Monday, December 23, 2024

ಅಸಹಿಷ್ಣುತೆ ಮುನ್ನೆಲೆಗೆ.. ಆಮೀರ್​ಗೆ ಬಾಯ್​ಕಾಟ್ ಭಯ

ಬಾಲಿವುಡ್​ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್​ಗೆ ಬಾಯ್​ಕಾಟ್ ಭಯ ಶುರುವಾಗಿದೆ. ಯೆಸ್.. ಅವ್ರ ಬಹುನಿರೀಕ್ಷಿತ ಲಾಲ್​ಸಿಂಗ್ ಚಡ್ಡಾ ಚಿತ್ರ ರಿಲೀಸ್​ಗೆ ಸಜ್ಜಾಗಿದ್ದು, ದಯವಿಟ್ಟು ನನ್ನ ಸಿನಿಮಾನ ಬಾಯ್​ಕಾಟ್ ಮಾಡ್ಬೇಡಿ ಅಂತ ಕೈ ಮುಗೀತಿದ್ದಾರೆ ಆಮೀರ್. ಇಷ್ಟಕ್ಕೂ ಈಗ್ಯಾಕೆ ಅಂತಹ ಸಂದಿಗ್ಧ ಪರಿಸ್ಥಿತಿ ಎದುರಾಯ್ತು..? ಅದ್ರ ಹಿಂದಿನ ಇನ್​ಸೈಡ್ ಸ್ಟೋರಿ ಏನು ನೀವೇ ಓದಿ.

  • ಇಂಡಿಯಾದಲ್ಲಿ ಅಸಹಿಷ್ಣುತೆ, ಅಭದ್ರತೆ ಎಂದಿದ್ದ ಆಮೀರ್
  • ಈಗ ಐ ಲವ್ ಇಂಡಿಯಾ ಅಂತಿರೋ ಮಿಸ್ಟರ್ ಪರ್ಫೆಕ್ಷನಿಸ್ಟ್
  • ಮುಂದಿನ ವಾರ ಬಹುನಿರೀಕ್ಷಿತ ಲಾಲ್​ಸಿಂಗ್ ಚಡ್ಡಾ ರಿಲೀಸ್

ಆಮೀರ್ ಖಾನ್.. ಸಿನಿಮಾಗಳ ಸಂಖ್ಯೆಗಿಂತ ಕ್ವಾಲಿಟಿ ಸಿನಿಮಾಗಳಿಗೆ ಹೆಸರಾದ ಮಿಸ್ಟರ್ ಪರ್ಫೆಕ್ಷನಿಸ್ಟ್. ಥಗ್ಸ್ ಆಫ್ ಹಿಂದೂಸ್ತಾನ್ ಸಿನಿಮಾ ಬಂದು ಹೆಚ್ಚೂ ಕಡಿಮೆ ನಾಲ್ಕು ವರ್ಷಗಳಾಯ್ತು. ಅಲ್ಲಿಂದ ಇಲ್ಲಿಯವರೆಗೂ ಅವ್ರ ಕಂಪ್ಲೀಟ್ ಎಫರ್ಟ್​ ಲಾಲ್​ಸಿಂಗ್ ಚಡ್ಡಾ ಪ್ರಾಜೆಕ್ಟ್ ಮೇಲಷ್ಟೇ. ಅದ್ರ ರಿಸಲ್ಟ್ ಟ್ರೈಲರ್ ಹಾಗೂ ಸಾಂಗ್ಸ್​ನಿಂದ ಗೊತ್ತಾಗ್ತಿದೆ.

ಯೆಸ್.. ಲಾಲ್​ಸಿಂಗ್ ಚಡ್ಡಾ ಹಾಲಿವುಡ್​ನ ಫಾರೆಸ್ಟ್ ಗಂಪ್ ಚಿತ್ರದಿಂದ ಸ್ಫೂರ್ತಿಗೊಂಡು ಮಾಡಿರೋ ಸಿನಿಮಾ ಅನ್ನೋದನ್ನ ಆಮೀರ್ ಅವ್ರೇ ಬಿಟ್ಟುಕೊಟ್ಟಿದ್ರು. ಇದೀಗ ಟ್ರೈಲರ್ ಹಾಗೂ ಮೇಕಿಂಗ್ ಮಾಡ್ತಿರೋ ಹಂಗಾಮ ನೋಡಿದ್ರೆ, ಚಿತ್ರತಂಡ ಅದಕ್ಕಾಗಿ ಹಾಕಿರೋ ಎಫರ್ಟ್​ ಎಂಥದ್ದು ಅನ್ನೋದು ಸ್ಪಷ್ಟವಾಗಿದೆ.

ಟಾಲಿವುಡ್​ನ ಕಿಂಗ್ ನಾಗಾರ್ಜುನ್​ರ ಪುತ್ರ ಅಕ್ಕಿನೇನಿ ನಾಗಚೈತನ್ಯ ಕೂಡ ಆಮೀರ್ ಜೊತೆ ತೆರೆಹಂಚಿಕೊಂಡಿದ್ದು, ಸಿನಿಮಾದ ಸ್ಟ್ರೆಂಥ್ ಹೆಚ್ಚಿಸಿದ್ರು. ಅದೇ ಕಾರಣಕ್ಕೆ ಹೈದ್ರಾಬಾದ್​ನಲ್ಲಿ ಚಿರಂಜೀವಿ, ನಾಗಾರ್ಜುನ್​ ಸೇರಿದಂತೆ ಒಂದಷ್ಟು ಮಂದಿ ಡೈರೆಕ್ಟರ್ಸ್​ಗೆ ಈ ಸಿನಿಮಾನ ತೋರಿಸಿದ್ರು ಮಿಸ್ಟರ್ ಪರ್ಫೆಕ್ಷನಿಸ್ಟ್. ಅಲ್ಲದೆ, ಸಿನಿಮಾಗೆ ರಿಲೀಸ್​ಗೂ ಮೊದ್ಲೇ ಬೊಂಬಾಟ್ ರೆಸ್ಪಾನ್ಸ್ ಪಡೆದುಕೊಂಡಿದ್ರು.

ಇದೀಗ ಸಿನಿಮಾ ಇದೇ ಆಗಸ್ಟ್ 12ಕ್ಕೆ ಅಂದ್ರೆ ಮುಂದಿನ ಗುರುವಾರ ತೆರೆಗಪ್ಪಳಿಸಲು ಸಜ್ಜಾಗಿದೆ. ಇಂತಹ ಶಾರ್ಟ್​ ಟೈಂನಲ್ಲಿ ಆಮೀರ್​ಗೆ ಬಾಯ್​ಕಾಟ್ ಭಯ ಕಾಡ್ತಿದೆ. ಕಾರಣ 2015ರಲ್ಲಿ ನೀಡಿದ್ದ ಒಂದೇ ಒಂದು ವಿವಾದಾತ್ಮಕ ಹೇಳಿಕೆ. ಹೌದು.. ದೇಶದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದ್ದು, ಅಭದ್ರತೆ ಭಾವನೆ ನಮ್ಮ ಕುಟುಂಬವನ್ನೂ ಕಾಡುತ್ತಿದೆ ಎಂದಿದ್ದರು. ಅದಕ್ಕೆ ಪತ್ನಿ ಕಿರಣ್ ಧ್ವನಿಗೂಡಿಸಿ, ನಮ್ಮ ಕುಟುಂಬ ಭಾರತ ಬಿಟ್ಟು ಹೋಗಬಾರದೇಕೆ ಎಂದಿದ್ರು. ಇದು ತೀವ್ರ ಖಂಡನೆಗೆ ಗುರಿಯಾಗಿ, ವ್ಯಾಪಕ ಆಕ್ರೋಶಕ್ಕೆ ತುತ್ತಾಗಿದ್ರು ಆಮೀರ್ ಹಾಗೂ ಕುಟುಂಬ.

ಇದೀಗ ಲಾಲ್​ಸಿಂಗ್ ಚಡ್ಡಾ ಸಿನಿಮಾನ ಬಾಯ್​ಕಾಟ್ ಮಾಡಿ ಅಂತ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗ್ತಿದೆ. ಅಂದೆಂದೋ ನೀಡಿದ ಹೇಳಿಕೆ ಈಗ ಮುನ್ನೆಲೆಗೆ ಬಂದಿದ್ದು, ಆಮೀರ್​ಗೆ ಬಾಯ್​ಕಾಟ್ ಫೋಬಿಯಾ ಕಾಡ್ತಿದೆ. ಕೂಡಲೇ ಅದನ್ನ ಅರಿತ ಮಿಸ್ಟರ್ ಪರ್ಫೆಕ್ಷನಿಸ್ಟ್, ದಯವಿಟ್ಟು ನನ್ನ ಸಿನಿಮಾನ ಬಹಿಷ್ಕಾರ ಮಾಡ್ಬೇಡಿ ಅಂತ ಮನವಿ ಮಾಡ್ತಿದ್ದಾರೆ.

ಅಷ್ಟೇ ಅಲ್ಲ, ನನಗೆ ದೇಶದ ಮೇಲೆ ಅಪಾರ ಗೌರವವಿದೆ. ಐ ಲವ್ ಇಂಡಿಯಾ ಅಂತ ಪ್ರಚಾರ ಕಾರ್ಯಗಳಲ್ಲಿ ಹೇಳಿಕೊಂಡಿದ್ದಾರೆ. ಅದೇನೇ ಇರಲಿ, ಸಮಯಕ್ಕೆ ತಕ್ಕನಾಗಿ ತಮ್ಮ ಬೇಳೆ ಬೇಯಿಸಿಕೊಳ್ಳೋದು ಸರ್ವೇ ಸಾಮಾನ್ಯ ಅನ್ನೋದನ್ನ ಆಮೀರ್ ಕೂಡ ತೋರಿಸಿಕೊಡ್ತಿದ್ದಾರೆ. ದೇಶದಲ್ಲಿನ ಅಸಹಿಷ್ಣುತೆ ಬಗ್ಗೆ ಮಾತನಾಡಿರೋ ಅವ್ರು ಭದ್ರತೆಯನ್ನೂ ಪ್ರಶ್ನಿಸಿದ್ರು. ಸಿನಿಮಾದಲ್ಲಿ ಮಾತ್ರ ಹೀರೋ ಆಗಿದ್ದ ಆಮೀರ್, ಈ ಕಾರಣಕ್ಕೆ ನಿಜ ಜೀವನದಲ್ಲಿ ಝೀರೋ ಅನಿಸಿಕೊಂಡಿದ್ರು.

ಇದೀಗ ಆ ಅಸಹಿಷ್ಣುತೆ ಕುರಿತ ಹೇಳಿಕೆ ಲಾಲ್​ಸಿಂಗ್ ಚಡ್ಡಾ ಚಿತ್ರದ ರಿಲೀಸ್ ಹಾಗೂ ಬಾಕ್ಸ್ ಆಫೀಸ್ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಅನ್ನೋದನ್ನ ಕಾದು ನೋಡಬೇಕಿದೆ. ಜನರೇ ಎಲ್ಲಕ್ಕೂ ಉತ್ತರ ಕೊಡಲಿದ್ದು, ಆಮೀರ್​ಗೆ ಬುದ್ದಿ ಕಲಿಸ್ತಾರಾ ಅನ್ನೋದು ನಿರೀಕ್ಷಿಸಬೇಕು.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES