Thursday, January 23, 2025

ಮನೆ ಮಾಲೀಕನ ಯಡವಟ್ಟಿಗೆ ಆರು ವರ್ಷದ ಬಾಲಕಿ ಬಲಿ

ಬೆಂಗಳೂರು : ಮನೆ ಮಾಲೀಕನ ಯಡವಟ್ಟಿಗೆ ಆರು ವರ್ಷದ ಬಾಲಕಿ ಬಲಿಯಾದ ಘಟನೆ ವಸಂತನಗರದ 5ನೇ ಕ್ರಾಸ್ ಬಳಿ ನಡೆದಿದೆ.

ಮನೆಯಲ್ಲಿ ಜಿರಳೆ ಕಾಟಕ್ಕೆ ಔಷಧಿ ಸಿಂಪಡಿಸಿದ್ದ ಮನೆ ಮಾಲೀಕ. ಅದರ ಅರಿವಿಲ್ಲದೆ ಮನೆಗೆ ಬಾಡಿಗೆ ಮನೆಯವ್ರು ಬಂದು ಮಲಗಿದ್ದರು, ಆ ವೇಳೆ ಉಸಿರಾಟದ ಸಮಸ್ಯೆಯಾಗಿ ಆರು ವರ್ಷದ ಬಾಲಕಿ ಸಾವನ್ನಪ್ಪಿದ್ದು, ಉಳಿದಂತೆ ಅಸ್ವಸ್ಥಗೊಂಡಿರೋ ಮನೆ ಮಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಶಿವಶಂಕರ್ ಎಂಬುವರ ಮನೆಯಲ್ಲಿ ವಿನೋದ್ ಫ್ಯಾಮಿಲಿ ವಾಸವಾಗಿದ್ದರು. ವಾರದ ಹಿಂದೆ ಊರಿಗೆ ಹೋಗಿದ್ದ ವಿನೋದ್ ಫ್ಯಾಮಿಲಿ. ಆ ವೇಳೆ ಮನೆ ಮಾಲೀಕ ಶಿವಶಂಕರ್ ಮನೆಯಲ್ಲಿ ಜಿರಳೆ ಔಷಧಿ ಸಿಂಪಡಿಸಿದ್ದಾರೆ. ಆದ್ರೆ, ಊರಿನಿಂದ ಬಂದ ವಿನೋದ್​ ಮನೆಯವ್ರಿಗೆ ಅರಿವಿಲ್ಲದೆ ಮನೆಯಲ್ಲಿ ಮಲಗಿದ್ದಾರೆ. ಆ ವೇಳೆ ಉಸಿರಾಟದ ಸಮಸ್ಯೆಯಾಗಿ ಆರು ವರ್ಷದ ಅಹನಾ ಸಾವನ್ನಪ್ಪಿದ್ದು, ಘಟನೆ ಸಂಬಂಧ ಮನೆ ಮಾಲೀಕ ಶಿವಶಂಕರ ವಿರುದ್ದ ದೂರು ದಾಖಲಾಗಿದೆ.

RELATED ARTICLES

Related Articles

TRENDING ARTICLES