Monday, February 24, 2025

ಜಮೀರ್‌ ಅಹ್ಮದ್‌ಗೆ ED ಸಂಕಷ್ಟ?

ಬೆಂಗಳೂರು : ಕೆಜಿಎಫ್ ಬಾಬು ED ಇಸಿಐಆರ್‌ನಲ್ಲಿ ಜಮೀರ್ ಆಹ್ಮದ್‌ ಹೆಸರು ಪ್ರಸ್ತಾಪ ಮಾಡಿದ್ದಾರೆ ಹೀಗಾಗಿ ಕಾಂಗ್ರೆಸ್‌ ಶಾಸಕ ಜಮೀರ್‌ ಅಹ್ಮದ್‌ಗೆ ಮತ್ತೆ ED ಕಂಟಕ ಎದುರಾಗಿದೆ.

ಕೆಜಿಎಫ್ ಬಾಬು ED ಇಸಿಐಆರ್‌ನಲ್ಲಿ ಜಮೀರ್ ಆಹ್ಮದ್‌ ಹೆಸರು ಪ್ರಸ್ತಾಪ ಮಾಡಿದ್ದು, ಹಲವಾರು ಇಸಿಐಆರ್‌ಗಳಲ್ಲಿ ಮಾಹಿತಿಯನ್ನು ED ಅಧಿಕಾರಿಗಳು ಕಲೆ ಹಾಕಿದ್ದಾರೆ. ಐಎಂಎ ಪ್ರಕರಣದ ಆರೋಪಿ ಮತ್ತು ಜಮೀರ್ ಲಿಂಕ್ ಬಗ್ಗೆ ಉಲ್ಲೇಖವಾಗಿದ್ದು, ಆರೋಪಿ ಮಹಮದ್ ಮನ್ಸೂರ್ ಖಾನ್‌ನಿಂದ 63 ಕೋಟಿಯ ರಹಸ್ಯ ಬಯಲಾಗಿದೆ.

ಇನ್ನು, ಯಾವುದು ಆ 63 ಕೋಟಿ..? ಆ ಹಣವನ್ನ ಜಮೀರ್ ಏನ್ ಮಾಡಿದ್ರು? ಕೆಜಿಎಫ್ ಬಾಬುಗೆ ನೀಡಿದ ನೋಟಿಸ್‌ನಲ್ಲಿ ಮಾಹಿತಿ ಬಿಚ್ಚಿಟ್ಟ ED ಅಧಿಕಾರಿಗಳು ಮನ್ಸೂರ್ ಖಾನ್‌ನಿಂದ 63 ಕೋಟಿ ದುಡ್ಡು ಪಡೆದಿದ್ದಾರೆ. ಬ್ಯಾಂಕ್, ಕೈ ಸಾಲ ಮುಂತಾದ ಮಾರ್ಗಗಳ ಮೂಲಕ ಹಣ ಪಡೆದಿದ್ದ ಜಮೀರ್ ಈ ದುಡ್ಡು ತಮ್ಮ ಐಷಾರಾಮಿ ಜೀವನಕ್ಕೆ, ಆಸ್ರಿ ಖರೀದಿಗೆ ಬಳಸಿದ್ದಾರೆ. ಕೆಜಿಎಫ್ ಬಾಬು ಯಾರ್ಯಾರಿಗೆ ದುಡ್ಡು ಕೊಟ್ಟಿದ್ದಾರೆ ಅಂತ ಪರಿಶೀಲಿಸಿದಾಗ ಮಾಹಿತಿ ಬಹಿರಂಗವಾಗಿದ್ದು, ಕೆಜಿಎಫ್ ಬಾಬುರಿಂದಲೂ 3.5 ಕೋಟಿ ಸಾಲ ಪಡೆದಿದ್ದಾರೆ.

RELATED ARTICLES

Related Articles

TRENDING ARTICLES