Sunday, December 22, 2024

ಪ್ರಭುದೇವರಿಂದ ಪವರ್ ಸ್ಟಾರ್ ಡ್ಯಾನ್ಸ್ ಗುಟ್ಟು ರಿವೀಲ್

ದೊಡ್ಮನೆಯ ದೃವತಾರೆ, ಬಾಡದ ಬೆಟ್ಟದ ಹೂ ಅಪ್ಪು ವಿಶೇಷ ಪಾತ್ರದಲ್ಲಿ ನಟಿಸಿರುವ ಸಿನಿಮಾ ಲಕ್ಕಿಮ್ಯಾನ್​. ಅಭಿಮಾನಿಗಳ ಪಾಲಿಗೆ ಅಕ್ಷರಶಃ ದೇವರ ಪ್ರತಿರೂಪವಾಗಿರೋ ಅಪ್ಪು, ಈ ಸಿನಿಮಾದಲ್ಲೂ ದೇವರ ಪಾತ್ರ ನಿಭಾಯಿಸಿದ್ದಾರೆ. ಲಕ್ಕಿಮ್ಯಾನ್​​ ಚಿತ್ರದ ಮತ್ತೊಂದು ಹೈಲೈಟ್,​ ಇಂಡಿಯನ್​ ಮೈಕಲ್​ ಜಾಕ್ಸನ್​​​ ಪ್ರಭುದೇವ ಹಾಗೂ ಕರುನಾಡ ಡ್ಯಾನ್ಸ್​​​ ಕಿಂಗ್​​ ಅಪ್ಪು ಒಟ್ಟಿಗೆ ಕುಣಿದಿದ್ದಾರೆ. ಇದೀಗ ಅಪ್ಪು ಬಗ್ಗೆ ಪ್ರಭುದೇವ ಡ್ಯಾನ್ಸ್​ ಸೀಕ್ರೆಟ್​​ ರಿವೀಲ್​ ಮಾಡಿದ್ದಾರೆ. ಯೆಸ್​​​​.. ಪ್ರಭುದೇವ ಹೇಳಿದ್ದೇನು ಗೊತ್ತಾ..? ನೀವೇ ಓದಿ.

  • ಏನೇ ಅಂದ್ರೂ ನೋ ಎನ್ನದ ಪ್ಯೂರ್​ ಸೋಲ್​​ ರಾಜರತ್ನ

ದೇವತಾ ಮನುಷ್ಯ ಅಪ್ಪು ಅಗಲಿ 9 ಒಂಬತ್ತು ತಿಂಗಳಾದ್ರೂ ಅವರ ನೆನೆಪು ಮಾತ್ರ ಇಂದಿಗೂ ಅಚ್ಛ ಹಸಿರಾಗಿದೆ. ಕಣ್ಣು ಮುಚ್ಚಿದ್ರೂ, ಕಣ್​ ಬಿಟ್ರೂ ಅವರ ನಗು ಎಲ್ಲರಿಗೂ ಬಿಟ್ಟು ಬಿಡದೇ ಕಾಡ್ತಿದೆ. ಇಂದಿಗೂ ಅವರ ಸಮಾಧಿ ಬಳಿ ಸಾಗರದಂತೆ ಜನ ದೇವರ ದರ್ಶನಕ್ಕೆ ಕ್ಯೂ ನಿಲ್ತಾರೆ. ಇನ್ನೂ ಅಪ್ಪು ಅಭಿನಯದ ಸಿನಿಮಾಗಳಲ್ಲಿ ಗಂಧದಗುಡಿ, ಲಕ್ಕಿಮ್ಯಾನ್​​ ಬಾಕಿ ಉಳಿದಿವೆ. ಲಕ್ಕಿಮ್ಯಾನ್​​ ಚಿತ್ರದಲ್ಲಿ ಅಪ್ಪು ದೇವರ ಪಾತ್ರ ನಿಭಾಯಿಸಿದ್ದು, ಸಿನಿಮಾ ರಿಲೀಸ್​ಗೂ ಮುನ್ನವೇ ಇನ್ನಷ್ಟು ಹತ್ತಿರವಾಗಿದೆ.

ಲಕ್ಕಿಮ್ಯಾನ್​​ ಚಿತ್ರದ ಟೀಸರ್​ ಯ್ಯೂಟ್ಯೂಬ್​​​ ಟಾಪ್​ ಟ್ರೆಂಡಿಂಗ್​ನಲ್ಲಿದೆ. ಡಾರ್ಲಿಂಗ್​ ಕೃಷ್ಣ ಹಾಗೂ ಚಾರ್ಲಿ ಖ್ಯಾತಿಯ ಸಂಗೀತ ಶೃಂಗೇರಿ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಇನ್ನೂ ಲಕ್ಕಿಮ್ಯಾನ್​ ಚಿತ್ರದ ಸ್ಟ್ರೆಂತ್​​ ಅಂದ್ರೆ, ಅಪ್ಪು ಗೆಸ್ಟ್​​ ಅಪಿಯರೆನ್ಸ್​​​. ಪ್ರಭುದೇವ, ಅಪ್ಪು ಜುಗಲ್ಬಂದಿಯಲ್ಲಿ ಡ್ಯಾನ್ಸ್​​ ನೆಕ್ಸ್ಟ್​​ ಲೆವೆಲ್​​ನಲ್ಲಿ ಮೂಡಿ ಬಂದಿದೆ. ಟೀಸರ್​ ನೋಡಿದ ಪ್ರಭುದೇವ ಅಪ್ಪು ಬಗ್ಗೆ ಸೀಕ್ರೇಟ್ ರಿವೀಲ್​ ಮಾಡಿದ್ದು, ಅಪ್ಪು ಯಾವುದಕ್ಕೂ ನೋ ಅನ್ನಲಿಲ್ಲ. ಏನೇ ಹೇಳಿದ್ರೂ, ಐ ಯಾಮ್​ ರೆಡಿ ಅಂತಾ ಸಾಥ್​​ ಕೊಟ್ರು. ಗುಡ್​​ ಹಾರ್ಟ್​​​​​​​​ ಅಪ್ಪು ಎಂದಿದ್ದಾರೆ ಪ್ರಭುದೇವ.

  • ಟೀಸರ್​ ನೋಡಿದ ಮೇಲೆ ಪ್ರಭುದೇವ ನಿರೀಕ್ಷೆ ಡಬಲ್​
  • ಸೆಕೆಂಡ್​ ಚಾನ್ಸ್​ ಕೊಡದ ಭಗವಂತ.. ಮಿಸ್​ ಯು ಅಪ್ಪು

ತಮಿಳಿನ ಓ ಮೈ ಕಡುವುಲೇ ಚಿತ್ರದ ರಿಮೇಕ್​​ ಲಕ್ಕಿಮ್ಯಾನ್​​. ಚಿತ್ರದ ಟೀಸರ್​ ರಿಲೀಸ್​ ಆಗಿದ್ದು, ಫ್ಯಾನ್ಸ್​ ಕೂಡ ರಿಪೀಟ್​ ಮೋಡ್​ನಲ್ಲಿ ಎಂಜಾಯ್​ ಮಾಡ್ತಿದ್ದಾರೆ. ಇನ್ನೂ ಅಪ್ಪು ಕೊನೆಯ ಸಿನಿಮಾ ಅಂತಾ ತಲೆ ಮೇಲೆ ಹೊತ್ತು ಮೆರೆಯೋಕೆ ಸಜ್ಜಾಗಿದ್ದಾರೆ. ಚಿತ್ರದ ಟೀಸರ್​ ಫನ್ನಿಯಾಗಿದ್ದು, ನಿರೀಕ್ಷೆಗಳು ದುಪ್ಪಟ್ಟಾಗಿವೆ. ಪ್ರಭುದೇವ ಅವ್ರಿಗೆ ಟೀಸರ್​ ನೋಡಿದ ಮೇಲೆ ಎಗ್ಸೈಟ್​​ಮೆಂಟ್​​ ಜಾಸ್ತಿ ಆಗಿದೆ. ಲಕ್ಕಿಮ್ಯಾನ್​​ ಸೆಪ್ಟೆಂಬರ್​​​ನಲ್ಲಿ ರಿಲೀಸ್​ ಆಗ್ತಿದೆ. ನಾನು ಕೂಡ ಸಖತ್​​ ವೆಯ್ಟ್​ ಮಾಡ್ತಾ ಇದೀನಿ ಎಂದಿದ್ದಾರೆ.

ಜಾನಿ ಮಾಸ್ಟರ್​​​ ನೃತ್ಯ ನಿರ್ದೇಶನದಲ್ಲಿ ಅಪ್ಪು, ಪ್ರಭುದೇವ ಕಾಂಬಿನೇಷನ್​​ನಲ್ಲಿ ಒಂದು ಸಾಂಗ್​ ಇದೆ. ಈಗಾಗ್ಲೇ ಈ ಹಾಡಿನ ಸಣ್ಣ ತುಣುಕುಗಳು ಮಿಲಿಯನ್​ಗಟ್ಟಲೆ ವೀವ್ಸ್​ ಗಳಿಸಿ ದಾಖಲೆ ಬರೆದಿದೆ. ಇಬ್ಬರೂ ಜಿದ್ದಿಗೆ ಬಿದ್ದವರಂತೆ ಮೈಮರೆತು ಕುಣಿದಿದ್ದಾರೆ. ಸಿನಿಮಾದಲ್ಲಿ ಅಪ್ಪು ಡಾರ್ಲಿಂಗ್​ ಕೃಷ್ಣ, ಸಂಗೀತಾ ಜೋಡಿಗೆ ಇನ್ನೊಂದು ಚಾನ್ಸ್​ ಕೊಡ್ತೀನಿ ಅಂತಾ ಷರತ್ತು ಹಾಕುತ್ತಾರೆ. ಫ್ಯಾನ್ಸ್​​​​​ ಮಾತ್ರ, ಅಪ್ಪು ನಿಮಗೆ ಮಾತ್ರ ಆ ದೇವರು ಸೆಕೆಂಡ್​​ ಚಾನ್ಸ್​ ಕೊಡಲಿಲ್ಲ ಅಂತಾ ಎಮೋಷನಲ್​ ಆಗಿದ್ದಾರೆ.

ಲಕ್ಕಿಮ್ಯಾನ್​ ಚಿತ್ರದಲ್ಲಿ ರೋಷನಿ, ಸಾಧುಕೋಕಿಲ,ರಂಗಾಯಣ ರಘು, ಸುಧಾ ಬೆಳವಾಡಿ, ನಾಗಭೂಷಣ್​​ ಸೇರಿದಂತೆ ಮುಂತಾದ ಕಲಾವಿದರು ಅಭಿನಯವಿದೆ. ಸುಂದರ ಕಾಮರಾಜ್​​ ನಿರ್ಮಾಣದಲ್ಲಿ ಸಿನಿಮಾ ರಿಚ್​ ಆಗಿ ಮೂಡಿ ಬಂದಿದೆ. ಎಸ್​​​.ನಾಗೇಂದ್ರ ಪ್ರಸಾದ್​​ ಸಿನಿಮಾ ನಿರ್ದೇಶನ ಮಾಡಿದ್ದಾರೆ.  ಜೀವ ಶಂಕರ ಕ್ಯಾಮೆರಾ ಕಣ್ಣಲ್ಲಿ ಸಿನಿಮಾ ಅದ್ಭುತವಾಗಿ ಮೂಡಿ ಬಂದಿದೆಯಂತೆ. ಎನಿವೇ, ಸಿನಿಮಾ ಮೇಲೆ ಪ್ರಭುದೇವ ಅವ್ರಿಗೂ ಕಾತರ ಹೆಚ್ಚಾಗಿರೋದ್ರಿಂದ ಪ್ರೇಕ್ಷಕರಿಗೂ ನಿರೀಕ್ಷೆಗಳು ದುಪ್ಪಾಟ್ಟಾಗಿವೆ. ಅಪ್ಪು ಅವರನ್ನು ದೇವರ ರೂಪದಲ್ಲಿ ಕಣ್ತುಂಬಿಕೊಳ್ಳೋಕೆ ಸೆಪ್ಟೆಂಬರ್​ವರೆಗೂ ಕಾಯಲೇಬೇಕು.

ರಾಕೇಶ್​ ಆರುಂಡಿ,, ಫಿಲ್ಮ್​​ ಬ್ಯೂರೋ, ಪವರ್ ಟಿವಿ

 

RELATED ARTICLES

Related Articles

TRENDING ARTICLES