Tuesday, November 5, 2024

ಮಣಿರತ್ನಂ ಪೊನ್ನಿಯನ್ ಬಗ್ಗೆ ಮೌಳಿ ಶಾಕಿಂಗ್ ನ್ಯೂಸ್

ಪೊನ್ನಿಯನ್ ಸೆಲ್ವನ್.. ಬನ್ಸಾಲಿ, ರಾಜಮೌಳಿ ಮೇಕಿಂಗ್​ನ ಮೀರಿಸೋ ರೇಂಜ್​ಗೆ ಟಾಕ್ ಆಫ್ ದಿ ಟೌನ್ ಆಗಿರೋ ಸೌತ್ ಸಿನಿಮಾ. ಸಿಂಗಲ್ ಟೀಸರ್​ನಿಂದಲೇ ವಿಶ್ವ ಸಿನಿದುನಿಯಾದಲ್ಲಿ ಸಂಚಲನ ಮೂಡಿಸಿರೋ ಈ ಹಿಸ್ಟಾರಿಕಲ್ ದೃಶ್ಯವೈಭವದ ಬಗ್ಗೆ ರಾಜಮೌಳಿ ಶಾಕಿಂಗ್ ಸ್ಟೇಟ್​ಮೆಂಟ್ ನೀಡಿದ್ದಾರೆ. ಅದೇನು ಅನ್ನೋದ್ರ ಕ್ಯೂರಿಯಾಸಿಟಿಗೆ ಉತ್ತರ ಇಲ್ಲಿದೆ. ನೀವೇ ಓದಿ.

  • ಸಿನಿಮಾದಲ್ಲಿ ಹೇಳೋದು ಕಷ್ಟ.. ಒಟಿಟಿ ಐಡಿಯಾ ಇತ್ತು
  • ಕೆಲವು ಕಥೆಗೆ ವೆಬ್ ಸೀರೀಸ್​ ಒಳ್ಳೆಯ ಪ್ಲಾಟ್​ಫಾರ್ಮ್​..!
  • ಮೌಳಿ ಕಣ್ಣಲ್ಲಿ ಹೇಗಿರುತ್ತಿತ್ತು ಗೊತ್ತಾ ಚೋಳ ಸಾಮ್ರಾಜ್ಯ..?

ಗತಕಾಲದ ಚೋಳರ ಸಾಮ್ರಾಜ್ಯದ ವೈಭವ ಮತ್ತೆ ಬೆಳ್ಳಿತೆರೆ ಮೇಲೆ ಅನಾವರಣಗೊಳ್ತಿದೆ. ಬರೋಬ್ಬರಿ 500 ಕೋಟಿಯಲ್ಲಿ ಸಿನಿ ಮಾಂತ್ರಿಕ ಮಣಿರತ್ನಂ ಡ್ರೀಮ್ ಪ್ರಾಜೆಕ್ಟ್​ ಎರಡೆರಡು ಭಾಗಗಳಲ್ಲಿ ತಯಾರಾಗ್ತಿದೆ. ಇತ್ತೀಚೆಗೆ ರಿಲೀಸ್ ಆದ ಬಹು ತಾರಾಗಣದ ಪೊನ್ನಿಯನ್ ಸೆಲ್ವನ್ ಟೀಸರ್ ಪಂಚಭಾಷೆಯಲ್ಲಿ ಸೌತ್​ನಿಂದ ಬಾಲಿವುಡ್​ವರೆಗೆ ಸದ್ದು ಮಾಡ್ತಿದೆ.

ಸಂಜಯ್ ಲೀಲಾ ಬನ್ಸಾಲಿ, ರಾಜಮೌಳಿ ನಂತ್ರ ಐತಿಹಾಸಿಕ ಕಥೆಗಳನ್ನು ಯುದ್ಧ ಸನ್ನಿವೇಶಗಳ ಸಮೇತ ನೋಡುಗರ ಕಣ್ಣಿಗೆ ಕಟ್ಟಿದಂತೆ ತೋರಿಸೋ ಮಾಂತ್ರಿಕನಾಗಿ ಮಣಿರತ್ನಂ ಕೂಡ ಮುಂಚೂಣಿಯಲ್ಲಿದ್ದಾರೆ. ಸದ್ಯ ರಿಲೀಸ್ ಆಗಿರೋ ಪೊನ್ನಿಯನ್ ಸೆಲ್ವನ್- 1ರ ಟೀಸರ್ ಪ್ರೇಕ್ಷಕರ ಕಣ್ಮನ ತಣಿಸಿದೆ. ಸಿಕ್ಕಾಪಟ್ಟೆ ಥ್ರಿಲ್ ಕೊಟ್ಟಿದೆ.

ದಕ್ಷಿಣ ಭಾರತದ ಕೆಲ ಭಾಗಗಳನ್ನು ದೀರ್ಘಕಾಲ ಆಳಿದಂತಹ ಚೋಳರ ಸಾಮ್ರಾಜ್ಯದ ಕುರಿತ ದೃಶ್ಯಚಿತ್ತಾರ ಇದಾಗಿದೆ. 9ನೇ ಶತನಮಾನದಿಂದ 13ನೇ ಶತಮಾನದವರೆಗಿನ ಆ ಮಹಾಪರ್ವ ನೂರಾರು ಯುದ್ಧ ಕದನಗಳಿಂದ ತುಂಬಿತ್ತು. ಅದನ್ನ ಆರು ನ್ಯಾಷನಲ್ ಅವಾರ್ಡ್ಸ್ ಪಡೆದಿರೋ ಮಣಿರತ್ನಂ, ತಮ್ಮ  ಡ್ರೀಮ್ ಪ್ರಾಜೆಕ್ಟ್​ನ ಬರೋಬ್ಬರಿ 500 ಕೋಟಿ ಭಾರೀ ಬಜೆಟ್​ನಲ್ಲಿ ತಯಾರಿಸಿದ್ದಾರೆ. ಅದೂ ಎರಡೆರಡು ಭಾಗಗಳಲ್ಲಿ ಅನ್ನೋದು ಇಂಟರೆಸ್ಟಿಂಗ್.

ಕನ್ನಡದಲ್ಲಿ ರಕ್ಷಿತ್ ಶೆಟ್ಟಿ, ಮಲಯಾಳಂನಲ್ಲಿ ಮೋಹನ್​ಲಾಲ್, ತೆಲುಗಿನಲ್ಲಿ ಪ್ರಿನ್ಸ್ ಮಹೇಶ್ ಬಾಬು ಹಾಗೂ ಹಿಂದಿಯಲ್ಲಿ ಬಿಗ್​ಬಿ ಅಮಿತಾಬ್ ಬಚ್ಚನ್ ಪೊನ್ನಿಯನ್ ಸೆಲ್ವನ್ ಟೀಸರ್​ನ ಬಿಡುಗಡೆ ಮಾಡಿದ್ರು. ವಿಕ್ರಮ್, ಜಯಂ ರವಿ, ಕಾರ್ತಿ, ತ್ರಿಶಾ ಹಾಗೂ ಐಶ್ವರ್ಯಾ ರೈ ಲೀಡ್​ನಲ್ಲಿದ್ದು, ಟೀಸರ್​ನ ಒಂದೊಂದು ದೃಶ್ಯ ಕೂಡ ನೋಡುಗರಿಗೆ ವ್ಹಾವ್ ಫೀಲ್ ಕೊಡ್ತಿದೆ. ದಸರಾಗೆ ಅಂದ್ರೆ ಸೆಪ್ಟೆಂಬರ್ 30ಕ್ಕೆ ಈ ಸಿನಿಮಾ ವಿಶ್ವದಾದ್ಯಂತ ತೆರೆಗಪ್ಪಳಿಸಲಿದ್ದು, ಕನ್ನಡತಿ ಐಶ್ವರ್ಯಾ ರೈ ಖದರ್ ಜೊತೆ ಹತ್ತಾರು ಸೂಪರ್ ಸ್ಟಾರ್​ಗಳ ಕತ್ತಿ ವರಸೆ, ಕುದುರೆ & ಆನೆಗಳ ಜೊತೆ ಅನಾವರಣಗೊಳ್ಳಲಿದೆ.

ಇದೆಲ್ಲವೂ ಗೊತ್ತಿರೋ ವಿಷ್ಯವೇ ಆದ್ರೂ ಸಹ, ಇಂತಹ ಮಹಾದೃಶ್ಯಕಾವ್ಯದ ಬಗ್ಗೆ ಸೆನ್ಸೇಷನಲ್ ಡೈರೆಕ್ಟರ್ ರಾಜಮೌಳಿ ಎಲ್ರೂ ಹುಬ್ಬೇರಿಸೋ ಅಂತಹ ಸ್ಟೇಟ್​ಮೆಂಟ್ ನೀಡಿದ್ದಾರೆ. ಅದೇನಪ್ಪಾ ಅಂದ್ರೆ-

  • ಮಣಿರತ್ನಂ ಚಿತ್ರಕ್ಕೆ ಮೌಳಿ ಸ್ಟೇಟ್​ಮೆಂಟ್

‘ಈ ಪೊನ್ನಿಯನ್ ಸೆಲ್ವನ್ ಕುರಿತ ಯೋಜನೆ ನನ್ನ ತಲೆಯಲ್ಲಿ ಬಹಳ ದಿನಗಳಿಂದ ಇತ್ತು. ಅದನ್ನ ಒಟಿಟಿಗೆ ಮಾಡಬೇಕು ಅಂದುಕೊಂಡಿದ್ದೆ. ಕಾರಣ ಇಂತಹ ದೊಡ್ಡ ಕಥೆಯನ್ನ ಸಿನಿಮಾವೊಂದರ ಮೂಲಕ ಸುಲಭವಾಗಿ ಹೇಳಲಾಗಲ್ಲ. ಅದೇ ನಾವು ವೆಬ್ ಸೀರೀಸ್ ಮಾಡಿದ್ರೆ 8ರಿಂದ 20 ಗಂಟೆಯಲ್ಲಿ ಆ ಕಥೆಯನ್ನ ಹೇಳಬಹುದಾಗಿತ್ತು. ಕೆಲವು ಕಥೆಗಳಿಗೆ ವೆಬ್ ಸೀರೀಸ್​ಗಳೇ ಉತ್ತಮ ವೇದಿಕೆ.’

  • ರಾಜಮೌಳಿ, ನಿರ್ದೇಶಕ

ಓ ಮೈ ಗಾಡ್.. ಮಣಿರತ್ನಂ ಅಂತಹ ಮಹಾ ಮಾಂತ್ರಿಕನ ಚಿತ್ರದ ಬಗ್ಗೆ ರಾಜಮೌಳಿ ಹೀಗೆ ಹೇಳಿಬಿಟ್ರಾ ಅಂತ ಯಾರೂ ಹುಬ್ಬೇರಿಸೋ ಹಾಗಿಲ್ಲ. ಅವ್ರ ಮಾತಲ್ಲಿ ಅರ್ಥವೂ ಇದೆ. ಇಂತಹ ಬಹುದೊಡ್ಡ ಕಥಾನಕಗಳನ್ನ ಸಿನಿಮಾ ಮೂಲಕ ಹೇಳೋದು ಕಷ್ಟಸಾಧ್ಯ. ಬಾಹುಬಲಿ, ತ್ರಿಬಲ್ ಆರ್​ನಂತಹ ಅದ್ಭುತ ಚಿತ್ರಗಳನ್ನ ಕಟ್ಟಿಕೊಟ್ಟ ಮೌಳಿ, ಇಂತಹ ಹೇಳಿಕೆ ನೀಡಿರೋದ್ರ ಹಿಂದೆ ಬಲವಾದ ಕಾರಣವೂ ಇದೆ.

ವೆಬ್ ಸೀರೀಸ್ ಮೂಲಕ ಕಥೆಯನ್ನ ನಿರೂಪಿಸೋದೇ ಆದ್ರೆ, ಅಲ್ಲಿ ಸಾಕಷ್ಟು ಡಿಟೈಲ್ಡ್ ಆಗಿ ಕ್ಯಾರೆಕ್ಟರ್​ಗಳನ್ನ ಅನಾವರಣಗೊಳಿಸಬಹುದು. ಡೈಲಾಗ್​ಗಳಿಗೆ ಸ್ಪೇಸ್ ಕೂಡ ಇರಲಿದೆ. ಅಲ್ಲದೆ, ಸಮಯದ ಅಭಾವವೂ ಇರುವುದಿಲ್ಲ. ಯುದ್ಧ ಸನ್ನಿವೇಶಗಳನ್ನ ಅತ್ಯದ್ಭುತವಾಗಿ ಕಟ್ಟಿಕೊಡೋಕೆ ಎಲ್ಲವೂ ಪೂರಕವಾಗಿರುತ್ತೆದೆ. ಅದಕ್ಕೆ ಸಿಯಾಕೆ ರಾಮ್ ಹಾಗೂ ಮಹಾಭಾರತ ಸೀರೀಸ್​ಗಳು ಬೆಸ್ಟ್ ಎಕ್ಸಾಂಪಲ್.

ಅದೇನೇ ಇರಲಿ, ರಾಜಮೌಳಿ ಮುಂದೊಂದು ದಿನ ರಾಮಾಯಣ ಅಥ್ವಾ ಮಹಾಭಾರತ ಮಾಡ್ತಾರೆ ಅನ್ನೋ ಮಾತಿತ್ತು. ಹಾಗೇನಾದ್ರು ಆಗಿದ್ದೇ ಆದಲ್ಲಿ, ಅದು ವೆಬ್ ಸೀರೀಸ್ ಆಗಿಯೇ ಮೂಡಿಬರಲಿದೆ ಅನ್ನೋದು ಇಲ್ಲಿ ಸ್ಪಷ್ಟವಾಗಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES