Monday, December 23, 2024

ಪ್ರಿಯಾಂಕಾ ‘ಉಗ್ರಾವತಾರ’ಕ್ಕೆ ಪ್ಯಾನ್ ಇಂಡಿಯಾ ಶೇಕ್

ಅಬ್ಬಬ್ಬಾ.. ಪ್ರಿಯಾಂಕಾ ಉಪೇಂದ್ರ ಆ್ಯಕ್ಷನ್ ಖದರ್ ನೋಡಿದ್ರೆ ನೀವು ಬೆಚ್ಚಿ ಬೀಳ್ತೀರಾ. ಆಕೆಯ ಉಗ್ರಾವತಾರಕ್ಕೆ ಪ್ಯಾನ್ ಇಂಡಿಯಾ ಶೇಕ್ ಆಗ್ತಿದೆ. ಸೂಪರ್ ಸ್ಟಾರ್ ಉಪ್ಪಿ ಕೂಡ ಹುಬ್ಬೇರಿಸೋ ರೇಂಜ್​ಗಿರೋ ಆ ಪಂಚಭಾಷಾ ಟೀಸರ್ ಝಲಕ್ ಹೇಗಿದೆ ಅನ್ನೋದನ್ನ ನಾವು ಹೇಳೋದಕ್ಕಿಂತ ನೀವೇ ಓದಿ.

  • ​ಬಹುಭಾಷಾ ಕಲಾವಿದರ ಜತೆ ಪ್ರಿಯಾಂಕಾ ಗನ್ ಘರ್ಜನೆ

ಈಗೇನಿದ್ರೂ ಪ್ಯಾನ್ ಇಂಡಿಯಾ ಸಿನಿಮಾಗಳದ್ದೇ ಜಮಾನ. ಭಾಷೆ, ಗಡಿ, ಮಾರ್ಕೆಟ್, ಜಾತಿ, ಧರ್ಮಗಳನ್ನ ಮೀರಿದ್ದು ಸಿನಿಮಾ. ಅದೊಂದು ಮನರಂಜನಾ ಮಾಧ್ಯಮವಾಗಿ ಎಲ್ಲರನ್ನ ರಂಜಿಸೋ ಕಾರ್ಯ ಮಾಡ್ತಿದೆ. ಬಾಲಿವುಡ್ ಅಥ್ವಾ ಸೌತ್ ಇಂಡಸ್ಟ್ರಿ ಅನ್ನೋ ತಾರತಮ್ಮವಿಲ್ಲ. ಅದ್ರಲ್ಲೂ ನಮ್ಮ ಕನ್ನಡದ ಚಿತ್ರಗಳು ಪರಭಾಷಾ ಕೋಟೆ ಕೊತ್ತಲುಗಳ ಒಳಹೊಕ್ಕಿ ಸದ್ದು ಮಾಡ್ತಿವೆ. ಇಂತಹ ಸುವರ್ಣ ಯುಗದಲ್ಲಿ ಪ್ರಿಯಾಂಕಾ ಉಪೇಂದ್ರ ಕೂಡ ಪ್ಯಾನ್ ಇಂಡಿಯಾ ಚಿತ್ರ ಮಾಡ್ತಿದ್ದಾರೆ.

ಯೆಸ್.. ಇದು ಪ್ರಿಯಾಂಕಾ ನಟನೆಯ ಅಪ್​ಕಮಿಂಗ್ ಆ್ಯಕ್ಷನ್ ವೆಂಚರ್ ಉಗ್ರಾವತಾರ ಚಿತ್ರದ ಟೀಸರ್ ಝಲಕ್. ರೀಸೆಂಟ್ ಆಗಿ ಲಾಂಚ್ ಆಗಿರೋ ಈ ಟೀಸರ್​ನಲ್ಲಿ ಖಾಕಿ ಖದರ್​ನಲ್ಲಿ ತಮ್ಮ ಆ್ಯಕ್ಷನ್ ಪವರ್ ತೋರಿಸಿದ್ದಾರೆ ಪ್ರಿಯಾಂಕಾ. ಇತ್ತೀಚೆಗೆ ಮಹಿಳಾ ಪ್ರಧಾನ ಸಿನಿಮಾಗಳಿಂದಲೇ ಸದ್ದು ಮಾಡ್ತಿರೋ ಈ ಬ್ಯೂಟಿ, ಪತಿ ಉಪೇಂದ್ರ ಅವ್ರಿಗೇನೇ ಕಾಂಪಿಟೇಟರ್ ಆಗಿದ್ದಾರೆ. ಅಷ್ಟರ ಮಟ್ಟಿಗೆ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಬ್ಯುಸಿ ಆಗಿದ್ದಾರೆ.

ಸಲಗ ಚಿತ್ರದ ಪ್ರೊಮೋಷನಲ್ ಸಾಂಗ್​ಗೆ ದನಿಯಾಗಿದ್ದ ಸಿದ್ದಿ ಸಿಂಗರ್ಸ್​ ಗೀತಾ ಸಿದ್ದಿ ಹಾಗೂ ಗಿರಿಜಾ ಸಿದ್ದಿ ಈ ಚಿತ್ರಕ್ಕೂ ಹಾಡೋದ್ರ ಜೊತೆ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಬಸೋಬಿ ಸಾಹಿತ್ಯದ ಕೊಂಕಣಿ ಭಾಷೆಯ ‘ಅಯ್ಯೋ ಮಾಜೋದೇವ, ಅಯ್ಯಯ್ಯೋ ಮಾಜೋದೇವ’ ಗೀತೆಗೆ ಧ್ವನಿಯಾಗಿದ್ದಾರೆ. ಅಯ್ಯೋ ನನ್ನ ದೇವರೆ, ನಾವು ಕಷ್ಟದಲ್ಲಿ ಇದ್ದೇವೆ ನಮ್ಮನ್ನು ಬಂದು ಕಾಪಾಡಿ’ ಎಂದು ಕನ್ನಡದಲ್ಲಿ ಇದು ಅರ್ಥ ನೀಡಲಿದೆ.

ಗುರುಮೂರ್ತಿ ನಿರ್ದೇಶನದ ಈ ಸಿನಿಮಾಗೆ ಎಸ್.ಜಿ.ಸತೀಶ್ ಬಂಡವಾಳ ಹೂಡಿದ್ದಾರೆ. ಹಿರಿಯನಟ ಸುಮನ್, ಪವಿತ್ರಾ ಲೋಕೇಶ್, ಶೋಭ, ನಟರಾಜ್ ಮುಂತಾದವರು ಅಭಿನಯಿಸಿದ್ದಾರೆ. ರಾಧಾಕೃಷ್ಣ ಬಸ್ರೂರು ಸಂಗೀತ, ನಂದಕುಮಾರ್ ಕ್ಯಾಮೆರಾ ಕೈಚಳಕ, ಕೆಜಿಎಫ್ ಖ್ಯಾತಿಯ ಕಿನ್ನಲ್ ರಾಜ್​ರ ಸಾಹಿತ್ಯ ಹಾಗೂ ಸಂಭಾಷಣೆ , ಸಾಹಸ ವಿನೋಧ್-ಮಾಸ್‌ಮಾದ-ಅಶೋಕ್ ಮಾಸ್ಟರ್​ಗಳ ಸ್ಟಂಟ್ಸ್, ವೆಂಕಿ ಎಡಿಟಿಂಗ್ ಚಿತ್ರಕ್ಕಿದೆ. ಚಿತ್ರವು ಸೆಪ್ಟೆಂಬರ್ ತಿಂಗಳಲ್ಲಿ ತೆರೆಗೆ ಬರೋ ಸಾಧ್ಯತೆ ಇದ್ದು, ಸದ್ಯ ಹೇ ವೋಲ್ಟೇಜ್ ಟೀಸರ್​ನಿಂದ ನೋಡುಗರ ನಾಡಿಮಿಡಿತ ಹೆಚ್ಚಿಸಿದೆ.

ಪ್ರಿಯಾಂಕಾ ಉಪೇಂದ್ರರನ್ನ ಹಿಂದೆಂದಿಗಿಂತ ಸಖತ್ ಸ್ಟೈಲಿಶ್ ಆಗಿ ತೋರಿಸಿರೋ ಚಿತ್ರತಂಡ, ಸಮಾಜಕ್ಕೊಂದು ಬಲವಾದ ಸಂದೇಶ ಕೂಡ ಕೊಡ್ತಿದೆ. ಒಟ್ಟಾರೆ ಉಪ್ಪಿ ಫ್ಯಾನ್ಸ್​ಗೂ ಈ ಟೀಸರ್ ಇಷ್ಟವಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡ್ತಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES