸ್ ಸಪ್ಲೈ ಆಗ್ತಿದೆ ಅಂದ್ರೇ ಅಚ್ಚರಿ ಅಲ್ಲ ಶಾಕ್ ಕೂಡ ಆಗುತ್ತೆ.

ಯಾವಾಗ ಈ ಆನ್ಲೈನ್ ಸರ್ವೀಸ್ ಭಾರತಕ್ಕೆ ಕಾಲಿಡ್ತೋ ಆಗಿಂದಾನೇ ಇಂಟರ್ ನೆಟ್ ಮೂಲಕ ಅನೇಕ ಬಿಝಿನೆಸ್ ಆ್ಯಪ್‌ಗಳು ಕೂಡ ಎಂಟ್ರಿ ಕೊಟ್ವು. ಕೆಲ್ವು ಆ್ಯಪ್‌ಗಳು ಗ್ರಾಸರಿ, ಫುಡ್ ಅಂತ ಹೋಂ ಡೆಲಿವರಿ ಸರ್ವೀಸ್ ಆರಂಭ ಮಾಡಿದ್ವು. ಇದ್ರಿಂದ ನಮ್ ಜನಕ್ಕೂ ಕೂಡ ಹೆಲ್ಪ್ ಆಯ್ತು‌. ಆದ್ರೀಗ ಇದೇ ಆನ್ಲೈನ್ ಸರ್ವೀಸ್ ಗಳಿಂದ ನಮ್ಮ ಯುವ ಜನಾಂಗಕ್ಕೆ ಮನೆ ಬಾಗಿಲಿಗೇನೆ ಪಾಯ್ಸನ್ ಆಗಿರೋ ಡ್ರಗ್ಸ್ ಕೂಡ ಸಪ್ಲೈ ಆಗ್ತಿದೆ.

ದೆಹಲಿ ಮತ್ತು ಬಿಹಾರ ಮೂಲದ ಐವರು ಲೋಕಾಂಟೋ ಅನ್ನೋ ಆ್ಯಪ್ ಮಾಡ್ಕೊಂಡ್ ಈ ಮುಖಾಂತರ ಆನ್ಲೈನ್ ಡೆಲಿವರಿ ಸರ್ವಿಸ್ ಮಾಡ್ತಿದ್ರು. ಇವ್ರು ಆನ್ಲೈನ್ ಸರ್ವೀಸ್ ಮಾಡ್ತಿದ್ದದ್ದು ಮಾದಕ ವಸ್ತುಗಳನ್ನು. ಇದನ್ನೇ ಸಪ್ಲೈ ಮಾಡೋಕ್ ಬಳಿಸ್ಕೊಳ್ತಾ ಇದ್ದದ್ದು…ನಮ್ ಬೆಂಗ್ಳೂರ್ ಡೆಲಿವರಿ ಬಾಯ್ಸ್ ಗಳನ್ನೇ. ಹೌದು, ಡಂಜೋ಼, ಪೋರ್ಟರ್ ಡೆಲಿವರಿ ಆಪ್ ಗಳ ಮುಖಾಂತರ ಈ ಖತರ್ನಾಕ್ ಆಸಾಮಿಗಳು ನಿಷೇಧಿತ ವಸ್ತುಗಳಾದ ಡ್ರಗ್ಸ್‌ಗಳಾಗಿರುವ ಸ್ಟ್ರಿಪ್ಸ್‌ಗಳು, ಕೊಕ್ಕೆನ್, ಹ್ಯಾಶಿಸ್ ಆಯಿಲ್ ಸೇರಿ ಮಾದಕ ವಸ್ತುಗಳನ್ನು ಮನೆಗೇನೇ ತಲುಪಿಸುವಂತಹ ಕ್ರಿಮಿನಲ್ ಕೆಲ್ಸ ಮಾಡ್ತಿದ್ರು. ಬಳಿಕ ಕಸ್ಟಮರ್ ಹತ್ರ ಫೋನ್ ಪೇ, ಗೂಗಲ್ ಪೇ ಮೂಲಕ ಹಣ ಪಡ್ಕೋತ್ತಿದ್ರು. ಈ ರೀತಿ ಮಾರತ್ತಳ್ಳಿ, ವೈಟ್ ಫೀಲ್ಡ್ ಸುತ್ತ ಮುತ್ತ ಪಿಜಿ ಮಾಡ್ಕಂಡು ಈ ರೀತಿ ಮಾದಕ ವಸ್ತುಗಳನ್ನು ಸಪ್ಲೈ ಮಾಡ್ತಿದ್ದ ಆರೋಪಿಗಳನ್ನು ಇದೀಗ ಬೆಂಗಳೂರಿನ ಸಿಸಿಬಿ ಪೊಲೀಸ್ರು ಬಂಧಿಸಿದ್ದಾರೆ.

ಇನ್ನು, ಬಂಧಿತ ಆರೋಪಿಗಳು ಮೂವರೂ ದೆಹಲಿ ಮೂಲದವರಾಗಿದ್ದು, ಇಬ್ಬರು ಬಿಹಾರದವರು ಎಂದು ತಿಳಿದು ಬಂದಿದೆ. ಆರೋಪಿಗಳಾದ ವಿಶಾಲ್ ಕುಮಾರ್ ಸಿಂಗ್, ಮಹಾಬಲಿ ಸಿಂಗ್ ಖುಶ್ವಾ, ಸುಖ್ ಜೀತ್ ಸಿಂಗ್, ಸಾಗರ್ ಮೆಹ್ತಾ ಹಿಮಾನ್ಶು ಠಾಕೂರ್ ಈ ಐವರು ಆರೋಪಿಗಳನ್ನ ಬಂಧಿಸಿದ್ದು, ಇವರ ಬಳಿ ಇದ್ದಂತಹ ಎಲ್ಲಾ ಮಾದಕ ವಸ್ತುಗಳನ್ನ ವಶಕ್ಕೆ ಪಡೆದು ಸಿಸಿಬಿ ಪೊಲೀಸರು ವಿಚಾರಣೆ ನಡೆಸ್ತಿದ್ದಾರೆ.

RELATED ARTICLES

Related Articles

TRENDING ARTICLES