Wednesday, January 22, 2025

ರಾಜ್ಯದಲ್ಲಿ ನಾಳೆ ಬಸ್ ಸಂಚಾರದಲ್ಲಿ ವ್ಯತ್ಯಯವಾಗುತ್ತಾ..?

ಬೆಂಗಳೂರು : ದಾವಣಗೆರೆಯಲ್ಲಿ ನಾಳೆ ನಡೆಯುತ್ತಿರೋ ಸಿದ್ದರಾಮೋತ್ಸ ಕಾರ್ಯಕ್ರಮಕ್ಕೆ ಸಾವಿರಾರು ಸರ್ಕಾರಿ ಬಸ್ ಗಳು ಬುಕಿಂಗ್ ಆಗಿದ್ದು, ನಾಳೆ ಬಸ್ ಸಂಚಾರದಲ್ಲಿ ವ್ಯತ್ಯಯವಾಗುತ್ತಾ ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿದೆ.

ನಗರದಲ್ಲಿ KSRTC,KKRTC ಹಾಗೂ NWKSRT ಯಿಂದ ಸಾವಿರಾರು ಬಸ್ ಗಳು ಬುಕಿಂಗ್ ಆಗಿದ್ದು, ರಾಜ್ಯದ ಬಹುತೇಕ ಸರ್ಕಾರಿ ಬಸ್ ಗಳು ನಾಳೆ ದಾವಣಗೆರೆ ಕಡೆ ಸಂಚಾರ ನಡೆಸಲಿದೆ. ಹೀಗಾಗಿ ವಿವಿಧೆಡೆ ಬಸ್ ಸಂಚಾರದಲ್ಲಿ ವ್ಯತ್ಯಯ ಸಾಧ್ಯತೆ ಇದೆ.

ಇನ್ನು, ರಾಜ್ಯದ ವಿವಿಧ ಜಿಲ್ಲೆಗಳಿಂದ ಕಾಂಗ್ರೆಸ್ ಕಾರ್ಯಕರ್ತರು, ಸಿದ್ದರಾಮಯ್ಯ ಅಭಿಮಾನಿಗಳು ದಾವಣಗೆರೆಗೆ ತೆರಳಲು ಬಸ್​ಗಳು ಬುಕ್ಕಿಂಗ್​ ಆಗಿದ್ದು, ದೂರ ಪ್ರಯಾಣ ಮಾಡುವರಿಗೆ ನಾಳೆ ಸಂಚಾರದಲ್ಲಿ ವ್ಯತ್ಯಯ ಸಾಧ್ಯತೆ ಇದೆ. ಕೆಎಸ್ಆರ್ಟಿಸಿ ಯಲ್ಲಿ 600 ಬಸ್​​ಗಳು ಬುಕಿಂಗ್ ಆಗಿದ್ದು, ವಾಯುವ್ಯ ಹಾಗೂ ಕಲ್ಯಾಣ ಸಾರಿಗೆಯಿಂದ ಅತಿ ಹೆಚ್ಚು ಬಸ್ ಗಳು ಬುಕಿಂಗ್ ಆಗಿದೆ. ಹೀಗಾಗಿ ನಾಳೆ ಇಡೀ ದಿನ ಬಸ್ ಕಾರ್ಯಾಚರಣೆ ಯಲ್ಲಿ ವ್ಯತ್ಯಯ ಸಾಧ್ಯತೆ ಇದೆ.

RELATED ARTICLES

Related Articles

TRENDING ARTICLES