Sunday, December 22, 2024

ಬಾಕ್ಸ್‌ ಆಫೀಸ್‌ನಲ್ಲಿ ‘ವಿಕ್ರಾಂತ್‌ ರೋಣ’ ಅಬ್ಬರ

ವಿಕ್ರಾಂತ್ ರೋಣ ಸಿನಿಮಾ ಮೂಲಕ ಬಾಕ್ಸಾಫೀಸ್ ರೂಲ್ ಮಾಡುತ್ತಿರೋ ಕಿಚ್ಚ ಕರ್ನಾಟದಲ್ಲಿ ನಯಾ ರೆಕಾರ್ಡ್ ಬರೆದಿದ್ದಾರೆ. ಕಿಚ್ಚನ ಕರಿಯರ್‌ನಲ್ಲಿ ಬಿಗ್ಗೆಸ್ಟ್ ಓಪನಿಂಗ್ ಪಡೆದ ಸಿನಿಮಾ ವಿಕ್ರಾಂತ್ ರೋಣ ಕರ್ನಾಟಕ ಒಂದರಲ್ಲೇ ಮೊದಲ ದಿನ 325 ಸಿಂಗಲ್ ಸ್ಕ್ರೀನ್, ಹಾಗೂ 70 ಮಲ್ಟಿಫೆಕ್ಸ್ ಸ್ಕ್ರೀನ್ಸ್ ಗಳಲ್ಲಿ‌ ಒಟ್ಟು ಸುಮಾರು 2500 ಪ್ರದರ್ಶನ ಕಂಡಿದೆ.

ಈ ಎಲ್ಲಾ ಲೆಕ್ಕಾಚಾರದ ಮೇಲೆ ಫಸ್ಟ್ ಡೇ ಕರ್ನಾಟಕ ಒಂದರಲ್ಲೇ 22 ಕೋಟಿ ಗಳಿಸಿದೆ ಅಂತ ಅಂದಾಜಿಸಲಾಗಿದೆ. ಹೊರ ರಾಜ್ಯಗಳಲ್ಲೂ ವಿಕ್ರಾಂತ್ ರೋಣನಿಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಇನ್ನು ಆಂಧ್ರ ಮತ್ತು ತೆಲಂಗಾಣದಲ್ಲಿ 350 ಸ್ಕ್ರೀನ್ ಗಳಲ್ಲಿ VR ಮೂವಿ ತೆರೆ ಕಂಡಿದ್ದು, 7-8 ಕೋಟಿ ವಹಿವಾಟು ಮಾಡಿದೆಯಂತೆ. ಹಾಗೆ ತಮಿಳಿನಲ್ಲಿ 180 ಸ್ಕ್ರೀನ್ಸ್ ಗಳಲ್ಲಿ ತೆರೆಕಂಡ ಕಿಚ್ಚನ ಈ ಸಿನಿಮಾ 2 ಕೋಟಿ ಕಲೆಕ್ಷನ್ ಮಾಡಿದ್ರೆ, ಕೇರಳದಲ್ಲಿ 110 ಸ್ಕ್ರೀನ್ ಗಳಲ್ಲಿ‌ ಪ್ರದರ್ಶನ ಕಂಡಿದ್ದು, ಇಲ್ಲೂ ಉತ್ತಮ ಓಪನಿಂಗ್ ಪಡೆದಿದೆ. ಫಸ್ಟ್ ಡೇ ಭಾರತದಾದ್ಯಂತ ವಿಕ್ರಾಂತ್ ರೋಣ ಸಿನಿಮಾ 42 ಕೋಟಿ ಗಳಿಸಿದೆ ಅಂತ ಹೇಳಲಾಗ್ತಿದೆ.

RELATED ARTICLES

Related Articles

TRENDING ARTICLES