Wednesday, January 22, 2025

‘ಸಿದ್ದರಾಮೋತ್ಸವ’ ದಲ್ಲಿ ಭರ್ಜರಿ ಭೋಜನ

ದಾವಣಿಗೆರೆ : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ 75 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ನಾಳೆ ದಾವಣಗೆರೆಯಲ್ಲಿ ಹುಟ್ಟು ಹಬ್ಬದ ಅಮೃತ ಮಹೋತ್ಸವ ಕಾರ್ಯಕ್ರಮ ನಡೆಯುತ್ತಿದ್ದು, ಇದಕ್ಕಾಗಿ ಶಾಮನೂರು ಪ್ಯಾಲೇಸ್ ಮೈದಾನದಲ್ಲಿ ಅದ್ದೂರಿ ಸಿದ್ದತೆ ಕೈಗೊಳ್ಳಲಾಗಿದೆ.

ಈ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಭಾಗಗಳಿಂದ 6 ಲಕ್ಷಕ್ಕೂ ಅಧಿಕ ಮಂದಿ ಆಗಮಿಸಲಿದ್ದಾರೆ ಎಂದು ಹೇಳಲಾಗಿದ್ದು, ಈಗಾಗಲೇ ದಾವಣಗೆರೆಯ ಲಾಡ್ಜ್, ಛತ್ರಗಳು, ಮಠಗಳು ಸೇರಿ 38,000 ರೂಮುಗಳನ್ನು ಬುಕ್ ಮಾಡಲಾಗಿದೆ ಎಂದು ತಿಳಿದುಬಂದಿದೆ.

ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ 1300 ಬಸ್ಸುಗಳನ್ನು ಸಿದ್ದರಾಮಯ್ಯ ಅಭಿಮಾನಿಗಳನ್ನು ಕರೆತರಲು ಬುಕ್ ಮಾಡಲಾಗಿದ್ದು, ಇದರ ಜೊತೆಗೆ 30,000ಕ್ಕೂ ಅಧಿಕ ಖಾಸಗಿ ವಾಹನಗಳು ದಾವಣಗೆರೆಗೆ ಬರಲಿವೆ. ಅಲ್ಲದೆ ಬೀದರ್ ನಿಂದ ದಾವಣಗೆರೆಗೆ ವಿಶೇಷ ರೈಲು ಕಲ್ಪಿಸಲಾಗಿದ್ದು, ಇಂದು ಮಧ್ಯಾಹ್ನ 2 ಗಂಟೆಗೆ ಬೀದರ್ ನಿಂದ ಹೊರಡುವ ರೈಲು ಬುಧವಾರ ದಾವಣಗೆರೆ ತಲುಪಲಿದೆ.ಆಗಮಿಸುವ ಪ್ರತಿಯೊಬ್ಬರಿಗೂ ಭೋಜನದ ವ್ಯವಸ್ಥೆ ಮಾಡಲಾಗಿದ್ದು, ವಿಶೇಷವೆಂದರೆ ವಿಐಪಿ ಗಳಿಂದ ಸಾಮಾನ್ಯರವರೆಗೆ ಎಲ್ಲರಿಗೂ ಒಂದೇ ಬಗೆಯ ಊಟ ಬಡಿಸಲಾಗುತ್ತದೆ. 6.50 ಲಕ್ಷ ಮೈಸೂರ್ ಪಾಕುಗಳನ್ನು ಈಗಾಗಲೇ ಸಿದ್ಧಪಡಿಸಲಾಗಿದ್ದು, ಇದರ ಜೊತೆಗೆ ಪಲಾವ್, ಬಿಸಿಬೇಳೆ ಬಾತ್ ಹಾಗೂ ಮೊಸರನ್ನ ನೀಡಲಾಗುತ್ತದೆ.

RELATED ARTICLES

Related Articles

TRENDING ARTICLES