Sunday, January 19, 2025

ನ್ಯಾಷನಲ್ ಹೆರಾಲ್ಡ್​ ಕಚೇರಿ ಮೇಲೆ ED ರೇಡ್

ನವದೆಹಲಿ : ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ಮೇಲೆ ದೆಹಲಿಯ ವಿವಿಧ ಪ್ರದೇಶಗಳಲ್ಲಿ ED ದಾಳಿ ನಡೆಸಿದೆ.

ಕಳೆದ ತಿಂಗಳು ED ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರನ್ನು ವಿಚಾರಣೆಗೊಳಪಡಿಸಿದ ಬೆನ್ನಲ್ಲೇ ಈ ದಾಳಿ ನಡೆದಿದೆ. ತನಿಖಾ ಸಂಸ್ಥೆಯು ಇಂದು ದೆಹಲಿಯಲ್ಲಿರುವ ಪತ್ರಿಕೆಯ ಕಚೇರಿಗಳು ಮತ್ತು ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್​​ಗೆ ಸಂಬಂಧಿಸಿದ ಹಲವಾರು ಸಂಸ್ಥೆ ಸೇರಿದಂತೆ ಸುಮಾರು 12 ಸ್ಥಳಗಳ ಮೇಲೆ ದಾಳಿ ನಡೆಸಿದೆ. ಶೋಧ ನಂತರ ತನಿಖಾ ಸಂಸ್ಥೆ ಈ ಆಸ್ತಿಗಳನ್ನು ವಶಕ್ಕೆ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗ್ತಿದೆ.

RELATED ARTICLES

Related Articles

TRENDING ARTICLES