ರಾಮನಗರ : ಸರ್ಕಾರದ ನಡುವಳಿಕೆ, ಪೊಲೀಸ್ ಇಲಾಖೆಯ ಸಿಬ್ಬಂದಿಗಳ ಬಗ್ಗೆ ಜನರಿಗೆ ಭಯವಿಲ್ಲ ಎಂದು ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಹಲವು ರೀತಿಯ ಸಂಕಷ್ಟ, ಭೀತಿಯ ಪರಿಸ್ಥಿತಿ ಇದೆ. ಕರಾವಳಿ ಪ್ರದೇಶದಲ್ಲಿ ಮೂರು ಹತ್ಯೆ ನಡೆದಿದೆ. ಸರ್ಕಾರದ ನಡುವಳಿಕೆ, ಪೊಲೀಸ್ ಇಲಾಖೆಯ ಸಿಬ್ಬಂದಿಗಳ ಬಗ್ಗೆ ಜನರಿಗೆ ಭಯವಿಲ್ಲ. ಇದು ಎಲ್ಲಿಗೆ ಹೋಗುತ್ತಿದೆ. ಮನೆಗೆ ನುಗ್ಗಿ ಹತ್ಯೆ ಮಾಡುತ್ತಿದ್ದಾರೆ. ಜೀವ ತೆಗೆಯುವ ಕೃತ್ಯ ದೊಡ್ಡಮಟ್ಟಿಗೆ ನಡೆಯುತ್ತಿದೆ. ಕೋಮು ಸಂಘರ್ಷ ತಡೆಯಲು ವೈಫಲ್ಯ ಕಾಣುತ್ತಿದ್ದೇವೆ ಎಂದರು.
ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕಳಪೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸರಿಯಾಗಿ ಯೋಜನೆ ಮಾಡದೆ ಕಾಮಗಾರಿ ಮಾಡಿದ್ದಾರೆ. ಇನ್ನು ರಾಜ್ಯದಲ್ಲಿ ಬೆಳೆಯ ನಷ್ಟ ಸಾಕಷ್ಟು ಇದೆ. ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕೃಷಿ ಚಟುವಟಿಕೆಯಲ್ಲಿ ಲೋಪವಿದೆ. ಸರ್ಕಾರ ನಮಗೂ ಇದಕ್ಕು ಸಂಬಂಧವಿಲ್ಲ ಎಂದು ಸುಮ್ಮನೇ ಇದೆ. ತಕ್ಷಣ ವಿಧಾನಸಭೆ ಅಧಿವೇಶನ ಕರೆಯಬೇಕು. ಚರ್ಚೆ ಮಾಡಲು ತಕ್ಷಣ ಸರ್ಕಾರ ವಿಧಾನಸಭಾ ಅಧಿವೇಶನ ಕರೆಯಬೇಕು. ಕಳೆದ ಬಾರಿ ಕೂಡ ಸರಿಯಾಗಿ ಮಳೆಯ ಪರಿಹಾರ ಕೊಟ್ಟಿಲ್ಲ ಎಂದು ಹೇಳಿದರು.
ಇನ್ನು, ರಾಜ್ಯ ಸರ್ಕಾರದ ಕೊವಿಡ್ ಪರಿಹಾರ ಇದೀಗ ಒಂದು ಲಕ್ಷ ನಿಲ್ಲಿಸಿದ್ದಾರೆ. ಜಾಹಿರಾತು ಮೂಲಕ ಕೇವಲ ಭರವಸೆ ಮೂಡಿಸುತ್ತಿದ್ದಾರೆ. ತಕ್ಷಣ ವಿಧಾನಸಭಾ ಕಲಾಪ ಕರೆಯಬೇಕು. ಇಲ್ಲಿ ಚರ್ಚೆ ಮಾಡಬೇಕು. ಸ್ವೀಕರ್ ಸರ್ಕಾರಕ್ಕೆ ಸೂಚನೆ ಕೊಡಬೇಕು. ಪೊಲೀಸರ ಬಗ್ಗೆ ಜನರಿಗೆ ಭಯ ಭಕ್ತಿ ಇಲ್ಲ. ಯುವಕರು ದುಷ್ಟ ಶಕ್ತಿಗೆ ಒಳಗಾಗುತ್ತಿದ್ದಾರೆ ಎಂದರು.
ಅದಲ್ಲದೇ, ರಾಮನಗರದಲ್ಲಿ ಡಿಸಿ, ಎಸ್ ಪಿ ಹಮ್ಸ್ ತೆಗೆಸಿದ್ದಾರೆ. ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಹಮ್ಸ್ ತೆಗೆಸಿದ್ದಾರೆ. ಅಧಿಕಾರಿಗಳಿಗೆ ಬೆದರಿಸಿ ತೆಗೆಸಿದ್ದಾರೆ. ತೆಗೆಯದಿದ್ದರೆ ಜೈಲಿಗೆ ಕಳುಹಿಸುತ್ತೇನೆ ಎಂದಿದ್ದಾರೆ. ಎಷ್ಟು ಜನ ಸತ್ತಿದ್ದಾರೆ ಎಂಬ ಮಾಹಿತಿ ಇವರಿಗೆ ಇದೀಯಾ. ಜನರ ರಕ್ಷಣೆ ಮಾಡೋಲೊ ಅಥವಾ ಜನರ ಸಾವು ನೋಡುವುದಕ್ಕೋ ಇವರು ಇರುವುದು ಎಂದು ಡಿಸಿ, ಎಸ್ ಪಿ ವಿರುದ್ಧ ಹೆಚ್ಡಿಕೆ ಕಿಡಿಕಾಡಿದ್ದಾರೆ.