Wednesday, January 22, 2025

ಬೆಂಗಳೂರಿನಲ್ಲಿ ಮಹಾಲಕ್ಷ್ಮಿ ಹಬ್ಬದ ಖರೀದಿ ಜೋರು

ಬೆಂಗಳೂರು : ಶ್ರಾವಣ ಮಾಸ ಶುರುವಾದ್ರೆ ಸಾಕು. ಸಾಲು ಸಾಲು ಹಬ್ಬಗಳು ಎಂಟ್ರಿ ಕೊಡುತ್ತವೆ. ಅದ್ರಲ್ಲೂ ವರಲಕ್ಷ್ಮಿ ಹಬ್ಬ ಅಂದ್ರೆ ಮಹಿಳೆಯ ಪ್ರಿಯವಾದ ಹಬ್ಬ. ಈ ಹಬ್ಬಕ್ಕೆ ಹೂವು ಪ್ರದಾನ ವಸ್ತುವಾದ್ರೆ, ನಂತರದ ಆದ್ಯತೆ ಹಣ್ಣುಗಳಿಗೆ ಹೀಗಾಗಿ ಹೂವು, ಹಣ್ಣಿನ ದರ ಏರಿಕೆಯಾಗಿದೆ.

ದ್ರಾಕ್ಷಿ, ಸೇಬು, ಬಾಳೆಹಣ್ಣು, ಸೀಬೆ, ಸಪೋಟ, ಸೀತಾಫಲ ಹೀಗೆ ಎಲ್ಲಾ ಬಗೆಯ ಹಣ್ಣುಗಳ ಬೆಲೆಯೂ ಗಗನಕ್ಕೇರಿದೆ. ಹಬ್ಬಕ್ಕೆ 4 ದಿನಗಳ ಮುನ್ನವೇ ಕೆ.ಆರ್​. ಮಾರುಕಟ್ಟೆ, ಮಲ್ಲೇಶ್ವರಂ, ಗಾಂಧಿಬಜಾರ್, ರಾಜಾಜಿನಗರ, ಚಾಮರಾಜಪೇಟೆ ಹೀಗೆ ನಗರದ ಬಹುತೇಕ ಮಾರುಕಟ್ಟೆಗಳು ಫುಲ್ ರಶ್ ಇತ್ತು.

ಭಾನುವಾರವಾದ ಕಾರಣ ಸೀರೆ, ಬಳೆ ಹಾಗೂ ಅಲಂಕಾರಿಕ ವಸ್ತುಗಳ ಖರೀದಿಗೆ ಜನ ಮುಗಿಬಿದ್ದರು. ಮತ್ತೊಂದು ಕಡೆ ಕೆಲವರು ಹೂವು-ಹಣ್ಣು, ಪೂಜಾ ಸಾಮಗ್ರಿಗಳ ಖರೀದಿ ಮಾಡಿದ್ರು. ವರಲಕ್ಷ್ಮಿ ಹಬ್ಬಕ್ಕೆ ಅಲಂಕಾರ ಮಾಡಲು ಹೂಗಳು ಪ್ರಮುಖ ಪಾತ್ರ ವಹಿಸುತೆ. ಹೀಗಾಗಿ ಹೂಗಳ ಬೆಲೆ ಕೇಳಿದರೆ ಬಾಯಿ ಮೇಲೆ ಬೆರಳು ಇಡೋದು ಸಾಮಾನ್ಯವಾಗಿದೆ. ನಿನ್ನೆಯಿಂದಲೇ ಹೂವಿನ ಬೆಲೆ ಗಗನಕ್ಕೇರಿದೆ.

ಕೆ.ಆರ್‌. ಮಾರುಕಟ್ಟೆಯಲ್ಲಿ ಹೂವಿನ ದರ ಹೇಗಿದೆ..?
ಕನಕಾಂಬರ ಕೆಜಿಗೆ 1500-1600
ಮಲ್ಲಿಗೆ ಹೂವು ಕೆಜಿಗೆ 1500
ಮಳ್ಳೆ ಹೂವು ಕೆಜಿಗೆ 500
ಗುಲಾಬಿ ಕೆಜಿಗೆ 200-250
ಸೇವಂತಿಗೆ ಹೂವು ಕೆಜಿಗೆ 250-300

ತಾವರೆ ಹೂವು ಜೋಡಿಗೆ 80-100 ಅಷ್ಟೇ ಅಲ್ಲದ ಹಬ್ಬಕೆ ಬೇಕಾದ ಬಾಳೆಕಂಬ, ಮಾವಿನಸೊಪ್ಪು ಸೇರಿದಂತೆ ಎಲ್ಲದರ ಬೆಲೆಯೂ ಗಗನಕ್ಕೇರಿದೆ.

ಇನ್ನೂ ಲಕ್ಷ್ಮಿಗೆ ನೈವೇದ್ಯ ವಿಡಲು ಹಣ್ಣುಗಳು ಬೇಕೇ ಬೇಕು. ಹೀಗಾಗಿ ಹಣ್ಣುಗಳ ಬೆಳೆಯು ದುಪ್ಪಟಗಿದೆ. ಒಟ್ನಲ್ಲಿ ಹಬ್ಬಕ್ಕೆ ನಾಲ್ಕು ದಿನ ಬಾಕಿ ಇರುವಾಗಲೇ ಇಷ್ಟು ಬೆಲೆ ಆದ್ರೆ ಮಂಗಳವಾರ ಹಾಗೂ ಬುಧವಾರದ ವೇಳೆಗೆ ಹೂ ಹಣ್ಣುಗಳನ್ನು ಮಾತಡಕ್ಕೂ ಕೂಡ ಆಗಲ್ಲ ಅನ್ನೋದು ನಿಜ.

RELATED ARTICLES

Related Articles

TRENDING ARTICLES